ಮಡಿಕೇರಿ, ಜು.೧೯: ಬೆಂಗಳೂರಿನ ನೃತ್ಯ ನಿರಂತರ ಟ್ರಸ್ಟ್ ವತಿಯಿಂದ ಆನ್‌ಲೈನ್ ಮೂಲಕ ನಡೆಸಲಾದ ನೃತ್ಯ ಸ್ಪರ್ಧೆಯಲ್ಲಿ ಕೆ.ಬಿ.ಚೈತನ್ಯ ಸ್ಟಾರ್ ಆಫ್ ಡ್ಯಾನ್ಸ್ ಪ್ರಶಸ್ತಿ ಪಡೆದುಕೊಂಡಿದ್ದಾಳೆ. ಚೆಟ್ಟಿಮಾನಿಯ ಸಾಂದೀಪನಿ ಶಾಲೆಯ ವಿದ್ಯಾರ್ಥಿನಿಯಾಗಿರುವ ಈಕೆ ಅಯ್ಯಂಗೇರಿ ಗ್ರಾಮದ ಕಾವೇರಿಮನೆ ಭರತ್ ಹಾಗೂ ಜೀವಿತಾ ದಂಪತಿಯರ ಪುತ್ರಿ. ವೀರಾಜಪೇಟೆಯ ನಾಟ್ಯ ಮಯೂರಿ ನೃತ್ಯ ಶಾಲೆಯ ಪ್ರೇಮಾಂಜಲಿ ಆಚಾರ್ಯ ಅವರಲ್ಲಿ ನೃತ್ಯ ಅಭ್ಯಸಿಸುತ್ತಿದ್ದಾಳೆ.