ಕೂಡಿಗೆ, ಜು. ೨೩: ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೊಡ್ಡಅಳುವಾರ ಸಮೀಪದ ಅದಾನಿಪುರ ಗ್ರಾಮದಲ್ಲಿ ಪೊಲೀಸ್ ತರಬೇತಿ ಕೇಂದ್ರಕ್ಕೆ ಗುರುತಿಸಲಾಗಿರುವ ೧೦೦ ಎಕರೆ ಪ್ರದೇಶವನ್ನು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಸಮೀಪದ ಅಳಿಲುಗುಪ್ಪೆ ಗ್ರಾಮದ ಸರ್ವೆ ನಂ ೧೯ ರಲ್ಲಿ ೧.೫೦ ಎಕರೆ ಪ್ರದೇಶದಲ್ಲಿ ಇಲಾಖೆಯ ‘ಮೆಟಿರಿಯಲ್ ರಿಕವರಿ ಫೆಸಿಲಿಟಿ’ ವ್ಯವಸ್ಥೆಗೆ ಕಾದಿರಿಸಲಾಗಿರುವ ಜಾಗದ ವೀಕ್ಷಣೆಯನ್ನು ಮಾಡಿ ಸಮಗ್ರವಾದ ಮಾಹಿತಿ ಪಡೆದುಕೊಂಡರು.
ಈ ಸಂದರ್ಭದಲ್ಲಿ ತಾಲೂಕು ತಹಶೀಲ್ದಾರ್‌ಗಳಾದ ಗೋವಿಂದರಾಜ್, ಪ್ರಕಾಶ್, ಡಿವೈಎಸ್‌ಪಿ ಶೈಲೇಂದ್ರ, ವೃತ್ತ ನಿರೀಕ್ಷಕ ಮಹೇಶ್, ಕುಶಾಲನಗರ ಕಂದಾಯ ನಿರೀಕ್ಷಕ ಸಂತೋಷ್ ಸೇರಿದಂತೆ ಅಧಿಕಾರಿ ವರ್ಗದವರು ಹಾಜರಿದ್ದರು.