ಗೋಣಿಕೊಪ್ಪ, ಜು. ೨೧: ಗೋಣಿಕೊಪ್ಪ ಬಿಜೆಪಿ ಕಚೇರಿಯಲ್ಲಿ ವೀರಾಜಪೇಟೆ ತಾಲೂಕು ಬಿಜೆಪಿ ಕೃಷಿ ಮೋರ್ಚಾದ ವತಿಯಿಂದ ತಿಂಗಳ ಪದಾಧಿಕಾರಿಗಳ ಸಭೆ ನಡೆಯಿತು. ಸಭೆಯಲ್ಲಿ ಕೋವಿಡ್ ಮೂರನೇ ಅಲೆಯ ಬಗ್ಗೆ ಪೂರ್ವಭಾವಿ ತಯಾರಿಯ ಜಾಗೃತಿ ಮೂಡಿಸಲಾಯಿತು. ಹಾಗೂ ನರೇಂದ್ರ ಮೋದಿ ಅವರ ಮನ್ಕಿಬಾತ್ ಕಾರ್ಯಕ್ರಮದ ವಿವರ ನೀಡಲು ಕೊಟ್ಟಂಗಡ ಅಯ್ಯಪ್ಪ ಮತ್ತು ಕಾಟಿಮಾಡ ಶರೀನ್ ಅವರನ್ನು ನೇಮಕ ಮಾಡಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕೃಷಿ ಮೋರ್ಚಾ ಅಧ್ಯಕ್ಷ ಕಟ್ಟೇರ ಈಶ್ವರ ತಿಮ್ಮಯ್ಯ, ಕೃಷಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ತೊರೀರ ವಿನು, ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಜ್ಜಿಕುಟ್ಟೀರ ಪ್ರವೀಣ್, ತಾಲೂಕು ಕೃಷಿ ಮೋರ್ಚಾ ಉಪಾಧ್ಯಕ್ಷರಾದ ಕಾಟಿಮಾಡ ಶರೀನ್, ಗುಡ್ಡಮಾಡ ಅಪ್ಪಿ, ಚಟ್ಟಮಾಡ ಅನಿಲ್, ರಾಜೇಶ್ ಕಾರ್ಯದರ್ಶಿಗಳಾದ ಅಣ್ಣಳಮಾಡ ನವೀನ್, ಅಡ್ಡಂಡ ಮಂದಣ್ಣ, ಕೊಟ್ಟಂಗಡ ಅಯ್ಯಪ್ಪ ಸದಸ್ಯರಾದ ಕಾಳಿಮಾಡ ಸೂರಜ್, ನಾಚಪ್ಪ, ಶಿಲಾನ್, ತಮ್ಮಯ್ಯ ಉಪಸ್ಥಿತರಿದ್ದರು.