ಮಡಿಕೇರಿ, ಜು. ೨೫: ಹಾಕತ್ತೂರಿನ ತೊಂಬತ್ತುಮನೆಯ ಮಾರ್ಗದರ್ಶಿ ತ್ರಿನೇತ್ರ ಯುವಕ ಸಂಘದ ವತಿಯಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೊಡಗು ಜಿಲ್ಲಾ ಯುವ ಒಕ್ಕೂಟ, ಮಡಿಕೇರಿ ತಾಲೂಕು ಯುವ ಒಕ್ಕೂಟ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಯೋಗದಲ್ಲಿ ತೊಂಬತ್ತುಮನೆ, ಚೂರಿಕಾಡು ವ್ಯಾಪ್ತಿಯ ನಿವಾಸಿಗಳಿಗೆ ಕೋವಿಡ್ ಲಸಿಕಾ ಶಿಬಿರ ತಾ. ೨೬ ರಂದು (ಇಂದು) ನಡೆಯಲಿದೆ.
ಸಂಘದ ಕಚೇರಿಯಲ್ಲಿ ಶಿಬಿರ ಆಯೋಜಿಸಲಾಗಿದ್ದು, ಮೊದಲ ಡೋಸ್ ಪಡೆದು ೮೫ ದಿನ ಕಳೆದವರಿಗೆ ಹಾಗೂ ಸಾರ್ವಜನಿಕರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಮೊದಲ ಡೋಸ್ ನೀಡಲಾಗುವುದು.