ಶನಿವಾರಸಂತೆ, ಜು. ೨೬: ಸೋಮವಾರಪೇಟೆ ಹೋಬಳಿ ಭುವಂಗಾಲ ಗ್ರಾಮದ ದಿವಂಗತ ಕೆ.ಕೆ.ಸೋಮಯ್ಯನವರ ಮೂರು ಎಕರೆ ಜಮೀನಿನಲ್ಲಿ ಮತ್ತು ಕೋಚನ ಕಾರ್ಯಪ್ಪ ಅವರ ನಾಲ್ಕು ಎಕರೆ ಜಮೀನಿನ ಮಧ್ಯಭಾಗದಲ್ಲಿ ದೊಡ್ಡಳ್ಳಿ ಕೆರೆಯಿಂದ ಬರುವ ನಾಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ವತಿಯಿಂದ ಮಾಡಿರುವ ಕಾಂಕ್ರೀಟ್ ನಾಲೆಯು ಕಳಪೆ ಕಾಮಗಾರಿಯಿಂದ ಒಡೆದು ಹೋಗಿದ್ದು ಇಲ್ಲಿ ಬೆಳೆದಿರುವ ಜೋಳ ಮತ್ತು ಶುಂಠಿ ಸಂಪೂರ್ಣ ನಾಶವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸಂಬAಧಪಟ್ಟ ಇಲಾಖೆಯವರಿಗೆ ದೂರವಾಣಿ ಕರೆ ಮಾಡಿದರೂ ಕರೆಗಳನ್ನು ಸ್ವೀಕರಿಸುತ್ತಿಲ್ಲ. ಆದರಿಂದ ಈ ಕಾಮಗಾರಿಯನ್ನು ಪೂರ್ಣಗೊಳಿಸಿ, ಬೆಳೆ ನಷ್ಟದ ಪರಿಹಾರವನ್ನು ಕೊಡಬೇಕಾಗಿ ಭುವಂಗಾಲ ಗ್ರಾಮಸ್ಥರು ಆಗ್ರಹಿಸಿದ್ದಾರೆ.