ಸುಂಟಿಕೊಪ್ಪ, ಜು. ೨೨: ಗರಗಂದೂರಿನಲ್ಲಿ ತಾ. ೨೦ ರಂದು ಗೋಮಾಂಸ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದ ಘಟನೆಗೆ ಸಂಬAಧಿಸಿದAತೆ ಅಂದು ಬಂಧಿತ ಆರೋಪಿಗಳ ಪೈಕಿ ರಶೀದ್ ಎಂಬಾತನ ಮೇಲೆ ಹಲ್ಲೆ ಮಾಡಿದ್ದ ಆರೋಪದಡಿ ರಶೀದ್ ನೀಡಿದ ದೂರಿನನ್ವಯ ಸುನಿಲ್, ಮಂಜು, ವಿನು, ಮನು ಹಾಗೂ ಇತರರುಗಳ ವಿರುದ್ಧ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.