ಗುಡ್ಡೆಹೊಸೂರು, ಜು. ೨೩: ಇಲ್ಲಿನ ಸಿದ್ದಾಪುರ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಕೆಲವು ಭಾಗಗಳಲ್ಲಿ ರಸ್ತೆಗೆ ಚರಂಡಿ ನಿರ್ಮಿಸಲು ಕಾಮಗಾರಿ ನಡೆಸಿ ಅರ್ಧಕ್ಕೆ ನಿಲ್ಲಿಸಲಾಗಿದೆ. ಅಲ್ಲದೆ ಸುಮಾರು ೨ ಕಿ.ಮೀ ರಸ್ತೆಯನ್ನು ಕಾಂಕ್ರೀಟ್ ರಸ್ತೆ ನಿರ್ಮಿಸಲು ಜಲ್ಲಿಕಲ್ಲು ಹಾಕಿ ಬಿಡಲಾಗಿದೆ.
ಮಳೆಯ ಕಾರಣ ರಸ್ತೆಯ ಎಲ್ಲಾ ಭಾಗದಲ್ಲೂ ಸಂಪೂರ್ಣ ಗುಂಡಿಬಿದ್ದಿದೆ. ಎರಡು ವಾಹನಗಳು ಸಂಚರಿಸುವ ಸಂದರ್ಭ ಈ ಭಾಗದಲ್ಲಿ ಪ್ರತಿನಿತ್ಯ ದ್ವಿಚಕ್ರ ವಾಹನಗಳು ಚರಂಡಿಗೆ ಬಿದ್ದು ಅನಾಹುತಗಳು ಸಂಭವಿಸುತ್ತಿವೆೆ. ವಾಹನ ಸವಾರರು ಸಂಚರಿಸಲು ಹರಸಾಹಸ ಪಡಬೇಕಾಗಿದೆ. -ಗಣೇಶ್