ಸೋಮವಾರಪೇಟೆ,ಜು.೨೩: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿAದ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ ಮೇರೆಗೆ ಎಲ್ಲಾ ನೌಕರರಿಗೆ ಶೇ.೧೧ ರಷ್ಟು ತುಟ್ಟಿ ಭತ್ಯೆಯನ್ನು ಮಂಜೂರು ಮಾಡಿದೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಪ್ರದೀಪ್ ತಿಳಿಸಿದ್ದಾರೆ. ಕೋವಿಡ್೧೯ ಕಾರಣದಿಂದಾಗಿ ತಡೆಹಿಡಿಯಲಾಗಿದ್ದ ೩ ಕಂತುಗಳ ತುಟ್ಟಿ ಭತ್ಯೆಯನ್ನು ಸಂಘದ ಮನವಿ ಮೇರೆಗೆ ಇದೀಗ ಸರ್ಕಾರ ಮಂಜೂರು ಮಾಡಿದ್ದು ಇದರಿಂದ ಎಲ್ಲಾ ನೌಕರರಿಗೆ ಅನುಕೂಲವಾಗಿದೆ. ಸರ್ಕಾರದ ಈ ಆದೇಶದಿಂದಾಗಿ ೬ಲಕ್ಷ ರಾಜ್ಯ ಸರ್ಕಾರಿ ನೌಕರರು, ೪.೫೦ಲಕ್ಷ ಪಿಂಚಣಿದಾರರು, ೩ಲಕ್ಷ ನಿಗಮ ಮಂಡಳಿ ನೌಕರರಿಗೆ ಅನುಕೂಲ ಕಲ್ಪಿಸಲಾಗಿದೆ ಎಂದು ಸಂಘದ ಕಾರ್ಯದರ್ಶಿ ನಾಗೇಶ್ ತಿಳಿಸಿದ್ದಾರೆ.