ನಾಪೋಕ್ಲು, ಜು. ೨೫ : ಕಕ್ಕಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಲಡಿ ಗ್ರಾಮದಲ್ಲಿ ಕಾಡಾನೆಗಳು ಬೀಡು ಬಿಟ್ಟಿದ್ದು ಈ ವಿಭಾಗದ ನಾಟೋಳಂಡ ನಂಜುAಡ ಮತ್ತು ಪೂವಣ್ಣ ಅವರ ಕಾಫಿ ತೋಟದಲ್ಲಿ ಬಾಳೆ, ಅಡಿಕೆ, ತೆಂಗು ಗಿಡಗಳನ್ನು ನಾಶ ಪಡಿಸಿರುವುದಲ್ಲದೆ. ಕಾಫಿ ಗಿಡಗಳನ್ನು ಮುರಿದು ನಷ್ಟಗೊಳಿಸಿದೆ. ಆನೆ ಹಾವಳಿಯಿಂದ ಇಲ್ಲಿನ ಜನರು ಮನೆಯಿಂದ ಹೊರ ಹೋಗಲು ಹೆದರುತ್ತಿದ್ದು, ಅರಣ್ಯ ಇಲಾಖೆ ಕೂಡಲೇ ಸ್ಥಳಕ್ಕೆ ಧಾವಿಸಿ ಆನೆ ದಾಳಿಯಿಂದ ಆದ ನಷ್ಟಕ್ಕೆ ಪರಿಹಾರ ನೀಡಿ ಆನೆಗಳನ್ನು ಕಾಡಿಗಟ್ಟುವಂತೆ ಈ ಭಾಗದ ನಾಗರಿಕರು ಒತ್ತಾಯಿಸಿದ್ದಾರೆ.