ಸೋಮವಾರಪೇಟೆ,ಜು.೧೭: ಭಾರತೀಯ ನೌಕಾದಳದಲ್ಲಿ ಲೆಫ್ಟಿನೆಂಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮೂಲತಃ ಕಕ್ಕಬೆ ಯವಕಪಾಡಿ ನಿವಾಸಿ, ವೀರಾಜಪೇಟೆಯ ಕುಕ್ಲೂರಿನಲ್ಲಿ ನೆಲೆಸಿರುವ ಅರೆಯಡ ಬಿಪಿನ್ ಬೆಳ್ಯಪ್ಪ ಅವರು ಇಂಡಿಯನ್ ನೌಕದಲ್ಲಿ ಲೆಫ್ಟಿನೆಂಟ್ ಕಮಾಂಡರ್ ಆಗಿ ಬಡ್ತಿ ಹೊಂದಿದ್ದಾರೆ. ಇವರು ಅರೆಯಡ ಹರೀಶ್ ಪೊನ್ನಪ್ಪ ಹಾಗೂ ಮೀನಾ ದಂಪತಿಯ ಪುತ್ರ.