ಚೆಟ್ಟಳ್ಳಿ, ಜು. ೨೦: ಮುಂಗಾರು ಮಳೆ ಚುರುಕಾ ಗಿದ್ದು, ಅಧಿಕ ನೆರಳು ಇರುವ ಪ್ರದೇಶಗಳಲ್ಲಿ, ದಟ್ಟ ಮಂಜು ಹಾಗೂ ಮೋಡ ಕವಿದ ವಾತಾವರಣ ಇರುವಲ್ಲಿ, ಅತಿ ಎತ್ತರದ ಪ್ರದೇಶ ದಲ್ಲಿ, ನೀರು ನಿಲ್ಲುವ ಸಮನಾದ ಗದ್ದೆ, ಕಾಫಿ ತೋಟಗಳಲ್ಲಿ ಕೊಳೆ ರೋಗ ಬರುವ ಸಾಧ್ಯತೆಗಳಿವೆ. ಆದ್ದರಿಂದ ಬೆಳೆಗಾರರು ಕೆಳಕಂಡ ಕ್ರಮಗಳನ್ನು ಕೈಗೊಳ್ಳಬೇಕು:

ಗಿಡಗಳ ಪುಡಿ ಚಿಗುರು, ಕಂಬ ಚಿಗುರು ತೆಗೆದು ನೆತ್ತಿ ಬಿಡಿಸಿ ಗಾಳಿಯಾಡುವಂತೆ ಮಾಡುವುದು. ಗಿಡಗಳ ಮೇಲೆ ಸಿಕ್ಕಿಹಾಕಿ ಕೊಂಡಿ ರುವ ಸಿಲ್ವರ್ ಮತ್ತು ಇತರ ಮರಗಳ ಎಲೆಗಳನ್ನು ತೆಗೆದು ಹಾಕುವುದು. ಪ್ರತಿ ವರ್ಷ ಕೊಳೆ ಬರುವ ಗಿಡಗಳಲ್ಲಿ ಮತ್ತು ಪಟ್ಟೆಗಳಲ್ಲಿ ಜೋಲು ಸವರುವುದು.

ಕಳೆ ತೆಗೆದು ಕಸವನ್ನು ಸಾಲಿನ ಮಧ್ಯೆ ಹಾಕುವುದು. ಕೊಳೆ ಬಂದ ಗಿಡಗಳ ರೆಕ್ಕೆ, ಎಲೆ, ಕಾಯಿಗಳನ್ನು ತೆಗೆದು ನಾಶ ಮಾಡುವುದು. ನಂತರ, ಒಂದು ಲೀಟರ್ ನೀರಿಗೆ ೨ ಗ್ರಾಂ ಬೇವಸ್ಟಿನ್ ಬೆರೆಸಿ ಸಿಂಪಡಿಸುವುದು. ಮಳೆ ಹೆಚ್ಚಾದಲ್ಲಿ ಎಕರೆಗೆ ಒಂದು ಚೀಲ ಯೂರಿಯಾ ಗೊಬ್ಬರ ಚೆಲ್ಲುವುದು. ಹೆಚ್ಚಿನ ಮಾಹಿತಿಗಾಗಿ ಸಮೀಪದ ಕಾಫಿ ಮಂಡಳಿಯನ್ನು ಸಂಪರ್ಕಿಸಬಹುದಾಗಿದೆ.