ಮಡಿಕೇರಿ, ಜು. ೧೭: ಕೊಡಗು-ಕೇರಳದ ಗಡಿ ಭಾಗದಲ್ಲಿರುವ ಕರಿಕೆ ಗ್ರಾಮಕ್ಕೆ ಕಳೆದ ಒಂದು ತಿಂಗಳಿನಿAದ ಲಸಿಕೆ ಸರಬರಾಜಾಗಿಲ್ಲ. ಆರೋಗ್ಯ ಕೇಂದ್ರದಲ್ಲಿ ಔಷಧಿಯ ಕೊರತೆಯೂ ಎದುರಾಗಿದೆ.

ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿರುವ ಕರಿಕೆ ಗ್ರಾ.ಪಂ. ಅಧ್ಯಕ್ಷೆ ಕೆ. ಕಲ್ಪನಾ ಜಗದೀಶ್ ಹಾಗೂ ಉಪಾಧ್ಯಕ್ಷ ಎನ್. ಬಾಲಚಂದ್ರ ನಾಯರ್ ಗ್ರಾಮಸ್ಥರಿಗೆ ತಕ್ಷಣ ಲಸಿಕೆ ನೀಡುವಂತೆ ಕೋರಿದರು.

ಗ್ರಾಮದಲ್ಲಿ ೨,೯೮೦ ಮಂದಿ ಪ್ರಥಮ ಹಂತದ ಲಸಿಕೆ ಪಡೆಯಲು ಬಾಕಿ ಇದ್ದಾರೆ. ಸುಮಾರು ೮೭೫ ಗ್ರಾಮಸ್ಥರು ಪ್ರಥಮ ಹಂತದ ಕೋವಿಡ್ ಲಸಿಕೆ ಪಡೆದು ೯೦ ದಿನಗಳೇ ಕಳೆದಿದ್ದರೂ ೨ನೇ ಹಂತದ ಲಸಿಕೆ ನೀಡಲು ಸಾಧ್ಯವಾಗಿಲ್ಲ.

ಈ ಬಗ್ಗೆ ಇತ್ತೀಚೆಗೆ ನಡೆದ ಟಾಸ್ಕ್ಫೋರ್ಸ್ ಸಮಿತಿಯ ಸಭೆಯಲ್ಲಿ ಚರ್ಚಿಸಲಾಗಿದೆ. ಅಲ್ಲದೆ ಇಲ್ಲಿನ ಆರೋಗ್ಯ ಉಪ ಕೇಂದ್ರದಲ್ಲಿ ಇತರ ಔಷಧಗಳ ಕೊರತೆ ಕಂಡು ಬಂದಿದೆ ಎಂದು ಅವರುಗಳು ದೂರಿದ್ದಾರೆ. ಗ್ರಾಮಕ್ಕೆ ಅಗತ್ಯವಿರುವ ಕೋವಿಡ್ ಲಸಿಕೆ ಮತ್ತು ಔಷಧಿಗಳನ್ನು ತುರ್ತಾಗಿ ಒದಗಿಸಿಕೊಡುವಂತೆ ಮನವಿ ಮಾಡಿದರು.