ವೀರಾಜಪೇಟೆ, ಜು. ೨೭: ಬೆಂಗಳೂರಿನ ನೃತ್ಯ ನಿರಂತರ ಟ್ರಸ್ಟ್ ವತಿಯಿಂದ ಆನ್‌ಲೈನ್ ಮೂಲಕ ನಡೆಸಲಾದ ಅಂರ‍್ರಾಷ್ಟಿçÃಯ ನೃತ್ಯ ಸ್ಪರ್ಧೆಯಲ್ಲಿ ಬಿ.ಎನ್. ಲಾವಣ್ಯ ಸ್ಟಾರ್ ಆಫ್ ಡ್ಯಾನ್ಸ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ವೀರಾಜಪೇಟೆಯ ಬೇಟೋಳಿ ಗ್ರಾಮದ ಬಿ.ಜಿ.ನಟರಾಜ್ ಮತ್ತು ಸುನಂದ ದಂಪತಿಯ ಪುತ್ರಿಯಾಗಿರುವ ಲಾವಣ್ಯ ಸಂತ ಅನ್ನಮ್ಮ ಶಾಲೆಯಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ. ಪ್ರಸ್ತುತ ಇವರು ವೀರಾಜಪೇಟೆಯ ನಾಟ್ಯ ಮಯೂರಿ ನೃತ್ಯ ಶಾಲೆಯ ವಿದುಷಿ ಪ್ರೇಮಾಂಜಲಿ ಆಚಾರ್ಯ ಅವರ ಬಳಿ ನೃತ್ಯ ಅಭ್ಯಾಸ ಮಾಡುತ್ತಿದ್ದಾರೆ.