ಗೋಣಿಕೊಪ್ಪಲು, ಜು. ೨೭: ರೈತರ ಕಾಫಿ ತೋಟದಲ್ಲಿ ಸಿಗುವ ಬಾಳೆ, ತೆಂಗು, ಅಡಿಕೆ ಸೇರಿದಂತೆ ಬಗೆಬಗೆಯ ಆಹಾರದ ರುಚಿಯನ್ನು ಕಂಡುಕೊAಡಿರುವ ಕಾಡಾನೆಗಳು ಅರಣ್ಯ ಪ್ರದೇಶಕ್ಕೆ ತೆರಳಿದರೂ ಮತ್ತೆ ರೈತರ ತೋಟದತ್ತ ಮುಖಮಾಡಿವೆ.
ಇದರಿಂದಾಗಿ ಇದೀಗ ಕಾಡಾನೆಗಳ ಉಪಟಳ ತಾಳಲಾರದೆ ದಕ್ಷಿಣ ಕೊಡಗಿನ ಕುರ್ಚಿ, ಬೀರುಗ, ನೆಮ್ಮಲೆ, ಕಾಕೂರು, ಶ್ರೀಮಂಗಲ, ಮಂಚಳ್ಳಿ ಹಾಗೂ ತೈಲ ಗ್ರಾಮದ ರೈತರು ಕಾಡಾನೆಗಳ ಹಿಂಡಿನಿAದ ತಮ್ಮ ಕಾಫಿ ತೋಟದಲ್ಲಿರುವ ಫಸಲನ್ನು ಕಳೆದುಕೊಳ್ಳುವುದಲ್ಲದೇ, ಕಾಫಿ ತೋಟದಲ್ಲಿ ಕೆಲಸ ನಿರ್ವಹಿಸಲು ಕಷ್ಟಪಡುತ್ತಿದ್ದಾರೆ. ಅಲ್ಲದೆ ಪ್ರಾಣವನ್ನೇ ಪಣವಾಗಿಟ್ಟು ತಮ್ಮ ಕಾಫಿ ತೋಟಕ್ಕೆ ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆದ ಐದು ದಿನಗಳ ಹಿಂದೆ ಈ ಪ್ರದೇಶದ ಕಾಫಿ ತೋಟದಲ್ಲಿ ನೆಲೆನಿಂತಿದ್ದ ಕಾಡಾನೆಗಳ ಹಿಂಡನ್ನು ಶ್ರೀಮಂಗಲ ವಲಯ ಅರಣ್ಯಾಧಿಕಾರಿ ಗಳಾದ ವೀರೇಂದ್ರ ಸಮ್ಮುಖದಲ್ಲಿ ಇಲಾಖೆಯ ಇಪ್ಪತ್ತಕ್ಕೂ ಅಧಿಕ ಸಿಬ್ಬಂದಿಗಳು ದಿನವಿಡೀ ಶ್ರಮಪಟ್ಟು ಕಾಡಾನೆಗಳ ಹಿಂಡನ್ನು ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆ ಮಾಡಿದ್ದರು.
ಇದೀಗ ಮತ್ತೆ ಕಾಡಾನೆಗಳು ಅರಣ್ಯ ಪ್ರದೇಶದಿಂದ ರೈತರ ಕಾಫಿ ತೋಟದತ್ತ ಮುಖಮಾಡಿವೆ.
ಸುತ್ತಮುತ್ತಲಿನ ಪ್ರದೇಶಗಳ ಬೆಟ್ಟ ಸಾಲುಗಳ ಅಡಿಯಲ್ಲಿ ಕಂಡು ಬರುವ ರೈತರ ಕಾಫಿ ತೋಟದಲ್ಲಿ ಕಾಡಾನೆಗಳು ನೆಲೆ ನಿಂತಿರುವ ಹಿನ್ನೆಲೆ ಇವುಗಳನ್ನು ಒಂದು ಬದಿಯಿಂದ ಇನ್ನೊಂದು ಬದಿಗೆ ಅಟ್ಟಲು ಅರಣ್ಯ ಇಲಾಖೆಯ ಸಿಬ್ಬಂದಿಗಳು ಶ್ರಮಪಟ್ಟರು, ಗುಂಪುಗಳಿAದ ಬೇರೆ, ಬೇರೆಯಾಗುವ ಕಾಡಾನೆಗಳು ವಿವಿಧ ದಿಕ್ಕಿನಲ್ಲಿ ಸಂಚಾರ ಮಾಡಿ ಅರಣ್ಯ ಸಿಬ್ಬಂದಿಗಳ ಕಣ್ಣಿಗೆ ಸಿಗದೇ ಚಳ್ಳೆ ಹಣ್ಣು ತಿನ್ನಿಸುತ್ತಿವೆ.
ಕಾಫಿ ತೋಟದಲ್ಲಿ ನೆಲೆ ನಿಂತಿರುವ ಕಾಡಾನೆಗಳ ಹಿಂಡನ್ನು ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆಗೆ ಕನಿಷ್ಟ ೫೦ ಸಿಬ್ಬಂದಿಗಳು, ಆರ್.ಆರ್.ಟಿ. ತಂಡಗಳು ಬೇಕಾಗಿವೆ. ಏಕ ಸಮಯದಲ್ಲಿ ವಿವಿಧ ತಂಡಗಳು ಕಾಡಾನೆಗಳ ಕಾರ್ಯಾಚರಣೆ ಕೈಗೆತ್ತಿಕೊಳ್ಳಬೇಕಾಗಿದೆ. ಅನುಭವಿ ಸಿಬ್ಬಂದಿಗಳಿಗೆ ಬಂದೂಕುಗಳನ್ನು ನೀಡುವ ಮೂಲಕ ಧೈರ್ಯ ಗುಂದದೇ ಆನೆಗಳನ್ನು ಓಡಿಸುವ ಪ್ರಯತ್ನ ಮಾಡಬೇಕು ಸ್ಥಳೀಯ ಜನರ ಸಹಕಾರ ಪಡೆದು ಕಾರ್ಯಾಚರಣೆ ಕೈಗೊಂಡರೆ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಬಹುದಾಗಿದೆ ಎಂದು ಸ್ಥಳೀಯ ರೈತ ಮುಖಂಡ ಅಜ್ಜಮಾಡ ಚಂಗಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅರಣ್ಯಕ್ಕೆ ಅಟ್ಟಿದ್ದ ಕಾಡಾನೆಗಳ ಪೈಕಿ ಕೆಲವು ಆನೆಗಳು ಮತ್ತೆ ಸ್ಥಳೀಯ ಕಾಫಿ ತೋಟದಲ್ಲಿ ಕಾಣಿಸಿಕೊಂಡಿವೆ. ಕೆಲ ದಿನಗಳಲ್ಲಿ ಗ್ರಾಮಸ್ಥರ ಸಹಕಾರ ಪಡೆದು ಒಟ್ಟಾಗಿ ಕಾರ್ಯಾಚರಣೆ ನಡೆಸುವ ಮೂಲಕ ಕಾರ್ಯಾಚರಣೆ ಆರಂಭ ಮಾಡಲಿದ್ದೇವೆ ಎಂದು ಆರ್.ಎಫ್.ಓ. ವೀರೇಂದ್ರ ಮಾಹಿತಿ ನೀಡಿದರು.