ಮಡಿಕೇರಿ, ಜು. ೨೫: ಜುಲೈ ೧೪ ಮತ್ತು ೧೫ ರಂದು ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗಿದ್ದು, ಧಾರಾಕಾರ ಮಳೆಯಿಂದ ಒಬ್ಬರು ಮೃತಪಟ್ಟಿದ್ದು, ೪ ವನ್ಯಜೀವಿಗಳ ಪ್ರಾಣಹಾನಿ ಯಾಗಿದೆ, ೨ ಮನೆಗಳು ಸಂಪೂರ್ಣ ನಾಶವಾಗಿದ್ದು, ೩೬ ಮನೆಗಳು ಭಾಗಶಃ ಹಾನಿಯಾಗಿವೆ. ಒಟ್ಟು ೩೮ ಮನೆಗಳು ಹಾನಿಗೊಳಗಾಗಿದೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಮಾಹಿತಿ ನೀಡಿದರು.
ಮುಂಗಾರು ಎದುರಿಸುವ ನಿಟ್ಟಿನಲ್ಲಿ ಇದುವರೆಗೆ ಕೈಗೊಳ್ಳಲಾಗಿ ರುವ ಮುನ್ನೆಚ್ಚರಿಕಾ ಕ್ರಮಗಳು ಹಾಗೂ ಕಳೆದ ೧೦ ದಿನಗಳಿಂದ ಬಿದ್ದ ಮಳೆಯಿಂದ ಉಂಟಾದ ಹಾನಿಯ ಬಗ್ಗೆ ಜಿಲ್ಲಾಧಿಕಾರಿ ಅವರಿಂದ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಂಗಳವಾರ ಮಾಹಿತಿ ಪಡೆದರು.
ಪ್ರಸಕ್ತ ಸಾಲಿನ ಜುಲೈ ತಿಂಗಳಿನಲ್ಲಿ ಮಳೆಯ ಪ್ರಮಾಣ ಶೇಕಡವಾರು ಹೆಚ್ಚಾಗಿದ್ದು, ಕರಾವಳಿ ಮತ್ತು ಮಲೆನಾಡು ಪ್ರದೇಶದಲ್ಲಿ ಕಳೆದ ಒಂದು ವಾರದಲ್ಲಿ ಹೆಚ್ಚಿನ ಮಳೆಯಾಗಿದೆ. ಮುಂದಿನ ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ಸಾಧಾರಣಕ್ಕಿಂತ ಅಧಿಕ ಮಳೆಯಾಗುವ ಸಾಧÀ್ಯತೆ ಹೆಚ್ಚಿದೆ. ಆ ದಿಸೆಯಲ್ಲಿ ಪ್ರಾಕೃತಿಕ ವಿಕೋಪದ ಮುನ್ಸೂಚನೆಯನ್ನು ಅರಿತು ಸಂಬAಧಪಟ್ಟ ಜಿಲ್ಲೆಯ ಜಿಲ್ಲಾಧಿಕಾರಿ ಗಳು ತೆಗೆದುಕೊಂಡಿರುವ ಮಾರ್ಗ ಸೂಚಿಗಳು ಮತ್ತು ಕ್ರಮಗಳ ಸವಿವರ ಮಾಹಿತಿಯನ್ನು ಪಡೆದರು.
‘ಕೊಡಗು ಜಿಲ್ಲೆಯಲ್ಲಿ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಸರಾಸರಿ ೭೪೪.೭ ಮಿಮೀ ಮಳೆ ಆಗಿದ್ದು, ಕಳೆದ ಮೂರು ವರ್ಷಗಳ ಹಿಂದೆ ಇದ್ದ ಮಳೆಯ ತೀವ್ರತೆ ಈಗ ಕಾಣುತ್ತಿಲ್ಲ. ಜಿಲ್ಲೆಗೆ ೨೦೧೮ ಜೂನ್ ಮತ್ತು ಜುಲೈ ತಿಂಗಳಿನಲ್ಲಿ ೨೨೧೯.೭ ಮಿಮೀ, ೨೦೧೯ ರಲ್ಲಿ ೮೫೬.೪ ಮಿಮೀ, ೨೦೨೦ ರಲ್ಲಿ ೮೪೯.೧ ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ವಿವರಿಸಿದರು.’ ಜಿಲ್ಲೆಯಲ್ಲಿ ಸುಮಾರು ೭೦ ಪ್ರದೇಶಗಳನ್ನು ಪ್ರವಾಹ ಪೀಡಿತ ಪ್ರದೇಶಗಳು ಎಂದು ಗುರುತಿಸಲಾಗಿದ್ದು, ಸೆಸ್ಕ್, ಲೋಕೋಪಯೋಗಿ ಇಲಾಖೆ, ರಾಷ್ಟಿçÃಯ ಹೆದ್ದಾರಿ ಇಲಾಖೆಗಳು ಎಚ್ಚರ ವಹಿಸಿದ್ದಾರೆ. ಎನ್ಡಿಆರ್ ಎಫ್, ಪೊಲೀಸ್ ಇಲಾಖೆ, ಅಗ್ನಿಶಾಮಕ ದಳ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಂಡಗಳಾಗಿ ಕಾರ್ಯ ನಿರ್ವಹಿಸುತ್ತಿ ದ್ದಾರೆ ಎಂದರು.
ಜಿಲ್ಲೆಯಲ್ಲಿ ೮೫ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ತಾತ್ಕಾಲಿಕ ಆಶ್ರಯ ನೀಡಲಾಗುವುದು. ಜಿಲ್ಲಾಡಳಿತ ಪ್ರವಾಹವನ್ನು ಎದುರಿಸುವಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಹೆಚ್ಚುವರಿ ಜಿಲ್ಲಾಧಿಕಾರಿ ರಾಜು ಮೊಗವೀರ, ಜಿಲ್ಲಾ ವಿಪತ್ತು ಪರಿಣಿತರಾದ ಅನನ್ಯ ವಾಸುದೇವ್, ಪ್ರಾಕೃತಿಕ ವಿಕೋಪ ವಿಷಯ ನಿರ್ವಾಹಕ ಅನಿಲ್ಕುಮಾರ್ ಇತರರು ಇದ್ದರು.