ಸೋಮವಾರಪೇಟೆ, ಜು. ೨೫: ಸಮೀಪದ ಹಾನಗಲ್ಲು-ಬಗ್ಗನಮನೆ ಸಂಪರ್ಕ ರಸ್ತೆಗೆ ಅಡ್ಡಲಾಗಿ ಬಿದ್ದ ಭಾರೀ ಗಾತ್ರದ ಮರವನ್ನು ತಲ್ತರೆಶೆಟ್ಟಳ್ಳಿ ಗ್ರಾಮದ ಬಗ್ಗನಮನೆ ಗ್ರೂಪ್‌ನ ಗ್ರಾಮಸ್ಥರು ತೆರವುಗೊಳಿಸಿದರು. ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದ್ದರಿಂದ (ಮೊದಲ ಪುಟದಿಂದ) ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೊಡಕಾಗಿತ್ತು. ಇದನ್ನು ಮನಗಂಡ ಗ್ರಾಮಸ್ಥರು ಇಲಾಖಾ ಸಿಬ್ಬಂದಿಗಳಿಗೆ ಕಾಯದೇ ಸ್ವತಃ ಶ್ರಮದಾನ ನಡೆಸಿ ಮರವನ್ನು ತೆರವುಗೊಳಿಸಿದರು.