ಚೆಯ್ಯಂಡಾಣೆ, ಜು. ೨೭: ಎಸ್.ಕೆ.ಎಸ್.ಎಸ್.ಎಫ್. ಇದರ ಎಡಪಾಲ ಘಟಕದ ಅಧೀನದ ವಿಖಾಯ ತಂಡದ ಆಶ್ರಯದಲ್ಲಿ ಪ್ರಸಕ್ತ ಸಾಲಿನ ಮಹಾಮಳೆಯಿಂದ ಗ್ರಾಮದಲ್ಲಿ ಗುಡ್ಡ ಕುಸಿದು ವಾಹನ ಸಂಚಾರಕ್ಕೆ ತೊಡಕಾಗಿದ್ದನ್ನು ಮನಗಂಡು ಕಾರ್ಯಕರ್ತರ ಸಹಕಾರದೊಂದಿಗೆ ರಾಶಿ ಬಿದ್ದಿರುವ ಮಣ್ಣನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಈ ಸಂದರ್ಭ ಘಟಕದ ಪದಾಧಿಕಾರಿ ಗಳಾದ ಹನೀಫ, ಯಾಸೀನ್, ಅಸ್ಲಮ್, ಮುನೀರ್ ಉಪಸ್ಥಿತರಿದ್ದರು.