ಭಾಗಮಂಡಲ, ಜು. ೧೭: ೧೪ ನೇ ಹಣಕಾಸು ವರ್ಷದಲ್ಲಿ ಅಂಗವಿಕಲರಿಗೆ ಕಾಯ್ದಿರಿಸಿದ್ದ ಹಣದಲ್ಲಿ ಫಲಾನುಭವಿಗಳಿಗೆ ಸೋಲಾರ್ ಉಪಕರಣಗಳನ್ನು ಗ್ರಾಮ ಪಂಚಾಯಿತಿ ವತಿಯಿಂದ ವಿತರಿಸಲಾಯಿತು.ಭಾಗಮಂಡಲದ ತಣ್ಣಿಮಾನಿ ಗ್ರಾಮದ ದೇವಂಗೋಡಿ ತರುಣೇಶ್ ಅವರಿಗೆ ೨೫ ಸಾವಿರ ರೂ.ಮೌಲ್ಯದ ಸೋಲಾರ್ ಉಪಕರಣಗಳನ್ನು ನೈಜ ಫಲಾನುಭವಿಗಳನ್ನು ಗುರುತಿಸಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಹೊಸೂರು ಸತೀಶ್ ಕುಮಾರ್ ಹಾಗೂ ಗ್ರಾಮದ ಸದಸ್ಯರಾದ ದಂಡಿನ ಜಯಂತ್, ಗಂಗಮ್ಮ ನೇರವಾಗಿ ಹಸ್ತಾಂತರಿಸಿದರು.