ಮಡಿಕೇರಿ, ಜು. ೨೩: ರಸ್ತೆ ದುರಸ್ತಿ ಕಾರಣ ಹಾಸನದ ಬಳಿಯ ಶಿರಾಡಿ ಘಾಟ್ ಮೂಲಕ ಭಾರೀ ವಾಹನಗಳನ್ನು ಸಂಚರಿಸಲು ಬಂದ್ ಮಾಡಿ ಹಾಸನದ ಜಿಲ್ಲಾಧಿಕಾರಿ ಅವರು ಆದೇಶ ಹೊರಡಿಸಿದ್ದಾರೆ.
ಆದರೆ, ಬದಲಿ ಮಾರ್ಗವಾಗಿ ಕಾರುಗಳು, ಜೀಪು, ಟೆಂಪೊ, ಮಿನಿವ್ಯಾನ್, ದ್ವಿಚಕ್ರ ವಾಹನಗಳು, ಆ್ಯಂಬ್ಯುಲೆನ್ಸ್, ಬಸ್‌ಗಳಿಗೆ ಹಾಗೂ ಆರು ಚಕ್ರದ ಸರಕು ಸಾಗಾಣೆ ವಾಹನಗಳಿಗೆ ಹಾಸನ, ಬೇಲೂರು, ಮೂಡಿಗೆರೆ ಮೂಲಕ ಚಾರ್ಮಾಡಿ ಘಾಟ್‌ನಿಂದ ಮಂಗಳೂರು ತಲುಪಲು ತಮ್ಮ ಆದೇಶದಲ್ಲಿ ಅವಕಾಶ ಕಲ್ಪಿಸಿದ್ದಾರೆ. ಆದರೆ, ಇದರೊಂದಿಗೆ ನಿರ್ಬಂಧಿಸಲಾದ ವಾಹನಗಳಾದ ರಾಜಹಂಸ, ಐರಾವತ, ಬುಲೆಟ್ ಟ್ಯಾಂರ‍್ಸ್, ಶಿಫ್ಟ್ ಕಾರ್ಗೋ ಕಂಟೈರ‍್ಸ್, ಲಾಂಗ್ ಚಾಸೀಸ್ ವಾಹನಗಳು, ಹೆವಿ ಕಮರ್ಶಿಯಲ್ ವಾಹನಗಳು, ಮಲ್ಟಿ ಆಕ್ಸಲ್ ಟ್ರೆöÊಲರ್ ಮತ್ತು ಎಲ್ಲಾ ಬಗೆಯ ಅಧಿಕ ಭಾರದ ಸರಕು ಸಾಗಾಣೆ ವಾಹನಗಳನ್ನು ಹಾಸನ, ಅರಕಲಗೂಡು, ಕುಶಾಲನಗರ ಹಾಗೂ ಸಂಪಾಜೆ ಮಾರ್ಗದ ಮೂಲಕ ಮಂಗಳೂರು ತಲುಪುವಂತೆ ಹಾಸನ ಜಿಲ್ಲಾಧಿಕಾರಿ ಆರ್. ಗಿರೀಶ್ ತಮ್ಮ ಆದೇಶದಲ್ಲಿ ಸೂಚಿಸಿದ್ದಾರೆ. ಬೆಂಗಳೂರಿನಿAದ ಮಂಗಳೂರಿಗೆ ತಲುಪಲು ಈ ಅವಕಾಶ ಕಲ್ಪಿಸಲಾಗಿದೆ.
(ಮೊದಲ ಪುಟದಿಂದ) ಆದರೆ, ಈಗಾಗಲೇ ಕೊಡಗು ಜಿಲ್ಲೆಯಲ್ಲಿ ಅತಿವೃಷ್ಟಿ, ಭೂಕುಸಿತಗಳಿಂದಾಗಿ ಅಧಿಕ ತೂಕದ ವಾಹನಗಳಿಗೆ ಸಂಚಾರ ಅವಕಾಶವನ್ನು ಕೊಡಗು ಜಿಲ್ಲಾಧಿಕಾರಿ ರದ್ದುಪಡಿಸಿದ್ದು, ಕೇವಲ ಹದಿನಾರು ಟನ್ ಸರಕು ತೂಕದ ವಾಹನಗಳಿಗೆ ಮಾತ್ರ ಸಂಚರಿಸಲು ಅನುವು ಮಾಡಿದ್ದಾರೆ. ಈ ಕುರಿತಾಗಿ ‘ಶಕ್ತಿ’ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರನ್ನು ಪ್ರಶ್ನಿಸಿದಾಗ, ಹಾಸನ ಜಿಲ್ಲಾಧಿಕಾರಿಯವರ ಆದೇಶವನ್ನು ಅವರು ಮಾನ್ಯ ಮಾಡಿಲ್ಲ ಎಂಬುದು ಸ್ಪಷ್ಟಗೊಂಡಿದೆ. ಕೊಡಗಿನಲ್ಲಿ ಈಗಿನ ಸ್ಥಿತಿಯಲ್ಲಿ ೧೬ ಟನ್‌ಗಿಂತ ಅಧಿಕ ತೂಕದ ಸಾಮಗ್ರಿ ಸರಕುಗಳನ್ನು ಒಯ್ಯಲು ಖಂಡಿತ ಅವಕಾಶ ಕೊಡುವುದಿಲ್ಲ. ಏಕೆಂದರೆ, ಜಿಲ್ಲೆಯಲ್ಲಿ ತೀವ್ರ ಮಳೆಯಿಂದಾಗಿ ಅನೇಕ ಕಡೆ ರಸ್ತೆಗಳಿಗೆ ಹಾನಿಯುಂಟಾಗಿದೆ. ಈ ಹಿನ್ನೆಲೆಯಲ್ಲಿ ಕೊಡಗಿನ ಕುಶಾಲನಗರ ಹಾಗೂ ಸಂಪಾಜೆ ಗೇಟ್‌ಗಳ ಮೂಲಕ ಭಾರೀ ತೂಕದ ವಾಹನಗಳಿಗೆ ಪ್ರವೇಶ ನಿಷೇಧವನ್ನು ಮುಂದುವರಿಸಲಾಗಿದೆ ಎಂದು ಅವರು ಖಚಿತಪಡಿಸಿದರು. ಪ್ರಯಾಣಿಕರನ್ನು ಒಯ್ಯುವ ಬಸ್ ಹಾಗೂ ಲಘು ವಾಹನಗಳ ಹೊರತು ಇತರ ಭಾರೀ ವಾಹನಗಳನ್ನು ಸಂಚರಿಸಲು ಅವಕಾಶ ನೀಡುವುದಿಲ್ಲವೆಂದು ಅವರು ಸ್ಪಷ್ಟಪಡಿಸಿದರು. ಈ ಹಿನ್ನೆಲೆಯಲ್ಲಿ ಹಾಸನದ ಜಿಲ್ಲಾಧಿಕಾರಿಯವರ ಗಮನಕ್ಕೂ ತಂದಿದ್ದು, ರಾಜ್ಯ ಸರಕಾರದ ಸಂಬAಧಿತ ಹಿರಿಯ ಅಧಿಕಾರಿಗಳು ಮತ್ತು ಆಡಳಿತ ಪ್ರಮುಖರ ಗಮನಕ್ಕೂ ತಂದಿರುವುದಾಗಿಯೂ ಜಿಲ್ಲಾಧಿಕಾರಿ ಮಾಹಿತಿಯಿತ್ತರು. ಶಿರಾಡಿ ಘಾಟ್ ಬಂದ್ : ಕೊಡಗು ಮೂಲಕ ಸಂಚಾರಕ್ಕೆ ಅವಕಾಶವಿಲ್ಲ