ಚೆಟ್ಟಳ್ಳಿ, ಜು. ೨೦: ಎಸ್.ಕೆ.ಎಸ್. ಎಸ್.ಎಫ್-ಒಮಾನ್ ಕೊಡಗು ನೂತನ ಸಮಿತಿಯ ಅಧ್ಯಕ್ಷರಾಗಿ ಮುಹಮ್ಮದ್ ಶರೀಫ್ ಮದನಿ, ಪ್ರಧಾನ ಕಾರ್ಯದರ್ಶಿಯಾಗಿ ಶಫೀಕ್ ನೆಲ್ಲಿಹುದಿಕೇರಿ ಆಯ್ಕೆಯಾಗಿ ದ್ದಾರೆ.
ಎಸ್.ಕೆ.ಎಸ್.ಎಸ್.ಎಫ್ ಜಿಸಿಸಿ ಕೊಡಗು ಸಮಿತಿಯ ಅಧೀನದಲ್ಲಿ ಈಗಾಗಲೇ ಯುಎಇ, ಕತಾರ್, ಬಹರೈನ್ ಹಾಗೂ ಸೌದಿ ಅರೇಬಿಯಾ ಸಮಿತಿಗಳು ಕಾರ್ಯ ನಿರ್ವಹಿಸುತ್ತಿದೆ. ಇದೀಗ ಒಮಾನ್ ಕೇಂದ್ರೀಕರಿಸಿ ಕಾರ್ಯ ನಿರ್ವಹಿಸಲು ಆನ್-ಲೈನ್ನಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಎಸ್.ಕೆ. ಎಸ್.ಎಸ್.ಎಫ್ ಜಿಸಿಸಿ ಕೊಡಗು ಉಪಾಧ್ಯಕ್ಷರಾದ ಝೈನುದ್ದೀನ್ ಉಸ್ತಾದರ ನೇತೃತ್ವದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಮುಖ್ಯ ಅತಿಥಿಗಳಾ ಗಿದ್ದ ಸೂಫಿ ದಾರಿಮಿ ಕುಶಾಲನಗರ ನೂತನ ಸಮಿತಿಯನ್ನು ಘೋಷಿಸಿ ದರು. ಕೋಶಾಧಿಕಾರಿಯಾಗಿ ಅಬ್ದುಲ್ ಗಫೂರ್ ಲತೀಫಿ, ಉಪಾಧ್ಯಕ್ಷರಾಗಿ ಅಬ್ದುಲ್ ಅಝೀಝ್ ಬಾಖವಿ, ಸಹ ಕಾರ್ಯದರ್ಶಿಯಾಗಿ ನೌಶಾದ್ ಕುಂಜಿಲ ಆಯ್ಕೆಯಾಗಿದ್ದಾರೆ. ನಿರ್ದೇಶಕ ಸಮಿತಿ ಸದಸ್ಯರಾಗಿ ಅಶ್ರಫ್ ಬಾಖವಿ ಇವರುಗಳನ್ನು ಆಯ್ಕೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಎಸ್.ಕೆ. ಎಸ್.ಎಸ್.ಎಫ್ ಜಿಸಿಸಿ ಕೊಡಗು ಸಮಿತಿಯ ನಾಯಕರುಗಳು ಮತ್ತು ಯುಎಇ, ಕತಾರ್, ಸೌದಿ ಅರೇಬಿಯಾ ಹಾಗೂ ಬಹರೈನ್ ಸಮಿತಿಯ ಪ್ರತಿನಿಧಿಗಳು ಮತ್ತು ಎಸ್.ಕೆ.ಎಸ್.ಎಸ್.ಎಫ್ ಜಿಲ್ಲಾ, ಶಾಖಾ ಸಮಿತಿಯ ಸದಸ್ಯರುಗಳು ಹಾಗೂ ನೇತಾರರು ಭಾಗವಹಿಸಿ ದ್ದರು. ಎಸ್.ಕೆ.ಎಸ್.ಎಸ್.ಎಫ್ ಜಿಸಿಸಿ ಕೊಡಗು ಸಮಿತಿ ಪ್ರಧಾನ ಕಾರ್ಯದರ್ಶಿ ಶಿಹಾಬ್ ಆಲುಂಗಲ್ ಸ್ವಾಗತಿಸಿ, ಅಶ್ಫಾಕ್ ಕೊಡ್ಲಿಪೇಟೆ ಕಾರ್ಯಕ್ರಮ ನಿರೂಪಿಸಿದರು. ಮಾಧ್ಯಮ ವಿಭಾಗದ ಸಂಚಾಲಕ ಯಹ್ಯಾ ಕೊಡ್ಲಿಪೇಟೆ ವಂದಿಸಿದರು.