ಮಡಿಕೇರಿ, ಜು. ೨೩: ಬಾಲಮಂದಿರಗಳಲ್ಲಿ ಮಕ್ಕಳ ಪೋಷಣೆ ಹಾಗೂ ರಕ್ಷಣೆ ಸಂಬAಧಿಸಿದAತೆ ಮಕ್ಕಳು ಶಾಲೆಗೆ ತೆರಳಲು ಹಾಗೂ ಇತರೆ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಬೆಂಗಳೂರಿನ ಕೇಂದ್ರ ತಾಂತ್ರಿಕ ಸಂಸ್ಥೆ ವತಿಯಿಂದ ಕೊಡಗು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಒಂದು ಮಿನಿ ಬಸ್‌ನ್ನು ಹಂಚಿಕೆ ಮಾಡಿದೆ.

ಈ ಹಿನ್ನೆಲೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರ ಸಮ್ಮುಖದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕೇಂದ್ರ ತಾಂತ್ರಿಕ ಸಂಸ್ಥೆ ಕಾರ್ಯಪಾಲಕ ಎಂಜಿನಿಯರ್ ಮಹಾಬಲೇಶ್ವರ ಅವರು ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಮಿನಿ ಬಸ್ ವಾಹನದ ಕೀ ಹಸ್ತಾಂತರಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಅರವಿಂದ ಬಾಬು, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅರುಂಧತಿ, ಎಇಇ ಶೇಖರ್ ಇತರರು ಇದ್ದರು.