ಕರ್ನಾಟಕ ರಾಜ್ಯ ಚುನಾವಣಾ ಆಯೋಗ ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಸ್ಥಳೀಯ ಮೀಸಲಾತಿ ಕರಡು ಅಧಿಸೂಚನೆ ಹೊರಬೀಳುತ್ತಿದ್ದಂತೆ, ಸ್ಥಳೀಯ ರಾಜಕೀಯ ಪ್ರಕ್ರಿಯೆಗಳು ಚುರುಕುಗೊಳ್ಳ ಲಾರಂಭಿಸಿವೆ. ಕೊಡಗಿನಲ್ಲೂ ಕೂಡ ರಾಜಕೀಯ ಚಟುವಟಿಕೆಗಳು ಪ್ರಾರಂಭವಾಗಿದ್ದು, ರಾಜಕೀಯ ಪಕ್ಷದ ಆಕಾಂಕ್ಷಿಗಳು ತಮ್ಮ ತಮ್ಮ ಲಾಭಿ ಪ್ರಾರಂಭಿಸಿದ್ದಾರೆ. ಒಂದೆಡೆ ಮೀಸಲಾತಿ ಬಗ್ಗೆ ಅಸಮಾಧಾನದ ಕೂಗು, ಇನ್ನೊಂದೆಡೆ ರಾಜಕೀಯ ಪಕ್ಷಗಳಲ್ಲಿ ಪಕ್ಷಾಂತರಿಗಳಿಗೆ ಟಿಕೆಟ್ ಕೊಡುತ್ತಾರೆ ಎಂಬ ಆತಂಕ. ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯ ಹಿನ್ನೆಲೆಯಲ್ಲಿ ತಮ್ಮ ವೈಯಕ್ತಿಕ ಹಿತಾಸಕ್ತಿಯಿಂದಾಗಿ ರಾಜಕೀಯ ಪಕ್ಷ ಬದಲಾಯಿಸುವುದು, ಆಯಾ ಪಕ್ಷದ ನಿಷ್ಠಾವಂತ ಕಾರ್ಯಕರ್ತರಲ್ಲಿ ಅಸಮಾಧಾನ ಮೂಡಿಸುತ್ತದೆ. ಈಗಲೂ ಅದೇ ನಡೆಯುತ್ತಿದೆ.

ತಾಲೂಕು ಪಂಚಾಯತ್ ಹಾಗು ಜಿಲ್ಲಾ ಪಂಚಾಯತ್‌ಗಳ ಮೀಸಲಾತಿ ಯನ್ನು ‘‘ಕರ್ನಾಟಕ ಗ್ರಾಮ ಸ್ವರಾಜ್ಯ ಹಾಗೂ ಪಂಚಾಯತ್ ರಾಜ್ ೧೯೯೩ ಅಧಿನಿಯಮದಡಿಯಲ್ಲಿ ಪ್ರಕರಣ ೧೨೩, ೧೬೧, ೧೬೨ ,೧೬೩ ಹಾಗೂ ಸಂವಿಧಾನದ ಆರ್ಟಿಕಲ್ ೨೪೩ ಆ ಪ್ರಕಾರ ನಿರ್ಧರಿಸಲಾಗುತ್ತದೆ. ಈ ಮೇಲೆ ಉಲ್ಲೇಖಿಸಿರುವ ಸೆಕ್ಷನ್‌ಗಳ ಅನ್ವಯ ಐದು ಪ್ರಕಾರದ ಮೀಸಲಾತಿ ಗಳನ್ನು ಒಳಗೊಂಡಿರುತ್ತದೆ (೧) ಮಹಿಳೆ.(೨) ಪರಿಶಿಷ್ಟ ಪಂಗಡ . (೩) ಪರಿಶಿಷ್ಟ ಜಾತಿ. (೪) ಹಿಂದುಳಿದವರ್ಗ ಪ್ರವರ್ಗ (ಆ) ಹಾಗೂ (೫) ಹಿಂದುಳಿದವರ್ಗ ಪ್ರವರ್ಗ (ಬಿ). ಪರಿಶಿಷ್ಟ ಪಂಗಡ ಹಾಗೂ ಪರಿಶಿಷ್ಟ ಜಾತಿಯ ಮೀಸಲಾತಿಯ ಪ್ರಮಾಣವನ್ನು ಆಯಾ ಜಿಲ್ಲೆಯ ಪರಿಶಿಷ್ಟ ಪಂಗಡ ಹಾಗೂ ಪರಿಶಿಷ್ಟ ಜಾತಿಯ ಶೇಕಡಾವಾರು ಜನಸಂಖ್ಯೆಗೆ (Peಡಿಛಿeಟಿಣಚಿge oಜಿ Sಅ & Sಖಿ Poಠಿuಟಚಿಣioಟಿ) ಅನುಸಾರವಾಗಿ ನಿರ್ಧರಿಸಲಾಗುತ್ತದೆ. ಶೇಕಡಾ ೩೩ ಮೀಸಲಾತಿಯನ್ನು ಹಿಂದುಳುದ ವರ್ಗದವರಿಗೆ ಮೀಸಲಾಗಿದ್ದು, ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿಯ ಹಾಗೂ ಹಿಂದುಳಿದ ವರ್ಗದ ಮೀಸಲಾತಿ ಶೇ. ೫೦ ಮೀರಬಾರದು . ಹಾಗಾಗಿ ಪರಿಶಿಷ್ಟ ಪಂಗಡ ಹಾಗೂ ಪರಿಶಿಷ್ಟ ಜಾತಿಗಳಿಗೆ ಮೀಸಲಾತಿ ನೀಡಿದ ನಂತರ ಶೇ. ೫೦ ರಲ್ಲಿ ಉಳಿದ ಮೀಸಲಾತಿಯನ್ನು ಶೇ. ೩೩. ಮೀರದಂತೆ (ಔಃಅ ಖeseಡಿvಚಿಣioಟಿ shouಟಜ ಟಿoಣ exಛಿeeಜ ೩೩) ಹಿಂದುಳಿದ ವರ್ಗದವರಿಗೆ ನೀಡಲಾಗವುದು . ಈ ಎಲ್ಲ ಮೀಸಲಾತಿಗಳನ್ನು ಒಳಗೊಂಡAತೆ ಶೇ ೫೦ ಮೀಸಲಾತಿಯನ್ನು ಮಹಿಳೆಯರಿಗೆ ನೀಡಲಾಗು ವುದು (ಊoಡಿizoಟಿಣಚಿಟ ಖeseಡಿvಚಿಣioಟಿ ).

ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಮೀಸಲಾತಿಯನ್ನು ಚುನಾವಣಾ ಆಯೋಗವು ಅಧಿನಿಯಮದ ಅನುಸಾರ ನಿರ್ಧರಿಸುತ್ತದೆ . ಅಧಿನಿಯಮದ ಪ್ರಕಾರ ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿ ಹಾಗೂ ಮಹಿಳೆಯರ ಹೆಚ್ಚು ಜನಸಂಖ್ಯೆ ಇರುವ ಕ್ಷೇತ್ರಗಳನ್ನು ಪಟ್ಟಿ ಮಾಡಿ ಆವರ್ತದ (ಖoಣಚಿಣioಟಿ) ಆದರದ ಮೇಲೆ ಮೀಸಲಾತಿ ನೀಡಲಾಗವುದು. ಕ್ಷೇತ್ರದ ಪುನರ್ವಿಂಗಡಣೆ ಆದಲ್ಲಿ ಆಯಾ ಕ್ಷೇತ್ರದ ದೊಡ್ಡ ಪ್ರದೇಶದ ಹಿಂದಿನ ಮೀಸಲಾತಿಯನ್ನು ಪರಿಗಣಿಸಲಾಗವುದು. ವಿವಿಧ ಕ್ಷೇತ್ರಗಳ ಸಣ್ಣ-ಸಣ್ಣ ಪ್ರದೇಶಗಳನ್ನು ಸೇರಿಸಿ ಪುನಾರಚಿಸಿದ ಕ್ಷೇತ್ರವನ್ನು ಹೊಸ ಮೀಸಲಾತಿಯೊಂದಿಗೆ ಹೊಸ ಕ್ಷೇತ್ರ ಎಂದು ಪರಿಗಣಿಸಲಾಗುವುದು.

ಕೊಡಗಿನಲ್ಲಿ ಎರಡು ಹೊಸ ತಾಲೂಕು ರಚನೆಯ ಹಿನ್ನೆಲೆಯಲ್ಲಿ ಕೊಡಗಿನ ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಕ್ಷೇತ್ರಗಳನ್ನು ಪುನರ್ವಿಂಗಡಿಸಲಾಯಿತು. ಪುನರ್ವಿಂಗಡನೆಯ ನಂತರ ಜಿಲ್ಲೆಯಲ್ಲಿ ೨೯ ಜಿಲ್ಲಾ ಪಂಚಾಯತ್ ಕ್ಷೇತ್ರ ಹಾಗೂ ೫೨ ತಾಲೂಕು ಪಂಚಾಯತ್ ಕ್ಷೇತ್ರಗಳನ್ನು ರಚಿಸಲಾಯಿತು.

ಮುಂದಿನ ಚುನಾವಣೆಯ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಸ್ತುತ ಡೆಮೊಗ್ರಫಿಯನ್ನು ಸಂಕ್ಷಿಪ್ತವಾಗಿ ವಿಶ್ಲೇಷಣೆ ಮಾಡೋಣ .ಜಿಲ್ಲೆಯ ಹಾಲಿ ಜನಸಂಖ್ಯೆ ೫,೯೬,೭೧೮ (೨೦೧೯ರ ವಿಶೇಷ ಗುರುತಿನ ಪ್ರಾಧಿಕಾರ ಅಂಕಿ ಅಂಶಗಳ ಪ್ರಕಾರ) ಅದರಲ್ಲಿ ೪,೧೯,೫೫೦ ಮತದಾರರಿದ್ದಾರೆ . ಒಟ್ಟು ಜನಸಂಖ್ಯೆಯಲ್ಲಿ ೮೭,೨೭೪ ಮುಸ್ಲಿಂ ( ಶೇ. ೧೫.೭೪) , ೧೭,೧೩೦ ಕ್ರಿಶ್ಚಿಯನ್ (ಶೇ. ೩.೦೯) ಹಾಗೂ ೪,೪೮,೯೮೬ ಹಿಂದೂ (ಶೇ. ೮೦.೯೭) ಗಳಿದ್ದಾರೆ .

ಶೇ. ೮೦.೯೭ ಹಿಂದೂ ಸಮುದಾಯದಲ್ಲಿ ೭೩,೫೮೪ ಪರಿಶಿಷ್ಟ ಜಾತಿಯವರು (ಶೇ. ೧೩.೨೭) ಮತ್ತು ೫೮,೦೫೪ (ಶೇ. ೧೦.೪೭) ಪರಿಶಿಷ್ಟ ಪಂಗಡದವರು ಇದ್ದರೆ, ಹಿಂದುಳಿದ ಕೊಡವ ಭಾಷಿಗ ಸಮುದಾಯ ಗಳನ್ನು ಒಳಗೊಂಡAತೆ ಶೇ. ೩೬ ಹಿಂದುಳಿದವರಿದ್ದಾರೆ. ರಾಜಕೀಯ ಪಕ್ಷಗಳು ಪ್ರಬಲ ಸಮುದಾಯಗಳ ಮತಗಳತ್ತ ಗಮನಹರಿಸುತ್ತಿದ್ದು, ದೊಡ್ಡ ಪ್ರಮಾಣದ ಹಿಂದುಳಿದ ಮತಗಳನ್ನು ಪರಿಗಣಿಸುತ್ತಿಲ್ಲ . ಇತ್ತೀಚಿನ ದಿನಗಳಲ್ಲಿ ಕೊಡಗಿನ ಹಲವು ಅಳಿವಿನಂಚಿನಲ್ಲಿರುವ ಹಿಂದುಳಿದ ಸಮುದಾಯಗಳು ಧ್ರುವೀಕರಿಸುತ್ತಿದ್ದು, ಮುಂದಿನ ರಾಜಕೀಯ ಲೆಕ್ಕಾಚಾರ ಬದಲಾಗಬಹುದು.

ಹಿಂದುಳಿದ ಹಾಗೂ ಪರಿಶಿಷ್ಟ ವರ್ಗದವರಿಗೆ ಸಮಾನಾಂತರ ಹಾಗೂ ಲಂಭಾAತರ ಮೀಸಲಾತಿ ನೀಡಿದ್ದರೂ ರಾಜಕೀಯವಾಗಿ ಬೆಳೆಯಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಾರಣ ಅಳಿವಿನಂಚಿನಲ್ಲಿರುವ ಹಿಂದುಳಿದ ಹಾಗೂ ಪರಿಶಿಷ್ಟ ಸಮುದಾಯಗಳನ್ನು ಎಲ್ಲರನ್ನೂ ಒಳಗೊಳ್ಳುವ ಸಹಭಾಗಿತ್ವ ರಾಜಕಾರಣದಿಂದ ದೂರ ಇಟ್ಟಿರುವುದು. ಮೀಸಲಾತಿಯ ಹೊಸ ಚರ್ಚೆ ರಾಜಕಾರಣದ ಹೊಸ ಅಧ್ಯಾಯ ಬರೆಯಬಹುದು ಎಂಬ ನಿರೀಕ್ಷೆ ಹುಟ್ಟಿಸಿದೆ.

-ಪ್ರಶಾಂತ್ ಭೀಮಯ್ಯ ಸಿಂಡಿಕೇಟ್ ಸದಸ್ಯ,

ಕನ್ನಡ ವಿಶ್ವವಿದ್ಯಾಲಯ, ಹಂಪಿ