ನಾಪೋಕ್ಲು, ಜು. ೧೯: ಬಕ್ರೀದ್ ಹಬ್ಬವನ್ನು ಸರಳವಾಗಿ ಕೋವಿಡ್ ಮಾರ್ಗ ಸೂಚಿಯಂತೆ ಆಚರಿಸುವ ಸಲುವಾಗಿ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಶಾಂತಿ ಸಭೆಯನ್ನು ನಡೆಸಲಾಯಿತು. ಸಭೆಯಲ್ಲಿ ಮಾತನಾಡಿದ ಠಾಣಾಧಿಕಾರಿ ಆರ್. ಕಿರಣ್ ಸರಕಾರದ ನಿಯಮದಂತೆ ಹಬ್ಬವನ್ನು ಆಚರಿಸಬೇಕೆಂದು ಅವರು ಮನವಿ ಮಾಡಿದರು. ಜನರು ಗುಂಪಾಗಿ ಸೇರುವುದನ್ನು ನಿಷೇಧಿಲಾಗಿದ್ದು, ಪ್ರತಿಯೊಬ್ಬರು ಕೋವಿಡ್ ನಿಯಮವನ್ನು ಪಾಲಿಸಬೇಕೆಂದು ಹೇಳಿದರು.
ಮಸೀದಿಯಲ್ಲಿ ಪ್ರಾರ್ಥನೆ ಸಂದರ್ಭ ಮಾಸ್ಕ್ ಧರಿಸಿ ಅಂತರವನ್ನು ಕಾಯ್ದುಕೊಳ್ಳಬೇಕು ಎಂದ ಅವರು ಯಾವುದೇ ಸಭೆ ಸಮರಂಭಗಳಿಗೆ ಅವಕಾಶ ಇಲ್ಲವೆಂದರು. ಸಭೆಯಲ್ಲಿ ನಾಪೋಕ್ಲು ನಾಡು ವಿಭಾಗದ ಎಲ್ಲಾ ಜಮಅತ್ ಅಧ್ಯಕ್ಷರುಗಳು ಇದ್ದರು.