ವೀರಾಜಪೇಟೆಯಲ್ಲಿ ಧಾರಾಕಾರ ಮಳೆ

ವೀರಾಜಪೇಟೆ: ವೀರಾಜಪೇಟೆ ತಾಲೂಕಿನಾದ್ಯಂತ ಧಾರಾಕಾರ ಗಾಳಿ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಗ್ರಾಮೀಣ ಭಾಗದಲ್ಲಿ ವಿಪರೀತ ಗಾಳಿ, ಮಳೆಯಾಗುತ್ತಿದ್ದು ಅಲ್ಲಲ್ಲಿ ಸಣ್ಣಪುಟ್ಟ ಮರದ ಕೊಂಬೆಗಳು ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮುರಿದು ಬಿದ್ದಿರುವ ತಂತಿ ಹಾಗೂ ಕಂಬಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಚೆಸ್ಕ್ ಸಿಬ್ಬಂದಿಗಳು ಕಾರ್ಯನಿರತರಾಗಿದ್ದರು. ಮಳೆಯಿಂದ ಬೆಟ್ಟ ಪ್ರದೇಶಗಳ ನಿವಾಸಿಗಳು ಆತಂಕಗೊAಡಿದ್ದಾರೆ. ಚೆಯ್ಯಂಡಾಣಿ: ವೀರಾಜಪೇಟೆ ಸಮೀಪದ ಕದನೂರು ಗ್ರಾಮಪಂಚಾಯಿತಿ ವ್ಯಾಪ್ತಿಯ ಅರಮೇರಿ - ಚಾಮಿಯಾಲ್ ಸಂಪರ್ಕ ರಸ್ತೆಯಲ್ಲಿ ಸೇತುವೆ ಪ್ರಸಕ್ತ ಸಾಲಿನ ವರ್ಷಧಾರೆಯ ಪ್ರಾರಂಭಿಕ ಹಂತದಲ್ಲಿಯೇ ರಂದ್ರವೊAದು ಕಾಣಿಸಿಕೊಂಡಿತ್ತು. ಅದನ್ನು ಪತ್ರಿಕೆ ಈ ಹಿಂದೆಯೇ ವರದಿ ಮಾಡಿತ್ತು. ಆದರೆ ಸ್ಥಳೀಯ ಆಡಳಿತ ನಾಕಾಬಂದಿಯನ್ನಿರಿಸಿ ಇಲ್ಲಿಂದ ಕಾಲ್ಕಿತ್ತಿದೆ. ಪ್ರಸಕ್ತ ಸನ್ನಿವೇಶದಲ್ಲಿ ಸೇತುವೆಯ ಉಭಯ ಕಡೆಗಳಲ್ಲೂ ರಂದ್ರ ನಿರ್ಮಾಣಗೊಂಡು ಸೇತುವೆಯ ಅಸ್ತಿತ್ವವನ್ನು ಮೌನವಾಗಿ ಪ್ರಶ್ನಿಸುತ್ತಿದೆ.

ಸೇತುವೆಯ ಕೂದಲೆಳೆಯ ಅಂತರದಲ್ಲಿ ಎಸ್.ಎಂ.ಎಸ್ ವಿದ್ಯಾಪೀಠ ಕಾರ್ಯಾಚರಿಸುತ್ತಿದೆ. ಈ ರಸ್ತೆಯ ಮೂಲಕ ಹಾದು ಚಾಮಿಯಾಲ, ದೇವಣಗೇರಿ, ಮೈತಾಡಿ, ಕೊಂಡAಗೇರಿ ವೀರಾಜಪೇಟೆ ತಲುಪಬಹುದಾಗಿದ್ದು, ದುರಂತ ಸಂಭವಿಸುವ ಮುನ್ನ ಮೇಲಾಧಿಕಾರಿಗಳು ತ್ವರಿತವಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ವ್ಯವಸ್ಥೆ ಮಾಡಿಕೊಡಬೇಕಿದೆ.

ಮಡಿಕೇರಿ: ಮಕ್ಕಂದೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಉದಯಗಿರಿ ಗ್ರಾಮದಲ್ಲಿರುವ ಏಳು ಮನೆಗಳು ಅಪಾಯದ ಅಂಚಿನಲ್ಲಿವೆ. ೨೦೧೮ರಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಸಂದರ್ಭ ಮೇಲಿನಿಂದ ಜರಿದು ಬಂದಿರುವ ಮಣ್ಣು ಹಾಗೂ ಮರಗಳು ಮನೆಗಳ ಸುತ್ತಲೂ ರಾಶಿಯಾಗಿದ್ದು, ಇದೀಗ ಮಳೆ ನೀರು ನಿಂತು ಸುತ್ತಲೂ ಕೆರೆಗಳಂತಾಗಿವೆ. ಗ್ರಾಮದ ಪದ್ಮಾವತಿ, ಪ್ರೇಮಾವತಿ ಅವರ ಮನೆಗಳು ತೀರಾ ಅಪಾಯದಲ್ಲಿವೆ. ಈ ಪ್ರದೇಶಕ್ಕೆ ಗ್ರಾ.ಪಂ.ಅಧ್ಯಕ್ಷ ಶ್ಯಾಂ ಸುಬ್ಬಯ್ಯ, ಸದಸ್ಯರುಗಳಾದ ಬಿ.ಎನ್.ರಮೇಶ್, ವಿಮಲಾರವಿ, ಕೆ.ಸುನಂದ ಹಾಗೂ ಅಭಿವೃದ್ಧಿ ಅಧಿಕಾರಿ ದಿನೇಶ್ ಅವರುಗಳು ಭೇಟಿ ನೀಡಿ ಪರಿಶೀಲನೆ ಮಾಡಿದರು. ಈ ಏಳು ಕುಟುಂಬಗಳಿಗೆ ಜಿಲ್ಲಾಡಳೀತದ ಮೂಲಕ ಪುನರ್‌ವಸತಿ ಕಲ್ಪಿಸಬೇಕೆಂದು ಸದಸ್ಯರುಗಳು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.ಕಣಿವೆ: ಹಾರಂಗಿ ಜಲಾನಯನ ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ಅಷ್ಟೇ ಪ್ರಮಾಣದ ನೀರನ್ನು ನದಿಗೆ ಬಿಡಲಾಗುತ್ತಿದೆ. ಹಾಗಾಗಿ ಕಾವೇರಿ ನದಿಯನ್ನು ಸಂಧಿಸುವ ಸಂಗಮ ತಾಣ ಕೂಡಿಗೆಯ ಬಳಿ ಹಾರಂಗಿ ನದಿ ಮೈದುಂಬಿ ಹರಿಯುತ್ತಿದೆ.