*ಗೋಣಿಕೊಪ್ಪ, ಜು. ೨೧: ಹೃದಯಾಘಾತದಿಂದ ಅಂದಾಜು ೪೦ ವರ್ಷ ಪ್ರಾಯದ ಗಂಡು ಆನೆ ಮಾಯಮುಡಿ ಧನುಗಾಲ ಗ್ರಾಮದಲ್ಲಿ ಮೃತಪಟ್ಟ ಘಟನೆ ಸಂಭವಿಸಿದೆ.

ಧನುಗಾಲ ಗ್ರಾಮದ ಪೊನ್ನಮ್ಮ ನಾಣಯ್ಯ ಅವರ ಕಾಫಿ ತೋಟದಲ್ಲಿ ಆನೆ ಮೃತಪಟ್ಟಿರುವುದು ಗೋಚರಿಸಿದೆ.

ಅರಣ್ಯದಿಂದ ಆಹಾರಕ್ಕಾಗಿ ಕಾಫಿ ತೋಟದ ಮೂಲಕ ಚಲಿಸುತ್ತಿದ್ದಾಗ ಮಂಗಳವಾರ ರಾತ್ರಿ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿರುವುದಾಗಿ ಪಶು ವೈದ್ಯಾಧಿಕಾರಿ ಡಾ. ಚಿಟ್ಟಿಯಪ್ಪ ಅವರ ಮರಣೋತ್ತರ ಪರೀಕ್ಷೆಯಲ್ಲಿ ತಿಳಿದುಬಂದಿದೆ.

ತೋಟದ ಮಾಲೀಕ ಬೆಳಗ್ಗಿನ ಜಾವ ಕಾಫಿ ತೋಟದ ಕೆಲಸ ನಿಭಾಯಿಸಲು ಕಾರ್ಮಿಕರೊಂದಿಗೆ ತೆರಳುತ್ತಿದ್ದಾಗ ಆನೆ ಸತ್ತು ಬಿದ್ದಿರುವುದು ಕಂಡುಬAದಿದೆ. ತಕ್ಷಣ ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಸಹಾಯಕ ಅರಣ್ಯ ಸಂರಕ್ಷಾಧಿಕಾರಿ ಉತ್ತಪ್ಪ, ವಿಭಾಗೀಯ ಅರಣ್ಯಾಧಿಕಾರಿ ಚಕ್ರಪಾಣಿ ಹಾಗೂ ತಿತಿಮತಿ ವಲಯ ಅರಣ್ಯಾಧಿಕಾರಿ ಆಶೋಕ್‌ಹನುಗುಂದ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಆನೆಯ ಮರಣೋತ್ತರ ಪರೀಕ್ಷೆ ಮತ್ತು ಅಂತ್ಯಸAಸ್ಕಾರಕ್ಕೆ ಕ್ರಮ ಕೈಗೊಂಡರು.