ಮಡಿಕೇರಿ, ಜು.೨೨: ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ನ ೧೭ ನೇ ಮತ್ತು ಮೊದಲ ಮಹಿಳಾ ಅಧ್ಯಕ್ಷೆ ಯಾಗಿ ನೆರವಂಡ ಅನಿತಾ ಪೂವಯ್ಯ ಹಾಗೂ ಕಾರ್ಯದರ್ಶಿಯಾಗಿ ಪೂಳಕಂಡ ಆರ್. ರಾಜೇಶ್ ಅಧಿಕಾರ ಸ್ವೀಕರಿಸಿದರು.

ರೋಟರಿ ಮಿಸ್ಟಿ ಹಿಲ್ಸ್ನ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ನೆರವೇರಿಸಿ ಮಾತನಾಡಿದ ರೋಟರಿ ಜಿಲ್ಲೆ ೩೧೮೧ನ ಮಾಜಿ ರಾಜ್ಯಪಾಲ ಮಾತಂಡ ಸುರೇಶ್ ಚಂಗಪ್ಪ,ಮುAದಿನ ಪೀಳಿಗೆಗೆ ಉತ್ತಮ ದಿನಗಳ ನಿರ್ಮಾಣ ಕ್ಕಾಗಿ ಈಗಿನಿಂದಲೇ ಪ್ರತಿಯೋರ್ವರೂ ಸಾಮಾಜಿಕ ಹೊಣೆಗಾರಿಕೆಯಿಂದ ಜವಾಬ್ದಾರಿಯಿಂದ ಕಾರ್ಯನಿರ್ವಹಿಸ ಬೇಕೆಂದು ಕರೆ ನೀಡಿದರು. ಗೆಲ್ಲುವ ಹಂಬಲಕ್ಕಾಗಿ ಯಾರಿಗೂ ಮೋಸ, ವಂಚನೆ ಮಾಡಿ ಗುರಿ ಮುಟ್ಟುವ ಕೃತ್ಯಕ್ಕೆ ತೊಡಗಬಾರದೆಂದು ಹೇಳಿದ ಸುರೇಶ್ ಚಂಗಪ್ಪ, ಕೋವಿಡ್ ಸಂಕಷ್ಟದ ದಿನಗಳಲ್ಲಿ ರೋಟರಿ ಸಂಸ್ಥೆಯು ಆರೋಗ್ಯ ಸಂಬAಧಿತ ಕಾರ್ಯ ಚಟುವಟಿಕೆಗಳಲ್ಲಿ ಗಮನಾರ್ಹ ಸಾಧನೆ ತೋರಿದೆ ಎಂದರು.

ರೋಟರಿ ವಲಯ ೬ ರ ಉಪ ರಾಜ್ಯಪಾಲ ಅನಿಲ್ ಎಚ್.ಟಿ. ಮಿಸ್ಟಿ ಹಿಲ್ಸ್ನ ವಾರ್ತಾ ಸಂಚಿಕೆ ರೋಟೋ ಮಿಸ್ಟ್ ಬಿಡುಗಡೆಗೊಳಿಸಿ ಮಾತನಾಡಿ, ರೋಟರಿ ಮಿಸ್ಟಿ ಹಿಲ್ಸ್ ೧೭ನೇ ವರ್ಷದಲ್ಲಿ ಮೊದಲ ಮಹಿಳಾ ಅಧ್ಯಕ್ಷೆಯನ್ನು ನೀಡುವ ಮೂಲಕ ರೋಟರಿಯಲ್ಲಿ ಮಹಿಳಾ ಸದಸ್ಯರಿಗೆ ಮತ್ತಷ್ಟು ಉತ್ಸಾಹ ತುಂಬಿದೆ. ಲಸಿಕಾ ಅಭಿಯಾನದಲ್ಲಿ ಈಗಾಗಲೇ ಕಾರ್ಯಪ್ರವೃತ್ತವಾಗಿರುವ ಮಿಸ್ಟಿ ಹಿಲ್ಸ್ ಸಮಾಜಸೇವೆಯಲ್ಲಿ ೧೭ ವರ್ಷಗಳಿಂದ ಅತ್ಯುತ್ತಮ ಸಾಧನೆ ತೋರಿದೆ ಎಂದು ಶ್ಲಾಘಿಸಿದರು. ರೋಟರಿ ಸದಸ್ಯರ ತಂಡ ಸ್ಪೂರ್ತಿಯಿಂದ ಕಾರ್ಯಪ್ರವೃತ್ತ ರಾಗುವಂತೆ ಸಲಹೆ ನೀಡಿದ ಅನಿಲ್, ಹೊಸ ಕ್ಲಬ್ ಪ್ರಾರಂಭ, ಹೊಸ ಸದಸ್ಯರ ಸೇರ್ಪಡೆಗೂ ರೋಟರಿ ಸಂಸ್ಥೆಗಳು ಆದ್ಯತೆಯನ್ನು ಈ ವರ್ಷ ನೀಡಲಿದೆ ಎಂದರು.

ಮಿಸ್ಟಿ ಹಿಲ್ಸ್ನ ನೂತನ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಮಾತನಾಡಿ, ಸಾಮಾಜಿಕ ಸೇವಾ ಚಟುವಟಿಕೆಗೆ ಹೆಸರಾಗಿರುವ ರೋಟರಿ ಸಂಸ್ಥೆಯಲ್ಲಿ ಸಾಕಷ್ಟು ಕಾರ್ಯ ಯೋಜನೆಗಳಿಗೆ ಚಿಂತನೆ ಹೊಂದಿದ್ದು ಮಡಿಕೇರಿಯನ್ನು ಹಸಿರು ನಗರಿಯಾಗಿ ರೂಪಿಸಲು ವಿಶೇಷ ಯೋಜನೆ ಹಮ್ಮಿಕೊಂಡಿರುವುದಾಗಿ ಹೇಳಿದರು.

ವಲಯ ೬ ರ ಕಾರ್ಯದರ್ಶಿ ಎಚ್.ಎಸ್. ವಸಂತ ಕುಮಾರ್, ವಲಯ ಸೇನಾನಿ ಎಂ.ಆರ್. ಜಗದೀಶ್ ಪ್ರಶಾಂತ್ ಮಾತನಾಡಿದರು.

ನೂತನ ಕಾರ್ಯದರ್ಶಿ ಪೂಳಕಂಡ ರಾಜೇಶ್ ವಂದಿಸಿದರು. ನಿರ್ಗಮಿತ ಅಧ್ಯಕ್ಷ ಪಿ.ಆರ್. ಸಂದೀಪ್, ಕಾರ್ಯದರ್ಶಿ ಸತೀಶ್ ಸೋಮಣ್ಣ ವೇದಿಕೆಯಲ್ಲಿದ್ದರು.

ಮಡಿಕೇರಿ ನಗರಸಭೆಯ ಪೌರಾಯುಕ್ತ ರಾಮದಾಸ್ ಅವರನ್ನು ಗೌರವ ಸದಸ್ಯರನ್ನಾಗಿ ರೋಟರಿ ಮಿಸ್ಟಿ ಹಿಲ್ಸ್ಗೆ ಸೇರ್ಪಡೆಗೊಳಿಸಲಾಯಿತಲ್ಲದೇ ಜಯಂತ್ ಪೂಜಾರಿ, ದೀಪರಶ್ಮಿ, ಶಂಕರ್ , ಡಾ. ಕುಶ್ವಂತ್ ಕೋಳಿಬೈಲ್, ಎಂ.ಎ. ಅಚ್ಚಯ್ಯ, ರೋಹನ್ ಅವರನ್ನೂ ನೂತನ ಸದಸ್ಯರನ್ನಾಗಿ ಮಿಸ್ಟಿ ಹಿಲ್ಸ್ಗೆ ಸೇರ್ಪಡೆ ಗೊಳಿಸಲಾಯಿತು.