ಪ್ರಯುಕ್ತ ಆನ್‌ಲೈನ್ ಉಪನ್ಯಾಸ

ಮಡಿಕೇರಿ, ಜು. ೨೧: ಕರ್ನಾಟಕ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗ ಸಂಸ್ಥೆಯಾದ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ಅಂರ‍್ರಾಷ್ಟಿçÃಯ ಹಣ್ಣು ಮತ್ತು ತರಕಾರಿ ವರ್ಷಾಚರಣೆಯ ಪ್ರಯುಕ್ತ ಆನ್‌ಲೈನ್ ಉಪನ್ಯಾಸ ಸರಣಿಯನ್ನು ಭಾರತ ಸರ್ಕಾರದ ವಿಗ್ಯಾನ್ ಪ್ರಸಾರ್, ಬಾಗಲಕೋಟೆಯ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜಿಸುತ್ತಿದೆ.

ಈ ಹಿನ್ನೆಲೆಯಲ್ಲಿ ೨೦೨೧ರ ಜುಲೈನಿಂದ ಅಕ್ಟೋಬರ್‌ರವರೆಗೆ ಪ್ರತಿ ತಿಂಗಳ ೨೦ ರಂದು ಒಂದೊAದು ಉಪನ್ಯಾಸವನ್ನು ಒಬ್ಬೊಬ್ಬ ತೋಟಗಾರಿಕಾ ಸಂಪನ್ಮೂಲ ತಜ್ಞರಿಂದ ಏರ್ಪಡಿಸುತ್ತಿದ್ದು, ಒಟ್ಟು ನಾಲ್ಕು ಉಪನ್ಯಾಸಗಳನ್ನು ವಿವಿಧ ತೋಟಗಾರಿಕಾ ವಿಷಯಗಳ ಮೇಲೆ ಆಯೋಜಿಸಲಾಗುತ್ತಿದೆ. ಉಪನ್ಯಾಸ ಸರಣಿಯಲ್ಲಿ ಭಾಗವಹಿಸಲು ಆಸಕ್ತರು ಉಚಿತವಾಗಿ ನೋಂದಣಿ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಯನ್ನು hಣಣಠಿs//ಞsಣಚಿಛಿಚಿಜemಥಿ.iಟಿ ಅಕಾಡೆಮಿ ಜಾಲತಾಣದಲ್ಲಿ ಪಡೆಯಬಹುದು. ಆ ನಂತರ ೨೦೨೧ರ ನವೆಂಬರ್ ೧೫ ರಿಂದ ೧೭ ರ ವರೆಗೆ ಮೂರು ದಿನಗಳ ಕಾಲ ಸಮ್ಮೇಳನವನ್ನು ‘ಆರೋಗ್ಯ ಮತ್ತು ಪೋಷಣೆಗಾಗಿ ಹಣ್ಣು ಮತ್ತು ತರಕಾರಿಗಳು’ ಎಂಬ ವಿಷಯದ ಮೇಲೆ ಆಯೋಜಿಸಲಾಗುವುದು ಎಂದು ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎ.ಎಂ. ರಮೇಶ್ ಅವರು ತಿಳಿಸಿದ್ದಾರೆ.