ಕಡಂಗ, ಜು. ೧೭: ಮಡಿಕೇರಿ ತಾಲೂಕು ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡಂಗ-ಅರಪಟ್ಟು ಗ್ರಾಮದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡದ ಭೂಮಿ ಪೂಜೆಯನ್ನು ಶಾಲಾ ಶಿಕ್ಷಕಿ ವಿಮಲ ಅವರ ಸಮ್ಮುಖದಲ್ಲಿ ನರಿಯಂದಡ ಗ್ರಾಮ ಪಂಚಾಯಿತಿ ಸದಸ್ಯರಾದ ಸುಬೀರ್, ವಿನೋದ್ ನಾಣಯ್ಯ, ರಾಣಿ ಗಣಪತಿ ನೆರವೇರಿಸಿದರು.