ಗೋಣಿಕೊಪ್ಪ ವರದಿ, ಜು. ೧೭: ಕೊರೊನಾ ಕಾಲದಲ್ಲಿ ರಕ್ತದಾನಕ್ಕೆ ಮುಂದಾಗಿರುವುದು ದಾನದ ಶ್ರೇಷ್ಠತೆ ಹೆಚ್ಚಿಸಿದೆ ಎಂದು ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮ ಅಧ್ಯಕ್ಷ ಅಮೃತಾನಂದ ಸ್ವಾಮೀಜಿ ಹೇಳಿದರು.

ಸ್ವಾಮಿ ವಿವೇಕಾನಂದ ಯೂತ್‌ಮೂವ್‌ಮೆಂಟ್, ಜಿಲ್ಲಾ ರಕ್ತನಿಧಿ ಕೇಂದ್ರ, ಗೋಣಿಕೊಪ್ಪ ರೋಟರಿ ಕ್ಲಬ್, ಜೆಸಿಐ ಪೊನ್ನಂಪೇಟೆ ಗೋಲ್ಡನ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಕ್ತದಾನದ ಮಹತ್ವ ಅರಿತುಕೊಂಡಿರುವ ದಾನಿಗಳು ವಿಶೇಷ ವ್ಯಕ್ತಿಗಳು ಎಂದರು.

ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಕೆ.ಪಿ. ಕರುಂಬಯ್ಯ ಮಾತನಾಡಿ, ಒಬ್ಬ ರಕ್ತದಾನ ಮಾಡುವುದರಿಂದ ೩ ಜೀವ ಉಳಿಸಿದಂತಾಗುತ್ತದೆ. ಜೀವ ರಕ್ಷಣೆಗಾಗಿ ನಡೆಸುತ್ತಿರುವ ಇಂತಹ ಶಿಬಿರಗಳಿಗೆ ಯುವ ಸಮೂಹ ಸ್ಪಂದಿಸಿ ರಕ್ತದಾನಕ್ಕೆ ಮುಂದಾಗಬೇಕಿದೆ ಎಂದರು.

ಗೋಣಿಕೊಪ್ಪ ರೋಟರಿ ಕ್ಲಬ್ ಅಧ್ಯಕ್ಷೆ ತೀತಮಾಡ ನೀತಾ ಕಾವೇರಮ್ಮ, ಕಾರ್ಯದರ್ಶಿ ಜೆ.ಕೆ. ಸುಭಾಷಿಣಿ, ಜೆಸಿಐ ಪೊನ್ನಂಪೇಟೆ ಗೋಲ್ಡನ್ ಅಧ್ಯಕ್ಷ ಪಾರುವಂಡ ದಿಲನ್ ಚೆಂಗಪ್ಪ, ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ಗ್ರೀಷ್ಮ ಬೋಜಮ್ಮ, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಖಜಾಂಚಿ ಡಾ. ಕೆ.ಎನ್. ಚಂದ್ರಶೇಖರ್, ಸಮುದಾಯ ಆಧಾರಿತ ಕಾರ್ಯಕ್ರಮಗಳ ಮುಖ್ಯಸ್ಥ ಡಾ. ಡೆನ್ನಿಸ್ ಡಿ. ಚೌಹಾಣ್, ರಾಮಕೃಷ್ಣ ಶಾರದಾಶ್ರಮ ಸ್ವಾಮೀಜಿ ಮುಂದಾಗಬೇಕಿದೆ ಎಂದರು.

ಗೋಣಿಕೊಪ್ಪ ರೋಟರಿ ಕ್ಲಬ್ ಅಧ್ಯಕ್ಷೆ ತೀತಮಾಡ ನೀತಾ ಕಾವೇರಮ್ಮ, ಕಾರ್ಯದರ್ಶಿ ಜೆ.ಕೆ. ಸುಭಾಷಿಣಿ, ಜೆಸಿಐ ಪೊನ್ನಂಪೇಟೆ ಗೋಲ್ಡನ್ ಅಧ್ಯಕ್ಷ ಪಾರುವಂಡ ದಿಲನ್ ಚೆಂಗಪ್ಪ, ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ಗ್ರೀಷ್ಮ ಬೋಜಮ್ಮ, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಖಜಾಂಚಿ ಡಾ. ಕೆ.ಎನ್. ಚಂದ್ರಶೇಖರ್, ಸಮುದಾಯ ಆಧಾರಿತ ಕಾರ್ಯಕ್ರಮಗಳ ಮುಖ್ಯಸ್ಥ ಡಾ. ಡೆನ್ನಿಸ್ ಡಿ. ಚೌಹಾಣ್, ರಾಮಕೃಷ್ಣ ಶಾರದಾಶ್ರಮ ಸ್ವಾಮೀಜಿ ಸ್ಥಳೀಯ ಸಂಘ-ಸAಸ್ಥೆಗಳ ಪದಾಧಿಕಾರಿಗಳು ಹಾಗೂ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಮುದಾಯ ಆಧಾರಿತ ಕಾರ್ಯಕ್ರಮಗಳ ವ್ಯವಸ್ಥಾಪಕರಾದ ಅಂಕಚಾರಿ, ಕುಸುಮಾ, ಸರಗೂರು ವಿವೇಕಾನಂದ ಸ್ಮಾರಕ ಆಸ್ಪತ್ರೆಯ ಕಾರ್ಯಕ್ರಮ ಅಧಿಕಾರಿಯಾದ ಬಂಗಾರಶೆಟ್ಟಿ, ಮೇಲ್ವಿಚಾರಕ ತನೀಸ್, ವೆಂಕಟೇಶ್, ಶೃತೇಶ್, ಸೆಲಿನ್, ತಮಂಗ್ ಶಾಲಿನಿ, ಗಾಯಿತ್ರಿ, ಗೌತಮ್, ಕೃತಿ, ರಕ್ಷಿತ್, ಅನಿಲ್, ಚಿನ್ನಮಹಾದೇವ್ ಮತ್ತಿತರರು ಇದ್ದರು.