ಮಡಿಕೇರಿ, ಜು. ೨೬: ಗಾಳಿಬೀಡು ನಿವಾಸಿ ವಾಸು ಹೆಚ್.ಕೆ. (೭೦) ಅವರು ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಧನಸಹಾಯ ನೀಡುವಂತೆ ಕುಟುಂಬದವರು ಕೋರಿಕೊಂಡಿದ್ದಾರೆ. ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಈಗಾಗಲೇ ರೂ. ೪ ಲಕ್ಷಕ್ಕಿಂತ ಅಧಿಕ ಹಣ ಖರ್ಚುಗಿದ್ದು, ಇನ್ನಷ್ಟೂ ಹೆಚ್ಚು ಹಣದ ಅಗತ್ಯವಿದೆ. ಕುಟುಂಬದವರು ಆರ್ಥಿಕವಾಗಿ ಕುಗ್ಗಿದ್ದು, ಸಹಾಯ ನೀಡುವಂತೆ ಪತ್ರಿಕೆಯ ಮೂಲಕ ಕೋರಿಕೊಂಡಿದ್ದಾರೆ. ಧನಸಹಾಯ ಮಾಡಲು ಬಯಸುವವರು ಬ್ಯಾಂಕ್ ಖಾತೆಗೆ ಹಣ ಸಂದಾಯ ಮಾಡಬಹುದಾಗಿದೆ.
ಖಾತೆ ವಿವರ: ಖಾತೆ ಸಂಖ್ಯೆ - ೦೫೧೭೧೦೧೦೪೦೯೧೦
ಖಾತೆ ಹೆಸರು - ರತ್ನಾ ಹೆಚ್.ವಿ., IಈSಅ ಸಂಖ್ಯೆ - ಅಓಖಃ೦೦೦೦೫೧೭, ಕೆನರಾ ಬ್ಯಾಂಕ್, ಮಡಿಕೇರಿ ಶಾಖೆ.