ಮಡಿಕೇರಿ, ಜು. ೨೭: ಪೆರಾಜೆಯಲ್ಲಿ ಕೊಡಗು ರಕ್ಷಣಾ ವೇದಿಕೆಯ ನೂತನ ಘಟಕವನ್ನು ರಚಿಸಲಾಗಿದ್ದು, ಅಧ್ಯಕ್ಷರಾಗಿ ಪ್ರದೀಪ್ ಪೆರಾಜೆ ಆಯ್ಕೆಯಾಗಿದ್ದಾರೆ ಎಂದು ವೇದಿಕೆಯ ಜಿಲ್ಲಾಧ್ಯಕ್ಷ ಪವನ್ ಪೆಮ್ಮಯ್ಯ ತಿಳಿಸಿದ್ದಾರೆ.

ಉಪಾಧ್ಯಕ್ಷರಾಗಿ ಪಿ.ಪಿ. ಹರೀಶ್, ಕಾರ್ಯದರ್ಶಿ ಪಿ.ಕೆ. ಯುವಾನಂದ, ಖಜಾಂಚಿ ಪಿ.ಪಿ. ಯತೀಶ್, ಗೌರವ ಸಲಹೆಗಾರರುಗಳಾಗಿ ಸುರೇಶ್ ಪೆರುಮುಂಡ, ಸೀತಾರಾಮ ಕದಿಕಡ್ಕ, ನಿರ್ದೇಶಕರಾಗಿ ಪಿ.ಬಿ. ಚಂದ್ರ, ಎ.ಎಸ್. ರೋಹಿತ್, ಪಿ.ಬಿ. ಅರುಣ, ಪ್ರೇಮಚಂದ್ರ, ವಿನಯ, ಸಂತೋಷ್, ಕಿಶೋರ್ ನೇಮಕಗೊಂಡಿದ್ದಾರೆ.