ಕುಶಾಲನಗರ, ಜು. ೧೭: ಕುಶಾಲನಗರ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಟಿ.ಕೆ. ರಾಜಶೇಖರ್ ಆಯ್ಕೆಯಾಗಿದ್ದಾರೆ.
೨೦೨೧-೨೨ನೇ ಸಾಲಿನ ಆಡಳಿತ ಮಂಡಳಿಯ ಆಯ್ಕೆ ನಡೆದಿದ್ದು, ಕಾರ್ಯದರ್ಶಿಯಾಗಿ ಸುಮನ್ ಬಾಲಚಂದ್ರ, ಖಜಾಂಚಿಯಾಗಿ ಕೆ.ಕೆ. ಹೇಮಂತ್ ಅವರನ್ನು ನಿಯೋಜಿಸಲಾಗಿದೆ.
ಎಂ.ಎಸ್. ಚಿಣ್ಣಪ್ಪ ಅವರನ್ನು ಉಪಾಧ್ಯಕ್ಷರಾಗಿ ನೇಮಿಸಲಾಯಿತು. ಕ್ಲಬ್ ಸಂವಹನ ಅಧ್ಯಕ್ಷರಾಗಿ ಕೊಡಗನ ಹರ್ಷ ಅವರನ್ನು ನಿಯೋಜನೆಗೊಳಿಸಲಾಗಿದೆ.
ಇತ್ತೀಚೆಗೆ ನಡೆದ ಸಭೆಯಲ್ಲಿ ಈ ಆಯ್ಕೆ ನಡೆದಿದ್ದು, ಲಯನ್ಸ್ ಇಂಟರ್ನ್ಯಾಷನಲ್ ಮೂಲಕ ಕುಶಾಲನಗರದಲ್ಲಿ ಉಚಿತ ಕಣ್ಣಿನ ಚಿಕಿತ್ಸೆ ಆಸ್ಪತ್ರೆ ತೆರೆಯಲು ಅಂದಾಜು ಒಂದು ಕೋಟಿ ರೂಪಾಯಿ ಮೀಸಲಿರಿಸಲಾಗಿದ್ದು, ಸದ್ಯದಲ್ಲೇ ಯೋಜನೆಗೆ ಚಾಲನೆ ನೀಡುವ ಚಿಂತನೆ ಹರಿಸಲಾಗಿದೆ ಎಂದು ಕ್ಲಬ್ ಪ್ರಮುಖ ಪೊನ್ನಚ್ಚನ ಮೋಹನ್ ತಿಳಿಸಿದ್ದಾರೆ. ಕುಶಾಲನಗರ ಪಟ್ಟಣ ವ್ಯಾಪ್ತಿಯ ಮುಖ್ಯ ರಸ್ತೆ ಬದಿಯಲ್ಲಿ ನೆರಳು ಗಿಡಗಳನ್ನು ನೆಡುವ ಯೋಜನೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಮುಂಬರುವ ಜಿಲ್ಲಾ ರಾಜ್ಯಪಾಲ ಚುನಾವಣೆ ಅಭ್ಯರ್ಥಿಯಾಗಿ ಪೊನ್ನಚ್ಚನ ಮೋಹನ್ ಅವರನ್ನು ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಕ್ಲಬ್ ಸಂವಹನ ಅಧ್ಯಕ್ಷ ಕೊಡಗನ ಹರ್ಷ ತಿಳಿಸಿದ್ದಾರೆ.