ಶನಿವಾರಸಂತೆ, ಜು. ೨೨: ಸಮೀಪದ ಕೊಡ್ಲಿಪೇಟೆಯ ಮಹಿಳಾ ಸಮಾಜ ಆವರಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪರಿಸರ ಜಾಗೃತಿ ಹಾಗೂ ಗಿಡ ನಾಟಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮ ಉದ್ಘಾಟಿಸಿದ ಶನಿವಾರಸಂತೆ ವಲಯ ಅರಣ್ಯಾಧಿಕಾರಿ ಪ್ರಫುಲ್ ಶೆಟ್ಟಿ ಮಾತನಾಡಿ, ಆಮ್ಲಜನಕಕ್ಕೆ ಎಲ್ಲೆಡೆ ಹಾಹಾಕಾರವೆದ್ದು ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗಿರು ವಾಗ ಜನರು ಮರಗಿಡಗಳನ್ನು ಉಳಿಸಬೇಕು, ಬೆಳೆಸಬೇಕು. ಪ್ರತಿಯೊಬ್ಬರು ಒಂದೊAದು ಗಿಡ ನೆಡುವದರಿಂದ ಪ್ರಕೃತಿದತ್ತ ಆಮ್ಲಜನಕ ತಾನಾಗೇ ಸಿಗುತ್ತದೆ ಗಿಡ ನೆಡಿ, ಬೆಳೆಸಿ, ಉಳಿಸಿ ಎಂದು ಕರೆ ನೀಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಲಯ ಮೇಲ್ವಿಚಾರಕ ಭರತ್‌ಕುಮಾರ್ ಜಾಗೃತಿ ಸಮಿತಿ ಉಪಾಧ್ಯಕ್ಷ ಡಿ. ಭಗವಾನ್, ವೀರಶೈವ ಸಮಾಜದ ಅಧ್ಯಕ್ಷ ಬಿ.ಕೆ. ಯತೀಶ್, ಪ್ರೌಢಶಾಲೆ ಶಿಕ್ಷಕಿ ಸುಧಾಮಣಿ, ಪ್ರಮುಖರಾದ ತ್ಯಾಗರಾಜ್, ರಾಜೇಶ್ ಮಾತನಾಡಿದರು. ನಂತರ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲೂ ಗಿಡಗಳನ್ನು ನೆಡುವ ಮೂಲಕ ವೈದ್ಯಾಧಿಕಾರಿ ಡಾ. ಪವಿತ್ರಾ ಗಿಡ ನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆರೋಗ್ಯ ಕೇಂದ್ರದ ಡಾ. ಆದಿರಾ, ಸಿಬ್ಬಂದಿ, ಆರೋಗ್ಯ ನಿರೀಕ್ಷಣಾಧಿಕಾರಿ ದುಂಬಿತಾ, ಕೊಡ್ಲಿಪೇಟೆ ಅರಣ್ಯಾಧಿಕಾರಿ ಗೋವಿಂದ್‌ರಾಜ್, ಸಿಬ್ಬಂದಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೇವಾ ಪ್ರತಿನಿಧಿಗಳಾದ ಷಂಶಾದ್, ಸುಧಾ ಪದ್ಮಾವತಿ, ಶಾರದಾ, ಆಶಾ ಕಾರ್ಯಕರ್ತೆ ಕಲಾವತಿ, ಅಂಗನವಾಡಿ ಶಿಕ್ಷಕಿ ಪಂಕಜಾ ಇತರರು ಹಾಜರಿದ್ದರು.ಸಂಪಾಜೆ: ಕೊಡಗು ಸಂಪಾಜೆ ಗ್ರಾಮದ ಸ. ಮಾ.ಪ್ರಾ. ಶಾಲೆಯಲ್ಲಿ ತಾ. ೧೭ರಂದು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ವಿಪತ್ತು ನಿರ್ವಹಣಾ ಘಟಕದ ಸಂಯುಕ್ತ ಆಶ್ರಯದಲ್ಲಿ ಹಣ್ಣಿನ ಗಿಡ ನಾಟಿ ಕಾರ್ಯಕ್ರಮ ಹಾಗೂ ಪರಿಸರ ಮಾಹಿತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ನಿರ್ಮಲ ಭರತ್, ಸದಸ್ಯರುಗಳಾದ ಕುಮಾರ್ ಚೆದ್ಕಾರ್, ರಮಾದೇವಿ ಬಾಲಚಂದ್ರ ಕಳಗಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿಗಳಾದ ಪದ್ಮಯ್ಯ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕ ಹರೀಶ್, ಅರಣ್ಯ ರಕ್ಷಕ ವಿಜಯೇಂದ್ರ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶ್ರೀಧರ್ ಪಡ್ಪು, ಸಂಪಾಜೆ ಶಾಲಾ ಶಿಕ್ಷಕ ವರ್ಗ, ವಿಪತ್ತು ಸ್ವಯಂ ಸೇವಕರಾದ ಹೊನ್ನಪ್ಪ ಪಡ್ಪು, ಚಂದ್ರಶೇಖರ ಎಂ, ಯಶವಂತ ಅಳಿಕೆ, ಉದಯಕುಮಾರ್ ಎ.ಬಿ., ಸುನಿಲ್ ಎ.ಆರ್., ಗೋಪಾಲ ಕಲಾಯಿ, ವಾಣಿ ಜಗದೀಶ್ ಕೆದಂಬಾಡಿ, ಸತ್ಯವತಿ ಕುಂಬಾಡಿ, ಕುಸುಮ ಕನ್ಯಾನ, ಆರತಿ ಕಲಾಯಿ ಪುಷ್ಪಾವತಿ ಬಿ.ಬಿ. ಭಾಗವಹಿಸಿದ್ದರು. ಸಮಾರಂಭದಲ್ಲಿ ವಾಣಿ ಕೆದಂಬಾಡಿ ಪ್ರಾರ್ಥನೆಯಲ್ಲಿ ಮೊದಲ್ಗೊಂಡು ಪುಷ್ಪಾವತಿ ಕೆ.ವಿ. ಸಂಯೋಜಕಿ ಇವರು ಗಣ್ಯರನ್ನು ಸ್ವಾಗತಿಸಿ, ಮೇಲ್ವಿಚಾರಕ ಹರೀಶ್ ಅವರು ನಿರೂಪಿಸಿ, ಆರತಿ ಕಲಾಯಿ ಅವರು ಗಣ್ಯರಿಗೆ ಧನ್ಯವಾದ ಸಮರ್ಪಿಸಿದರು.