ನಾವು ಎಲ್ಲಿಯವರೆಗೆ ಅಸಡ್ಡೆಯಿಂದ ಕೊರೊನಾ ಸನ್ನಡತೆ ಪಾಲಿಸದೆ ನಮ್ಮನ್ನು ನಾವು ಸೋಂಕಿಗೆ ಒಡ್ಡಿಕೊಳ್ಳುತ್ತೇವೆಯೊ ಅಲ್ಲಿಯವರೆಗೆ ಕೊರೊನಾ ವೈರಸ್ ರೂಪಾಂತರಗೊಳ್ಳಲು ವಿಕಸನೀಯ (ಇvoಟuಣioಟಿಚಿಡಿಥಿ) ಒತ್ತಡ ಬೀಳುವುದಿಲ್ಲ. ಅವು ತಮ್ಮ ಸಾಂಕ್ರಮಿಕತೆ (Iಟಿಜಿeಛಿಣiviಣಥಿ) ಮತ್ತು ತೀವ್ರತೆ (ಗಿiಡಿuಟeಟಿಛಿe) ಉಳಿಸಿಕೊಂಡು ನೆಮ್ಮದಿಯಿಂದ ವೃದ್ಧಿಯಾಗಿ ಹರಡುತ್ತಿರು ತ್ತವೆ. ನಾವು ಕೊರೊನಾ ಸನ್ನಡತೆ ಪಾಲಿಸಿದಾಗ, ಹೆಚ್ಚಿನ ಜನರು ಲಸಿಕೆ ಹಾಕಿಕೊಂಡಾಗ, ಸೋಂಕಿಗೊಳಗಾಗುವವರ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತದೆ. ಹೀಗೆ ಬದುಕುಳಿಯಲು ಅಡೆತಡೆಗಳಾದಾಗ ಬದುಕಿ ಉಳಿದರೆ ಸಾಕೆಂದು ಅವು ರೂಪಾಂತರ ಗೊಳ್ಳಲೇಬೇಕಾದ ಪರಿಸ್ಥಿತಿ ನಿರ್ಮಾಣ ವಾಗುತ್ತದೆ. ಇದರಿಂದ ಲಾಭ ಎಂದರೆ ಅವು ರೂಪಾಂತರಗೊಳ್ಳು ವಾಗ ಸೋಂಕಿನ ಸಾಂಕ್ರಮಿಕತೆ ಹೆಚ್ಚು ಮಾಡಿಕೊಂಡು ತೀವ್ರತೆಯನ್ನು ಕಡಿಮೆ ಮಾಡಿಕೊಳ್ಳುತ್ತವೆ. ಇದರಿಂದಾಗಿ ಸೋಂಕು ತಗುಲಿದವರಿಗೆ ಅಪಾಯದ ಮಟ್ಟ ಕಡಿಮೆ ಇರುತ್ತದೆ.

ಜನ ಸಾಮಾನ್ಯರು ಕೊರೊನಾ ಸನ್ನಡತೆ ಪಾಲಿಸದಿರಲು ಮುಖ್ಯ ಕಾರಣ ನಮ್ಮ ಅಂತರಾಳದಲ್ಲಿಯೇ ಇದೆ. ಚೆನ್ನಾಗಿ ಸಂಶೋಧಿಸಲ್ಪಟ್ಟ ಸಾಮಾಜಿಕ ಸೈಕಾಲಜಿಯ (ಔಠಿಣimisಣiಛಿ ಃiಚಿs) ಆಶಾವಾದಿ ಪಕ್ಷÀಪಾತ ಎಂಬ ಸಿದ್ಧಾಂತ ಪ್ರಕಾರ ಹೆಚ್ಚಿನ ಜನರು ಅಪಾಯಗಳನ್ನು ನಿರ್ಲಕ್ಷಿಸುತ್ತಾರೆ. ಒಳ್ಳೆಯ ಘಟನೆಗಳು ನಮ್ಮ ಪಾಲಿಗೆ, ಕೆಟ್ಟ ಘಟನೆಗಳು ಇತರರ ಪಾಲಿಗೆ ಬರುವುದು ಎಂದು ನಂಬುತ್ತಾರೆ. ಕೊರೊನಾ ತಮಗೆ ಬರದು ಇತರರಿಗೆ ಬರುತ್ತದೆ. ಎಂದು ಸನ್ನಡತೆ ಪಾಲಿಸಲು ಹಿಂದೇಟು ಹಾಕುತ್ತಾರೆ. ಆಶಾವಾದ ಪಕ್ಷಪಾತ ಸಿದ್ಧಾಂತ ಏನೇ ಇರಲಿ ನಮಗೆ ಸಾಮಾಜಿಕ ಬದ್ಧತೆ ಇರಬೇಕು. ನಮ್ಮ ನಿರ್ಲಕ್ಷö್ಯದಿಂದ ಇತರರನ್ನು ಕಷ್ಟ ನಷ್ಟಗಳಿಗೆ ದೂಡಲು ನಮಗೆ ಯಾವ ಹಕ್ಕೂ ಇಲ್ಲ. ಇತರರ ಬಗ್ಗೆ ಅನುಭೂತಿ ಮತ್ತು ಅನುಕಂಪದ ಭಾವನೆಯಿಂದ ಕೋವಿಡ್ ನಿಯಮಗಳನ್ನು ಪಾಲಿಸಲೇಬೇಕು.

ರೂಪಾಂತರಿ ವೈರಸ್‌ಗಳು ಮತ್ತು ಲಸಿಕೆ ನಿರ್ಲಕ್ಷö್ಯ ಮಾಡುವ ಕೊರೊನಾ ವೈರಸ್‌ಗಳ ವಿರುದ್ಧ ರಕ್ಷಣೆ ಕೊಡುವಂತಹ ಮಲ್ಟಿ ಎಂಟಿಜನ್ ಲಸಿಕೆ ಕಂಡು ಹಿಡಿಯಲು ಈಗಾಗಲೇ ಸಂಶೋಧನೆಗಳು ನಡೆಯುತ್ತಿವೆ. ಆದರೂ ನಾವು ತುರ್ತಾಗಿ ವ್ಯಾಕ್ಸಿನೇಷನ್ ಮಾಡುವ ವೇಗ ಹೆಚ್ಚಿಸಬೇಕಾಗಿದೆ ಏಕೆಂದರೆ ಡೆಲ್ಟಾ ಕುಲದ ಮೇಲೆ ವ್ಯಾಕ್ಸಿನ್‌ನ ಪರಿಣಾಮ ಕಡಿಮೆ ಇದೆ, ಎಂದಾದರೂ ಮೂಲ ವೈರಸ್ ಆಲ್ಫಾ ವೇರಿಯಂಟ್‌ನ (ಂಟಠಿhಚಿ ಗಿಚಿಡಿiಚಿಟಿಣ) ಮೇಲೆ ವ್ಯಾಕ್ಸಿನ್ ಈಗಲೂ ಪರಿಣಾಮಕಾರಿಯಾಗಿದೆ. ಇದರಿಂದ ಆಸ್ವತ್ರೆಗೆ ದಾಖಲಾಗು ವುದು ಮತ್ತು ಸಾವಿಗೀಡಾಗುವುದು ಬಹುತೇಕ ಇಲ್ಲದಂತಾಗುತ್ತದೆ. ವೈರಾಜಿ ಯಲ್ಲಿ ನೋಬೆಲ್ ಬಹುಮಾನ ವಿಜೇತ ಎoshuಚಿ ಐeಜeಡಿbeಡಿg ಹೇಳಿಕೆ ಸಮಂಜಸವಾಗಿದೆ. -ಡಾ|| ವಿ. ಕೆ. ಚಂಗಪ್ಪ, ನಾಪೋಕ್ಲು