ಮಡಿಕೇರಿ, ಜು. ೨೩: ಕೊಡಗು ಜಿಲ್ಲೆ ಪ್ರಸ್ತುತ ಮುಂಗಾರು ಮಳೆಗೆ ಮೈಯೊಡ್ಡಿ ನಿಂತAತಿದೆ. ಕಳೆದ ಕೆಲವು ದಿನಗಳಿಂದ ಜಿಲ್ಲೆಯಾದ್ಯಂತ ಗಾಳಿ ಸಹಿತವಾಗಿ ಭಾರೀ ಮಳೆಯಾಗುತ್ತಿದೆ. ಈಗಿನ ಸನ್ನಿವೇಶದಿಂದಾಗಿ ಜಿಲ್ಲೆಯಲ್ಲಿನ ಪ್ರಮುಖ ನದಿಗಳಾದ ಕಾವೇರಿ, ಲಕ್ಷö್ಮಣತೀರ್ಥ ಸೇರಿದಂತೆ ಇನ್ನಿತರ ನದಿ - ತೊರೆಗಳು ಪ್ರಸ್ತುತ ಮೈದುಂಬಿ ಹರಿಯುತ್ತಿವೆ. ಜಲಾನಯನ ಪ್ರದೇಶಗಳಲ್ಲಿ ನೀರಿನ ಮಟ್ಟ ನಿರಂತರ ಮಳೆಯಿಂದಾಗಿ ಏರಿಕೆಯಾಗುತ್ತಲೇ ಇದ್ದು, ಮತ್ತೆ ಮಳೆ ಇದೇ ರೀತಿ ಮುಂದುವರಿದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗುವ ಆತಂಕ ಜನತೆಯನ್ನು ಕಾಡುವಂತಾಗಿದೆ.
ಭಾಗಮAಡಲ, ನಾಪೋಕ್ಲು, ಕೊಟ್ಟಮುಡಿ, ಬೇತ್ರಿ, ಸಿದ್ದಾಪುರ, ಕರಡಿಗೋಡು, ಕಣಿವೆ ವಿಭಾಗದಲ್ಲಿ ಕಾವೇರಿ ನದಿಯಲ್ಲಿ ನೀರಿನ ಹರಿವು ರಭಸಗೊಳ್ಳುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಹೆಚ್ಚಿರುವ ಹಿನ್ನೆಲೆಯಲ್ಲಿ ಹಾಗೂ ಇನ್ನು ಕೆಲವು ದಿನ ಮಳೆ ಹೆಚ್ಚಿರುವ ಮಾಹಿತಿಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಅಗತ್ಯ ಮುನ್ನೆಚ್ಚರಿಕೆ ವಹಿಸುತ್ತಿದೆ. ಈಗಾಗಲೇ ಜಿಲ್ಲೆಯ ಹಲವೆಡೆ ಕೆಲವು ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿದ್ದು, ತುರ್ತು ಸಂದರ್ಭ ಎದುರಾದಲ್ಲಿ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಕ್ರಮವಹಿಸಲು ಸಿದ್ಧತೆ ನಡೆಸಲಾಗಿದೆ. ಜಿಲ್ಲೆಯಲ್ಲಿ ಬೀಡುಬಿಟ್ಟಿರುವ ಎನ್.ಡಿ.ಆರ್.ಎಫ್ ಸೇರಿದಂತೆ ಪೊಲೀಸ್, ಅಗ್ನಿಶಾಮಕ, ಗೃಹರಕ್ಷಕದಳ ಪರಿಸ್ಥಿತಿ ನಿಭಾಯಿಸಲು ಸಜ್ಜಾಗಿರುವದಾಗಿ ಜಿಲ್ಲಾಡಳಿತ ಮಾಹಿತಿ ತಿಳಿಸಿದೆ.
ಬೇತ್ರಿಯಲ್ಲಿ ನೀರಿನ ಹರಿವು ಹೆಚ್ಚಾಗುತ್ತಿರುವ ಹಿನ್ನೆಲೆ ಸ್ಥಳಕ್ಕೆ ವೀರಾಜಪೇಟೆ ತಹಶೀಲ್ದಾರ್ ಯೋಗಾನಂದ್ ಅವರು ಇಂದು ಭೇಟಿ ನೀಡಿ ಪರಿಶೀಲಿಸಿದರು. ಭಾಗಮಂಡಲ - ನಾಪೋಕ್ಲು ರಸ್ತೆಯಲ್ಲಿ ಒಂದೂವರೆ ಅಡಿಯಷ್ಟು ನೀರು ಬೆಳಿಗ್ಗೆ ಏರಿಕೆಗೊಂಡಿತ್ತು. ಇಲ್ಲಿಯೂ ನಿರಂತರ ಮಳೆಯಾಗುತ್ತಿದ್ದು, ಈ ಮಟ್ಟ ಏರಿಕೆಯಾಗಿ ಸಂಚಾರಕ್ಕೆ ಅಡಚಣೆಯಾಗುವ ಸಾಧ್ಯತೆ ಇದೆ.
(ಮೊದಲ ಪುಟದಿಂದ) ಮಳೆ- ಗಾಳಿಯ ಕಾರಣದಿಂದಾಗಿ ಜಿಲ್ಲೆಯ ಹಲವೆಡೆ ಮರಗಳು ಧರೆಗುರುಳಿದ್ದು, ಇವುಗಳನ್ನು ಸಂಬAಧಿಸಿದ ಇಲಾಖೆಗಳು ಸರಿಪಡಿಸುತ್ತಿವೆ. ಕೆಲವೆಡೆ ಬರೆಜರಿತದಂತಹ ಕಾರಣದಿಂದ ರಸ್ತೆಗಳು ಅಪಾಯದಂಚಿನಲ್ಲಿವೆ. ಹೊದಕಾನ - ಆವಂಡಿಯಲ್ಲಿ ಬರೆ ಕುಸಿತಗೊಂಡು ರಸ್ತೆ ಸಂಪರ್ಕಕ್ಕೆ ಅಡಚಣೆಯಾಗಿತ್ತು. ಅಪಾಯದಲ್ಲಿರುವ ಮಡಿಕೇರಿ - ಸಂಪಾಜೆ ರಸ್ತೆಯ ಪರಿಸ್ಥಿತಿಯನ್ನು ಶಾಸಕ ಕೆ.ಜಿ. ಬೋಪಯ್ಯ ಅವರು ಇಂದು ಪರಿಶೀಲಿಸಿದ್ದು, ಅಗತ್ಯ ಮುನ್ನೆಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲೆಯಲ್ಲಿ ಸರಾಸರಿ ೩.೮೯ ಇಂಚು
ಕಳೆದ ೨೪ ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ೩.೮೯ ಇಂಚಿನಷ್ಟು ಭಾರೀ ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ ಸರಾಸರಿ ೪.೩೫, *ಗೋಣಿಕೊಪ್ಪ: ದಕ್ಷಿಣ ಕೊಡಗಿನ ಬಹುತೇಕ ಭಾಗಗಳಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯ ತೀವ್ರತೆ ಅಧಿಕಗೊಂಡಿದ್ದು, ನದಿ, ಕೆರೆ, ತೋಡು ತುಂಬಿಕೊAಡಿದ್ದು, ಕೃಷಿ ಭೂಮಿ ಜಲಾವೃತಗೊಳ್ಳುತ್ತಿದೆ.
ಗುರುವಾರ ಮತ್ತು ಶುಕ್ರವಾರ ಸುರಿಯುತ್ತಿರುವ ಮಳೆಗೆ ಬಾಳೆಲೆ, ನಿಟ್ಟೂರು ಹಳೆ ಸೇತುವೆಯ ಮೇಲ್ಭಾಗದಲ್ಲಿ ನೀರು ತುಂಬಿ ಹರಿಯುತ್ತಿದ್ದು, ಸುತ್ತಲಿನ ಕೃಷಿ ಭೂಮಿ ಸಂಪೂರ್ಣ ಜಲಾವೃತಗೊಂಡಿದೆ. ಲಕ್ಷ÷್ಮಣ ತೀರ್ಥ ನದಿಯ ಹರಿಯುವಿಕೆ ತೀವ್ರಗೊಂಡ ಹಿನ್ನೆಲೆ ಇರ್ಪು ಜಲಪಾತ ಬೋರ್ಗರೆದು ದುಮ್ಮುಕ್ಕುತ್ತಿದೆ. ಶ್ರೀಮಂಗಲ ಹೋಬಳಿಯ ಕೆ.ಬಾಡಗ ಗ್ರಾಮದ ನಿವಾಸಿ ಗೋದೆಯಂಗಡ ಕುಶಾಲಪ್ಪ ವಾಸದ ಮನೆಯ ಗೋಡೆ ಕುಸಿದು ಬಿದ್ದು, ಅಪಾರ ನಷ್ಟ ಸಂಭವಿಸಿದೆ. ಕುಮಟೂರು ಗ್ರಾಮದ ಪಿ.ಕೆ. ಸೋಮಯ್ಯ ಅವರ ಮನೆಯು ಮಳೆ ಹಾಗೂ ಗಾಳಿಯ ತೀವ್ರತೆಗೆ ಹಾನಿ ಸಂಭವಿಸಿದೆ.
ದೇವರಪುರ ಗ್ರಾ.ಪಂ. ವ್ಯಾಪ್ತ್ತಿಯ ದೇವರಪುರ ಕಾಲೋನಿಯ ಮುತ್ತಾ ಅವರ ಮನೆಯ ಛಾವಣಿಯ ಮೇಲೆ ಮರ ಬಿದ್ದಿದೆ. ಗೋಣಿಕೊಪ್ಪ ಕೀರೆಹೊಳೆ ವೀರಾಜಪೇಟೆ ೩.೮೯ ಹಾಗೂ ಸೋಮವಾರಪೇಟೆ ತಾಲೂಕಿನಲ್ಲೂ ಸರಾಸರಿ ೩.೪೪ ಇಂಚು ಮಳೆ ದಾಖಲಾಗಿದೆ.
ಶ್ರೀಮಂಗಲ ಹೋಬಳಿ ಅಧಿಕ
ಕಳೆದ ೨೪ ಗಂಟೆಗಳ ಅವಧಿಯಲ್ಲಿ ಶ್ರೀಮಂಗಲ ಹೋಬಳಿಯಲ್ಲಿ ೭.೦೪ ಇಂಚಿನಷ್ಟು ಭಾರೀ ಮಳೆಯಾಗಿದೆ. ಭಾಗಮಂಡಲ ೬.೬೧, ಶಾಂತಳ್ಳಿ ೬.೪೦, ನಾಪೋಕ್ಲು ಹೋಬಳಿಗೂ ೫.೮೮ ಇಂಚಿನಷ್ಟು ಭಾರೀ ಮಳೆ ಬಿದ್ದಿದೆ. ಉಳಿದಂತೆ ಮಡಿಕೇರಿ ಕ.ಸ.ಬಾ ೨.೭೭, ಸಂಪಾಜೆ ೨.೧೪, ವೀರಾಜಪೇಟೆ ಕ.ಸ.ಬಾ ೪.೪೧, ಹುದಿಕೇರಿ ೩.೫೪, ಪೊನ್ನಂಪೇಟೆ ೩.೬೮, ಅಮ್ಮತ್ತಿ ೨, ಬಾಳಲೆ ಹೋಬಳಿಗೆ ೨.೭೨ ಇಂಚು ಮಳೆಯಾಗಿದೆ. ಸೋಮವಾರಪೇಟೆ ಕ.ಸ.ಬಾ ೩.೨೮, ಶನಿವಾರಸಂತೆ ೪.೬೧, ಕೊಡ್ಲಿಪೇಟೆ ೩, ಕುಶಾಲನಗರ ೦.೮೮, ಸುಂಟಿಕೊಪ್ಪಕ್ಕೆ ೨.೪೮ ಇಂಚು ಮಳೆ ದಾಖಲಾಗಿದೆ.ತುಂಬಿ ಹರಿಯುತ್ತಿದ್ದು, ವರ್ಷಂ ಪ್ರತಿಯಂತೆ ಎರಡನೇ ಮತ್ತು ಮೂರನೇ ವಿಭಾಗದ ನಿವಾಸಿಗಳಿಗೆ ಪ್ರವಾಹದ ಆತಂಕ ಕಾಡುತ್ತಿದೆ.
ಪೊನ್ನಂಪೇಟೆ, ತಿತಿಮತಿ, ಪಾಲಿಬೆಟ್ಟ, ಹುದಿಕೇರಿ, ಟಿ. ಶೆಟ್ಟಿಗೇರಿ, ಬಿರುನಾಣಿ, ತೆರಾಲು, ಬಿ.ಶೆಟ್ಟಿಗೇರಿ, ಬೀರುಗ ಸೇರಿದಂತೆ ತಾಲೂಕಿನಲ್ಲಿ ಬಹುಭಾಗಗಳಲ್ಲಿ ಮಳೆಯ ತೀವ್ರತೆ ಅಧಿಕಗೊಂಡಿದೆ. ಕೆಲವು ಪ್ರವಾಹ ಪೀಡಿತ ಪ್ರದೇಶಗಳ ನಿವಾಸಿಗಳಿಗೆ ಆತಂಕ ಎದುರಾಗಿದ್ದು, ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಕಂದಾಯ ಇಲಾಖೆ ಮುಂಜಾಗೃತ ಕ್ರಮಗಳನ್ನು ಕೈಗೊಂಡು ಕಾಳಜಿ ಕೇಂದ್ರಗಳನ್ನು ತೆರೆಯಲು ಮುಂದಾಗಿದೆ. ಹಾನಿ ಸಂಭವಿಸಿದ ತಾಲೂಕಿನ ಪ್ರದೇಶಗಳಿಗೆ ತಾಲೂಕು ತಹಶೀಲ್ದಾರ್ ಯೋಗಾನಂದ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಇಲಾಖೆಯ ಸಿಬ್ಬಂದಿಗಳಿಗೆ ಸೂಚಿಸಿದ್ದಾರೆ.
ನಾಪೋಕ್ಲು: ನಾಪೋಕ್ಲು ವ್ಯಾಪ್ತಿಯಲ್ಲಿ ಗುರುವಾರ ಸಂಜೆಯಿAದ ಬಿರುಸಿನ ಮಳೆ ಸುರಿಯುತ್ತಿದ್ದು, ಮೂರ್ನಾಡು-ನಾಪೋಕ್ಲು ರಸ್ತೆ, ಕಕ್ಕಬ್ಬೆ-ಇಗ್ಗುತ್ತಪ್ಪ ದೇವಳ ರಸ್ತೆ, ಕಕ್ಕಬ್ಬೆ-ಪೈನರಿ ದರ್ಗಾ ರಸ್ತೆ ಮತ್ತು ಯಡಪಾಲ-ಕಡಂಗ ರಸ್ತೆಯಲ್ಲಿ ಪ್ರವಾಹ ಉಂಟಾಗಿದ್ದು, ರಸ್ತೆ ಸಂಚಾರ ಕಡಿತಗೊಂಡಿದೆ. ಮಳೆ ಇದೇ ರೀತಿ ಮುಂದುವರೆದರೆ, ಕಕ್ಕಬ್ಬೆ-ವೀರಾಜಪೇಟೆ ಮುಖ್ಯರಸ್ತೆ, ಕೊಳಕೇರಿ-ಕೋಕೇರಿ ರಸ್ತೆ, ನಾಪೋಕ್ಲು-ಪಾರಾಣೆ ರಸ್ತೆಯ ಕೈಕಾಡು ಬಳಿ ಹಾಗೂ ನಾಪೋಕ್ಲು-ಮಡಿಕೇರಿ ಮುಖ್ಯರಸ್ತೆಯ ಕೊಟ್ಟಮುಡಿ ಬಳಿ ಪ್ರವಾಹ ಉಂಟಾಗುವ ಭೀತಿ ಮೂಡಿದೆ.
ಮಳೆ ಮತ್ತು ಗಾಳಿಯ ಕಾರಣದಿಂದ ಕುಂಜಿಲ-ಕಕ್ಕಬ್ಬೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರಂದೋಡ ಗ್ರಾಮದ ಬಿದ್ದಂಡ ತಟ್ಟುವಿನಲ್ಲಿ ಕುಡಿಯರ ಕುಟ್ಟಪ್ಪ ಅವರ ಮನೆ ಕುಸಿದು ಬಿದ್ದಿದೆ. ತಾತ್ಕಾಲಿಕ ಪರಿಹಾರವಾಗಿ ಗ್ರಾಮ ಪಂಚಾಯಿತಿ ವತಿಯಿಂದ ಟಾರ್ಪಲ್ ನೀಡಲಾಗಿದೆ. ನಷ್ಟದ ಬಗ್ಗೆ ಕಂದಾಯ ಇಲಾಖಾಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಹರೀಶ್ ತಿಳಿಸಿದ್ದಾರೆ. ಮೋಡ ಕವಿದ ವಾತಾವರಣದೊಂದಿಗೆ ಮಳೆಯ ಪ್ರಮಾಣ ಹಾಗೆಯೇ ಮುಂದುವರೆದಿದ್ದು, ಜನ ಮನೆಯಿಂದ ಹೊರ ಬಾರದ ಪರಿಸ್ಥಿತಿ ನಿರ್ಮಾಣಗೊಂಡಿದೆ. ಪೊನ್ನಂಪೇಟೆ: ದಕ್ಷಿಣ ಕೊಡಗಿನಲ್ಲಿ ಪುಷ್ಯ ಮಳೆಯ ಆರ್ಭಟ ಮುಂದುವರೆದಿದ್ದು, ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂದ ಗ್ರಾಮದ ಬಸವೇಶ್ವರ ಬಡಾವಣೆಯ ಸಂಪರ್ಕ ಸೇತುವೆ ಸಂಪೂರ್ಣ ನೀರಿನಲ್ಲಿ ಮುಳುಗಡೆಯಾಗಿದೆ. ಇದರಿಂದಾಗಿ ಕಳೆದೆರಡು ದಿನದಿಂದ ಈ ಭಾಗದ ಜನರು ಬಡಾವಣೆಯಿಂದ ಹೊರಗೆ ಬರಲಾಗದೆ ಸಂಕಷ್ಟಕ್ಕೊಳಗಾಗಿದ್ದಾರೆ. ಗೋಣಿಕೊಪ್ಪಲು: ದ.ಕೊಡಗಿನ ಭಾಗದಲ್ಲಿ ಕಳೆದೆರಡು ದಿನಗಳಿಂದ ಸುರಿದ ಮಳೆಗೆ ಕೆಲವೆಡೆ ನಷ್ಟ ಸಂಭವಿಸಿವೆ. ದೇವರಪುರ ಪಂಚಾಯಿತಿ ವ್ಯಾಪ್ತಿಯ ದೇವರಕಾಡು ಪೈಸಾರಿಯಲ್ಲಿ ವಾಸವಿರುವ ಮುತ್ತ ಎಂಬುವರ ಮನೆಯ ಮೇಲೆ ಮುಂಜಾನೆ ೩ ಗಂಟೆಯ ವೇಳೆ ಬೃಹತ್ ಗಾತ್ರದ ಮರವೊಂದು ಬುಡ ಸಹಿತ ಬಿದ್ದಿದ್ದು ಅದೃಷ್ಟವಶಾತ್ ಮನೆಯಲ್ಲಿದ್ದವರಿಗೆ ಯಾವುದೇ ತೊಂದರೆ ಸಂಭವಿಸಿಲ್ಲ. ಮರವು ಮನೆಯ ಒಂದು ಪಾರ್ಶ್ವಕ್ಕೆ ಬಿದ್ದಿರುವುದರಿಂದ ಮನೆಯಲ್ಲಿದ್ದ ೫ ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೆ.ಬಾಡಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಿವಾಸಿ ಜಿ.ಕುಶಾಲಪ್ಪ ಎಂಬುವರ ಮನೆ ಗೋಡೆ ಕುಸಿತಗೊಂಡಿದೆ. ರೆವೆನ್ಯೂ ಅಧಿಕಾರಿಗಳಾದ ಮಂಜುನಾಥ್, ಸುಧೀಂದ್ರ ತೆರಳಿ ಪರಿಶೀಲನೆ ನಡೆಸಿದ್ದಾರೆ. ಮಳೆಯು ಒಂದೇ ಸಮನೆ ಸುರಿಯುತ್ತಿರುವುದರಿಂದ ದ.ಕೊಡಗಿನಲ್ಲಿ ವಿದ್ಯುತ್ ಅಡಚಣೆ ಉಂಟಾಗಿದೆ.
ಗೋಣಿಕೊಪ್ಪ ಸುತ್ತ ಮುತ್ತಲಿನ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬಗಳು, ಟ್ರಾನ್ಸ್ಫಾರ್ಮರ್‌ಗಳು ಹಾಳಾಗಿದ್ದು ಚೆಸ್ಕಾಂ ಇಲಾಖೆಯ ಸಿಬ್ಬಂದಿಗಳು ವಿದ್ಯುತ್ ಸಮಸ್ಯೆ ಪರಿಹರಿಸಲು ಸತತ ಪ್ರಯತ್ನ ಮುಂದುವರೆಸುತ್ತಿದ್ದಾರೆ. ಮಳೆ,ಗಾಳಿಯಿಂದಾಗಿ ವಿದ್ಯುತ್ ಕಂಬಗಳು, ಟ್ರಾನ್ಸ್ಫಾರ್ಮರ್‌ಗಳು ಹಾಳಾಗುತ್ತಿವೆ. ವಿಷಯ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಂಡು ನಾಗರಿಕರಿಗೆ ವಿದ್ಯುತ್ ನೀಡಲು ಶ್ರಮಿಸುತ್ತೇವೆ. ಮಧ್ಯರಾತ್ರಿ ಹಾಗೂ ಮುಂಜಾನೆ ವೇಳೆಯಲ್ಲಿ ಘಟನೆ ಸಂಭವಿಸುತ್ತಿರುವುದರಿAದ ತುರ್ತು ಕೆಲಸ ನಿರ್ವಹಿಸಲು ಚೆಸ್ಕಾಂ ಸಿಬ್ಬಂದಿಗಳಿಗೆ ಸಾಧ್ಯವಾಗುತ್ತಿಲ್ಲ. ನಂತರ ಸ್ಥಳಕ್ಕೆ ತೆರಳಿ ವಿದ್ಯುತ್ ಕಂಬ ಬದಲಾಯಿಸುವುದು ಟ್ರಾನ್ಸ್ಫಾರ್ಮರ್‌ಗಳನ್ನು ಬದಲಾಯಿಸಿ ಆದಷ್ಟು ಬೇಗನೇ ಗ್ರಾಹಕರಿಗೆ ವಿದ್ಯುತ್ ನೀಡಲು ಶ್ರಮ ವಹಿಸುತ್ತಿದ್ದೇವೆ. ಎಂದು ಗೋಣಿಕೊಪ್ಪ ಚೆಸ್ಕಾಂನ ಸಹಾಯಕ ಇಂಜಿನಿಯರ್ ಕೃಷ್ಣಕುಮಾರ್ ಮಾಹಿತಿ ನೀಡಿದರು.
ಶನಿವಾರಸಂತೆ: ಶನಿವಾರಸಂತೆ ವಿಭಾಗದಲ್ಲಿ ಕಳೆದ ನಾಲ್ಕೆöÊದು ದಿನಗಳಿಂದ ಸುರಿಯುತ್ತಿರುವ ಗಾಳಿ - ಮಳೆಗೆ ಪಂಚಾಯಿತಿ ವ್ಯಾಪ್ತಿಯ ಗುಂಡೂರಾವ್ ಬಡಾವಣೆಯ ನಿವಾಸಿ ಗಿರಿಜಾ ಅವರ ವಾಸದ ಮನೆಯ ಗೋಡೆ ಬಿರುಕು ಬಿಟ್ಟಿದ್ದು, ಮುನ್ನೆಚ್ಚರಿಕೆಯಾಗಿ ಸ್ಥಳಾಂತರಗೊಳಿಸಲಾಗಿದೆ.
ಮನೆ ಬೀಳುವ ಹಂತದಲ್ಲಿರುವುದನ್ನು ಗಮನಿಸಿದ ಶನಿವಾರಸಂತೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಕಂದಾಯ ಇಲಾಖೆಯವರು, ಈ ಮನೆಯನ್ನು ಪರಿಶೀಲಿಸಿ, ಅಪಾಯದಲ್ಲಿರುವ ಮನೆಯಲ್ಲಿ ವಾಸವಿರುವವರನ್ನು ತೆರುವುಗೊಳಿಸಲು ಸೂಚಿಸಲಾಗಿ ಗಿರಿಜಾ ಅವರನ್ನು ಬೇರೆ ಕಡೆಗೆ ಸ್ಥಳಾಂತರಿಸಲಾಯಿತು ಹಾಗೂ ಅಕ್ಕ ಪಕ್ಕದ ಮನೆಯವರಿಗೆ ಎಚ್ಚರಿಕೆಯಿಂದ ಇರಲು ಸೂಚಿಸಲಾಯಿತು.
ಮಳೆ - ಗಾಳಿಗೆ ಕುಸಿದು ಬಿದ್ದ ಮನೆ
ಬಿಡುವು ನೀಡದೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆ ಹಾಗೂ ಗಾಳಿಯ ಅಬ್ಬರಕ್ಕೆ ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಳುಗಳಲೆ ಗ್ರಾಮದ ಜಯಮ್ಮ ಎಂಬವರ ಮನೆ ಕುಸಿದು ಬಿದ್ದು ಹಾನಿ ಸಂಭವಿಸಿದೆ. ಒಂಟಿಯಾಗಿ ವಾಸಿಸುತ್ತಿದ್ದ ವಯೋದೃದ್ಧೆ ಜಯಮ್ಮ ಮಳೆ ಹಾನಿ ಬಗ್ಗೆ ಕಂದಾಯ ಇಲಾಖೆಗೆ ಅರ್ಜಿ ಸಲ್ಲಸಿರುತ್ತಾರೆ. ಕಂದಾಯ ಅಧಿಕಾರಿ ಮಧುಸೂದನ, ಕಂದಾಯ ಪರಿವೀಕ್ಷಕ ಮಂಜುನಾಥ್, ಗ್ರಾಮ ಲೆಕ್ಕಾಧಿಕಾರಿ ಸಂತೋಷ್, ದುಂಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೂರ್ಣಿಮಾ ಕಿರಣ್, ಉಪಾಧ್ಯಕ್ಷ ನಿತಿನ್, ಸದಸ್ಯರಾದ ಮನಮಹಾಂತೇಶ್, ಕಾಂತರಾಜ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಚೆಟ್ಟಳ್ಳಿ: ಮಳೆಗಾಲ ಬಂತೆAದರೆ ಸಾಕು ಮಡಿಕೇರಿ ತಾಲೂಕಿನ ಮುಕ್ಕೋಡ್ಲು ಹಾಗೂ ಹೆಮ್ಮೆತ್ತಾಳುವಿನ ಸಂಪರ್ಕ ಕೊಂಡಿಯಾದ ಸೇತುವೆಯ ಸುತ್ತೆಲ್ಲ ನೀರು ತುಂಬಿ ಸಂಪರ್ಕವೇ ಸಂಪೂರ್ಣ ಕಡಿತಗೊಳ್ಳುತ್ತದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಹಲವು ವರ್ಷಗಳ ಹಿಂದೆ ತೂಗುಸೇತುವೆಯಲ್ಲಿ ತೂಗಾಡಿ ಮನೆಸೇರುತಿದ್ದ ಜನ ನಂತರದಲ್ಲಿ ಸೇತುವೆ ನಿರ್ಮಿಸಲಾಯಿತು. ಕಳೆದೆರಡು ವರ್ಷಗಳ ಹಿಂದೆ ಸುರಿದ ಭಾರೀ ಮಳೆಗೆ ಮುಕ್ಕೋಡ್ಲು ಸಮೀಪದ ಹಮ್ಮಿಯಾಲ, ಹೆಮ್ಮೆತ್ತಾಳು, ಮೇಘತ್ತಾಳು ಅತಿವೃಷ್ಟಿಯಿಂದ ತೀವ್ರ ತೊಂದರೆಗೆ ಒಳಗಾಯಿತು. ಆ ಸಂದರ್ಭ ಬಾರೀ ಗಾತ್ರದ ಮರ, ಗಿಡ, ಮಣ್ಣು ಹರಿದು ಬಂದ ಪರಿಣಾಮ ಮುಕ್ಕೋಡ್ಲು- ಹೆಮ್ಮೆತ್ತಾಳು ನಡುವಿನ ಸೇತುವೆಯ ಕೆಳಭಾಗದ ಕಂಬಗಳೆಲ್ಲಾ ಹಾನಿಗೊಳಗಾದವು. ಆಗಿನ ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳು, ಇಂಜಿನಿಯರ್ ಗಳು ಖುದ್ದಾಗಿ ಪರಿಶೀಲಿಸಿದ್ದರು.
ವೈಜ್ಞಾನಿಕ ರೀತಿಯಲ್ಲಿ ಸೇತುವೆ ಕಾಮಗಾರಿಯನ್ನು ಮಾಡಿಕೊಡ ಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರೂ ಈವರೆಗೂ ಯಾವುದೇ ಸೇತುವೆ ಕಾಮಗಾರಿ ಕೈಗೊಳ್ಳಲಿಲ್ಲ. ಈ ವರ್ಷದ ಮಳೆಗಾಲ ಪ್ರಾರಂಭಗೊAಡು ಮಳೆ ನೀರಿನ ರಭಸಕ್ಕೆ ಸೇತುವೆ ಮೇಲೆ ನೀರು ರಭಸವಾಗಿ ಹರಿಯುತ್ತಿರುವ ಪರಿಣಾಮ ಸಂಪರ್ಕವೇ ಕಡಿತಗೊಂಡಿದೆ. ಸೇತುವೆಯ ಎರಡು ಬದಿಗಳಿಗೆ ತಡೆ ನಿರ್ಮಿಸದ ಪರಿಣಾಮ ಅಪಾಯ ಆಹ್ವಾನಿಸುತ್ತಿದೆ. ಗ್ರಾಮಸ್ಥರು ನಿತ್ಯದ ಸಾಮಗ್ರಿಗಳನ್ನು ವಾಹನದಲ್ಲಿ ಸಾಗಿಸುವಾಗ ಭಯಪಡುವಂತಾಗಿದೆ. ಹಿರಿಯ ವಯಸ್ಸಿನವರು, ಅನಾರೋಗ್ಯಸ್ಥರು, ಮಕ್ಕಳಿರುವ ಈ ಪ್ರದೇಶದಲ್ಲಿ ಮಳೆಗಾಲದಲ್ಲಿ ಮೊಬೈಲ್ ಸಂಪರ್ಕ ಇರುವುದೇ ಇಲ್ಲ ಜೊತೆಗೆ ತುರ್ತು ಸಂದರ್ಭದಲ್ಲಿ ಸೇತುವೆಯ ಸಂಪರ್ಕ ಕಡಿತ ಗೊಂಡು ತೊಂದರೆ ಅನುಭವಿಸುವಂತಾಗಿದೆ. ಹೆಮ್ಮೆತ್ತಾಳುವಿಗೆ ತೆರಳುವ ರಸ್ತೆ ಮೇಲೆ ಕೂಡ ನೀರು ನಿಂತು ರಸ್ತೆಗೆ ಹಾನಿಯಾಗಿದೆ, ಮುಕ್ಕೋಡ್ಲು ಹಾಗೂ ನಾಗಬಾಣೆ ಸಂಪರ್ಕ ರಸ್ತೆ ಮೇಲೆ ಕೂಡ ನೀರು ಹರಿಯುತ್ತಿದ್ದು, ಸಂಪರ್ಕ ಕಡಿತಗೊಂಡಿದೆ. ಜಿಲ್ಲಾಧಿಕಾರಿಗಳು ಜನಪ್ರತಿನಿಧಿಗಳು ಸಂಪರ್ಕ ಸೇತುವೆಗೆ ಶಾಶ್ವತ ಪರಿಹಾರ ಕೈಗೊಳ್ಳಬೇಕಿದೆ.ಭಾಗಮಂಡಲ: ಭಾಗಮಂಡಲ ವ್ಯಾಪ್ತಿಯಲ್ಲಿ ಗುರುವಾರ ಮಳೆ ಬಿಡುವು ನೀಡಿದ್ದು ರಾತ್ರಿ ಬಿರುಸಿನಿಂದ ಸುರಿಯಿತು. ಶುಕ್ರವಾರ ಬೆಳಗ್ಗಿನಿಂದಲೇ ಧಾರಾಕಾರ ಮಳೆಯಾಗಿದೆ. ಬೆಟ್ಟಶ್ರೇಣಿಗಳಲ್ಲಿ ಸುರಿದ ಮಳೆ ಗಾಳಿಯಿಂದಾಗಿ ತ್ರಿವೇಣಿ ಸಂಗಮ ಭರ್ತಿಯಾಗಿದೆ. ಭಾಗಮಂಡಲ-ನಾಪೋಕ್ಲು ರಸ್ತೆಯ ಮೇಲೆ ೪ ಅಡಿ ನೀರು ಹರಿಯುತ್ತಿದ್ದು ಸಂಚಾರ ಸ್ಥಗಿತಗೊಂಡಿದೆ.ಮಡಿಕೇರಿ ರಸ್ತೆಯಲ್ಲಿ ೩ ಅಡಿ ನೀರು ಹರಿಯುತ್ತಿದೆ. ಭಾಗಮಂಡಲ ವ್ಯಾಪ್ತಿಯಲ್ಲಿ ಪ್ರವಾಹದಿಂದಾಗಿ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದ್ದು ರಾಫ್ಟಿಂಗ್ ಮತ್ತು ಬೋಟಿಂಗ್ ಸೌಲಭ್ಯ ಕಲ್ಪಿಸಿಕೊಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ತಲಕಾವೇರಿ ರಸ್ತೆಯಲ್ಲಿ ಭೂಕುಸಿತದ ಹಿನ್ನೆಲೆಯಲ್ಲಿ ತುರ್ತುಸೇವೆ ಕಲ್ಪಿಸಿಕೊಡಬೇಕು ಎಂದು ಸ್ಥಳೀಯರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಬಿರುಸಿನ ಮಳೆಯಿಂದ ಅಯ್ಯಂಗೇರಿ ಗ್ರಾಮದ ಚಿಟ್ಟಿಯಂಡ ಪೊನ್ನವ್ವ (ರಾಣಿ) ಅವರ ಮನೆಯ ಹಿಂಭಾಗದ ಬರೆ ಕುಸಿದಿದ್ದು ಯಾವುದೇ ಅನಾಹುತ ಸಂಭವಿಸಿಲ್ಲ.ಮನೆಯ ಗೋಡೆಗಳು ಬಿರುಕು ಬಿಟ್ಟಿವೆ. ಮನೆಯೊಳಗೆ ಕೆಸರುನೀರು ತುಂಬಿ ಸಮಸ್ಯೆಯಾಗಿದೆ. ೨೦ಕ್ಕೂ ಹೆಚ್ಚಿನ ಸ್ಥಳೀಯರು ಮಣ್ಣು ತೆಗೆದು ಸಹಕರಿಸಿದರು. ಸ್ಥಳಕ್ಕೆ ಅಯ್ಯಂಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಭೇಟಿ ನೀಡಿ ಪರಿಶೀಲಿಸಿದರು. ಸೂಕ್ತ ದಾಖಲೆಗಳನ್ನು ಒದಗಿಸಿದರೆ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಕಳೆದ ೨೪ ಗಂಟೆಗಳಲ್ಲಿ ತಲಕಾವೇರಿ ವ್ಯಾಪ್ತಿಯಲ್ಲಿ ೯ ಇಂಚು ಮಳೆಯಾಗಿದೆ. ಚೇರಂಗಾಲದಲ್ಲಿ ೭ ಇಂಚು ಮಳೆ ಸುರಿದಿದೆ.
ಪ್ರವಾಹ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಭಾಗಮಂಡಲ ಹೋಬಳಿಯಲ್ಲಿ ಒಟ್ಟು ೯೩ ಮನೆಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ನೋಟೀಸು ನೀಡಲಾಗಿದೆ. ಚೇರಂಗಾಲ, ಕೋರಂಗಾಲ, ತಣ್ಣಿಮಾನಿ ಗ್ರಾಮಗಳು ಸೇರಿದಂತೆ ಭಾಗಮಂಡಲ ಪಂಚಾಯಿತಿ ವ್ಯಾಪ್ತಿಯಲ್ಲಿ ೭೫ ಮನೆಗಳಿಗೆ ನೋಟೀಸು ನೀಡಲಾಗಿದೆ. ರ‍್ಯಾಫ್ಟಿಂಗ್ ಮತ್ತು ಬೋಟ್ ಸೌಲಭ್ಯಗಳಿದ್ದು ಪ್ರವಾಹ ಹೆಚ್ಚುವ ಸಂದರ್ಭದಲ್ಲಿ ಜನರ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.ಮಡಿಕೇರಿ: ತಾಲೂಕಿನ ಗಾಳಿಬೀಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರೆಕುಸಿತ ಉಂಟಾಗಿದೆ. ಇಲ್ಲಿನ ಕಾಲೂರು ದೇವಸ್ತೂರು ನಡುವೆ ಸಂಪರ್ಕ ಕಡಿದುಕೊಂಡಿತ್ತು. ರಸ್ತೆಗೆ ಅಡ್ಡಲಾಗಿ ಬಿದ್ದ ಮಣ್ಣನ್ನು ಜೆಸಿಬಿ ಮೂಲಕ ಪ್ರಾಕೃತಿಕ ವಿಕೋಪದ ತಂಡದಿAದ ತೆರವು ಕಾರ್ಯ ನಡೆಸಿ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.ಕಡಂಗ: ಕಳೆದ ೩ ದಿನಗಳಿಂದ ಜಿಲ್ಲೆಯಲ್ಲಿ ರಭಸವಾಗಿ ಎಡೆಬಿಡದೆ ಇರುವ ಮಳೆಯಿಂದ ಅರಪಟ್ಟು ಕಡಂಗ ವ್ಯಾಪ್ತಿಯಲ್ಲಿ ರಬಸವಾದ ಮಳೆ-ಗಾಳಿಯಿಂದ ಸಮೀಪದ ಕಡಂಗ ನಾಪೋಕ್ಲು ಸಂಪರ್ಕ ರಸ್ತೆಯಲ್ಲಿರುವ ಎಡಪಾಲ ಸೇತುವೆಯು ಮುಳುಗಡೆಯಾಗಿದೆ.ಮಳೆ-ಗಾಳಿ ಹೆಚ್ಚಾಗಿರುವುದರಿಂದ ಬಹುತೇಕ ರಸ್ತೆ ಸಂಪರ್ಕ ಕಡಿತಗೊಂಡಿದೆ. ಅರಪಟ್ಟು ಗ್ರಾಮದ ಗಫೂರ್ ರವರ ಮನೆಯ ಹಿಂಬದಿ ಬರೆ ಕುಸಿತ ಉಂಟಾಗಿದೆ. ಈ ಭಾಗಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡು ಕಗ್ಗತ್ತಲು ಆವರಿಸಿದೆ.ಗುಡ್ಡೆಹೊಸೂರು : ಕಳೆದ ಒಂದು ದಿನದಲ್ಲಿ ಸುರಿದ ಭಾರೀ ಮಳೆಯಿಂದ ಗುಡ್ಡೆಹೊಸೂರು ಸುತ್ತಮುತ್ತಲಿನ ಭತ್ತನಾಟಿ ಮಾಡಬೇಕಾದ ಗದ್ದೆಗಳು ಜಲಾವೃತಗೊಂಡಿವೆ. ಜಿಲ್ಲೆಯಲ್ಲಿ ಮತ್ತೆ ಮಳೆ ಜಾಸ್ತಿಯಾದಲ್ಲಿ ಮತ್ತಷ್ಟು ಅನಾಹುತಗಳು ಸಂಭವಿಸಲಿವೆ. ಬಾಳುಗೋಡು ಬಳಿ ಗದ್ದೆಗಳಿಗೆ ನೀರು ನುಗ್ಗಿದ್ದು, ಅಲ್ಲಿನ ಶುಂಠಿ ಬೆಳೆಗೆ ತೊಂದರೆಯಾಗುವ ಸಾಧ್ಯತೆ ಇದೆ. ಕ್ಷಣಕ್ಷಣದಲ್ಲಿಯು ಕಾವೇರಿ ನದಿಯ ನೀರಿನ ಹರಿಯುವ ಪ್ರಮಾಣ ಜಾಸ್ತಿಯಾಗುತ್ತಿದೆ. ಗುಡ್ಡೆಹೊಸೂರು ಬಳಿಯ ಕಾವೇರಿ ನದಿತೀರದ ಜನರಿಗೆ ಗ್ರಾಮ ಪಂಚಾಯ್ತಿಯವರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚನೆ ನೀಡಿದ್ದಾರೆ.
ಕಣಿವೆ : ಪುಷ್ಯ ಮಳೆಯ ಆರ್ಭಟದಿಂದಾಗಿ ಹಾರಂಗಿ ಜಲಾಶಯಕ್ಕೆ ೧೮ ಸಾವಿರ ಕ್ಯೂಸೆಕ್ಸ್ ಅತ್ಯಧಿಕ ನೀರಿನ ಒಳ ಹರಿವು ಇರುವುದರಿಂದ ಜಲಾಶಯದಿಂದ ಶುಕ್ರವಾರ ಸಂಜೆ ಅಷ್ಟೇ ಪ್ರಮಾಣದ ನೀರನ್ನು ಹೊರಬಿಟ್ಟ ಪರಿಣಾಮ ಜಲಾಶಯದ ಮುಂಬದಿಯಲ್ಲಿರುವ ಸೇತುವೆ ಮುಳುಗಡೆಯಾಗಿದೆ. ಇದರಿಂದಾಗಿ ಹಾರಂಗಿಯಿAದ ಯಡವನಾಡು, ಸೋಮವಾರಪೇಟೆ ಕಡೆ ಸಂಪರ್ಕ ಕಲ್ಪಿಸುವ ಮಾರ್ಗ ಬಂದ್ ಆಗಿದೆ.
ಜಲಾಶಯದಿಂದ ೧೬ ಸಾವಿರ ಕ್ಯೂಸೆಕ್ಸ್ ನೀರು ಬಿಟ್ಟಾಗ ಮುಳುಗಡೆಯಾಗುವ ಈ ಸೇತುವೆಯಿಂದ ಸ್ಥಳೀಯ ಜನರ ಸಂಚಾರಕ್ಕೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯದ ಮುಂಬದಿಯ ನದಿಗೆ ಅಡ್ಡಲಾಗಿ ಬದಲೀ ಸೇತುವೆ ನಿರ್ಮಿಸಲು ಈಗಾಗಲೇ ನೀರಾವರಿ ನಿಗಮದ ವತಿಯಿಂದ ೨೫ ಕೋಟಿ ರೂ. ಗಳ ಕ್ರಿಯಾ ಯೋಜನೆ ಸಿದ್ದಪಡಿಸಿದ್ದಾರೆ.
ಐದನೇ ಪುಟಕ್ಕೆ
ಸೋಮವಾರಪೇಟೆ: ತಾಲೂಕಿನಾದ್ಯಂತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಜನಜೀವನ ತತ್ತರಿಸಿದೆ. ಗ್ರಾಮೀಣ ಪ್ರದೇಶದಲ್ಲಂತೂ ಎಡೆಬಿಡದೇ ಸುರಿಯುತ್ತಿರುವ ಮಳೆ ಅಪಾಯದ ಮುನ್ಸೂಚನೆ ನೀಡುತ್ತಿದ್ದು, ಗಾಳಿಯ ರಭಸಕ್ಕೆ ಮರಗಳು ಉರುಳುತ್ತಿವೆ. ಹೊಳೆ, ನದಿ ತೊರೆಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಹಲವೆಡೆ ಸಂಪರ್ಕ ಕಡಿತಗೊಂಡಿದೆ.
ತಾಲೂಕಿನ ಕುಡಿಗಾಣ ಗ್ರಾಮದ ಹೊಳೆ ತುಂಬಿ ಹರಿಯುತ್ತಿರುವುದರಿಂದ ಸಂಪರ್ಕ ಸೇತುವೆ ಮುಳುಗಡೆಯಾಗಿದ್ದು, ಕುಡಿಗಾಣ ಗ್ರಾಮ ಹೊರ ಪ್ರಪಂಚದ ಸಂಪರ್ಕ ಕಳೆದುಕೊಂಡಿದೆ. ಈ ಭಾಗಕ್ಕೆ ವ