ವೀರಾಜಪೇಟೆ, ಜು. ೧೭: ಕೋವಿಡ್ ಹಿನ್ನೆಲೆ ಮಾಕುಟ್ಟ ಗಡಿಯಲ್ಲಿ ಹಗಲು-ರಾತ್ರಿ ಎನ್ನದೆ ಕಾರ್ಯನಿರ್ವಹಿಸುತ್ತಿರುವ ಕೋವಿಡ್ ವಾರಿಯರ್ಸ್ಗಳಿಗೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಜಿಲ್ಲಾಡಳಿತ ಮತ್ತು ಸರ್ಕಾರ ವಿಫಲವಾಗಿದೆ ಎಂದು ಜೆ.ಡಿ.ಎಸ್. ಆರೋಪಿಸಿದೆ. ವೀರಾಜಪೇಟೆ ತಾಲೂಕು ಜಾತ್ಯತೀತ ಜನತಾ ದಳದ ನಿಯೋಗ ಗಡಿಯಲ್ಲಿರುವ ತಪಾಸಣಾ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭ ಮಾತನಾಡಿದ ವೀರಾಜಪೇಟೆ ತಾಲೂಕು ಜೆ.ಡಿ.ಎಸ್. ಅಧ್ಯಕ್ಷ ಪಿ.ಎ. ಮಂಜುನಾಥ್ ಕೊಡಗು ಜಿಲ್ಲೆಯಲ್ಲಿ ಪಾಸಿವಿಟಿ ದರ ಇಳಿಮುಖ ಗೊಂಡರೂ ನೆರೆಯ ಕೇರಳ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಗಣಿನೀಯವಾಗಿ ಏರಿಕೆ ಕಂಡಿದೆ. ೨೦೨೦ ರಿಂದ ಗಡಿಯಲ್ಲಿ ತಾತ್ಕಾಲಿಕ ಶೆಡ್ನಲ್ಲಿ ಕೋವಿಡ್ ಕೇಂದ್ರ ಪ್ರಾರಂಭಿಸಲಾಗಿದೆ. ಆದರೆ ತಾತ್ಕಾಲಿಕ ಶೆಡ್ನಲ್ಲಿ ಮೂಲಭೂತ ಸೌಲಭ್ಯ ಗಳಾದ ಮೇಜು, ಕುಡಿಯುವ ನೀರು, ಶೌಚಾಲಯ, ಮಳೆಯಿಂದ ರಕ್ಷಣೆ ಪಡೆಯಲು ಯಾವುದೇ ವ್ಯವಸ್ಥೆಯಿಲ್ಲ ಎಂದು ಆರೋಪಿಸಿ ದರಲ್ಲದೆ ತಪಾಸಣಾ ಸಿಬ್ಬಂದಿಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕೊಡಬೇಕೆಂದು ಆಗ್ರಹಿಸಿದರು. ಜೆ.ಡಿ.ಎಸ್. ಯುವ ಘಟಕದ ಅಧ್ಯಕ್ಷ ಚಿಲ್ಲವಂಡ ಗಣೇಶ್ ಮಾತನಾಡಿ, ಕೂಡಲೇ ಸರ್ಕಾರವು ಜಿಲ್ಲೆಯ ಗಡಿಯಲ್ಲಿನ ಕೋವಿಡ್ ತಪಾಸಣಾ ಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಸಕಲ ಸೌಲಭ್ಯಗಳನ್ನು ಒದಗಿಸಬೇಕೆಂದರು. ಈ ಸಂದರ್ಭ ಜೆ.ಡಿ.ಎಸ್. ಪ್ರಮುಖರಾದ ಪಾಣತ್ತಲೆ ಸತ್ಯ ಮತ್ತು ಕಾರ್ಯದರ್ಶಿ ಎಂ.ಎA. ಗಫೂರ್ ಮತ್ತಿತರರಿದ್ದರು.