ವೀರಾಜಪೇಟೆ, ಜು. ೧೭: ಕೊರೊನಾ ಎರಡನೇ ಅಲೆಯಿಂದಾಗಿ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳು ನಡೆದಿರಲಿಲ್ಲ. ಹಾಗೂ ವಿದ್ಯಾಗಮವೇ ವಿದ್ಯಾರ್ಥಿಗಳ ಪಾಲಿಗೆ ದಕ್ಕಿದ್ದು, ಕೊರೋನಾದಿಂದಾಗಿ ಕರ್ನಾಟಕ ರಾಜ್ಯದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷಾ ಮಂಡಳಿಯೂ ಪರೀಕ್ಷಾ ವಿಧಾನವನ್ನೇ ಬದಲಾಯಿಸಿ, ಆರು ದಿನದ ಪರೀಕ್ಷೆಯನ್ನು ಎರಡು ದಿನದಲ್ಲಿ ನಡೆಸುವ ಸವಾಲಿಗೆ ಒಡ್ಡಿಕೊಂಡಿದ್ದು, ಶಿಕ್ಷಣ ವ್ಯವಸ್ಥೆಯೇ ಹೊಸ ಮಾದರಿ ಪರೀಕ್ಷಾ ಪದ್ಧತಿಗೆ ಸಜ್ಜಾಗಿದೆ.

ಇದೀಗ ತಾ. ೧೯ ರಂದು ಮತ್ತು ೨೨ ರಂದು ಎರಡು ದಿನಗಳ ಕಾಲ ಹತ್ತನೇ ತರಗತಿ ಪರೀಕ್ಷೆ ನಡೆಯಲಿದ್ದು ಬದಲಾದ ಕಾಲಮಾನದಲ್ಲಿ, ವಿದ್ಯಾರ್ಥಿಗಳಿಗೆ ಮನೋಸ್ಥೆöÊರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಹಾಗೂ ಪೋಷಕರ ಆತಂಕ ನಿವಾರಿಸುವ ನಿಟ್ಟಿನಲ್ಲಿ ಕೊಡಗು ಜಿಲ್ಲಾ ಡಿಡಿಪಿಐ ಶ್ರೀಧರನ್ ಶಕ್ತಿಯೊಂದಿಗೆ ಮಾಹಿತಿ ಹಂಚಿಕೊAಡಿದ್ದಾರೆ.

ಪ್ರಶ್ನೆ:ಕೊಡಗು ಜಿಲ್ಲೆಯಲ್ಲಿ ಎಸ್.ಎಸ್. ಎಲ್.ಸಿ ಪರೀಕ್ಷೆಗೆ ಹಾಜರಾಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ, ಪರೀಕ್ಷಾ ಸಿಬ್ಬಂದಿಗಳು, ಪರೀಕ್ಷಾ ಕೇಂದ್ರಗಳ ವಿವರ ತಿಳಿಸಿ?

ಉತ್ತರ: ೬೮೪೬ ಮಕ್ಕಳು ಎಸ್.ಎಸ್. ಎಲ್.ಸಿ ಪರೀಕ್ಷೆಯನ್ನು ಈ ಬಾರಿ ಬರೆಯುತ್ತಿದ್ದಾರೆ. ೪೧ ಪರೀಕ್ಷಾ ಕೇಂದ್ರಗಳಿವೆ, ಪರೀಕ್ಷಾ ಕಾರ್ಯಕ್ಕೆ ನಿಯೋಜನೆಯಾಗಿರುವ ಸಿಬ್ಬಂದಿಗಳು ೧೩೫೨.

ಪ್ರಶ್ನೆ: ಈ ಬಾರಿ ಹೊಸ ಪರೀಕ್ಷಾ ವಿಧಾನವನ್ನು ಅಳವಡಿಸಿದ್ದೀರಾ, ಇದು ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಇಬ್ಬರಿಗೂ ಹೊಸಬಗೆಯ ಅನುಭವ. ಯಾವ ರೀತಿಯ ತರಬೇತಿಯನ್ನು ನೀಡಿದ್ದೀರಿ?

ಉತ್ತರ: ಬದಲಾದ ಪರಿಸ್ಥಿತಿಯಲ್ಲಿ ಕೊರೊನಾ ಎರಡನೇ ಅಲೆ ಹಿನ್ನೆಲೆ ಪರೀಕ್ಷಾ ಮಂಡಳಿಯಿAದ ಮೊದಲೇ ತೀರ್ಮಾನ ತೆಗೆದುಕೊಂಡು, ಮೊದಲೆಲ್ಲ ಒಟ್ಟು ನೂರು ಅಂಕಗಳಿಗೆ ಒಂದೊAದು ವಿಷಯಕ್ಕೂ ಪರೀಕ್ಷೆ ನಡೆಸುತ್ತಿದ್ದವು. ಈಗ ನಲವತ್ತು ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತಿದೆ. ಈ ಬಗ್ಗೆ ವಿದ್ಯಾರ್ಥಿಗಳಿಗೆ ಈಗಾಗಲೇ ತಿಂಗಳುಗಳ ಕಾಲ ಮಾಹಿತಿ ನೀಡಲಾಗಿದೆ. ಮೊಬೈಲ್ ಮೂಲಕ, ಮನೆಭೇಟಿ ಮೂಲಕ ಪರೀಕ್ಷಾ ವಿಧಾನದ ಬಗ್ಗೆ ಪರಿಚಯ ಮಾಡಿಕೊಡಲಾಗಿದೆ. ಆನ್‌ಲೈನ್‌ನಲ್ಲಿಯೂ ಎಲ್ಲಾ ಮಾಹಿತಿ ಲಭ್ಯವಿದೆ.

ಪ್ರಶ್ನೆ: ಪೋಷಕರು ಹೊಸ ಬಗೆಯ ಪರೀಕ್ಷಾ ವಿಧಾನವನ್ನು ಹೇಗೆ ಸ್ವೀಕಾರ ಮಾಡಿದ್ದಾರೆ.

ಉತ್ತರ: ಪರೀಕ್ಷೆಯನ್ನೇ ನಡೆಸಲಾಗದ ಸನ್ನಿವೇಶ ನಿರ್ಮಾಣವಾಗಿತ್ತು. ತಜ್ಞರ ಜೊತೆ ಅನೇಕ ಸುತ್ತಿನ ಮಾತುಕತೆ ಬಳಿಕ ಈ ತೀರ್ಮಾನ ಮಾಡಲಾಗಿದೆ. ಪೋಷಕರು ಕೂಡಾ ಸಂದರ್ಭವನ್ನು ಅರ್ಥಮಾಡಿಕೊಂಡಿದ್ದಾರೆ.

ಪ್ರಶ್ನೆ: ಈ ಹೊಸ ಮಾದರಿ ಪರೀಕ್ಷಾ ವಿಧಾನ ವಿದ್ಯಾರ್ಥಿಗಳ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆಯಾ?

ಉತ್ತರ: ವಿದ್ಯಾರ್ಥಿಗಳು ಒಎಂಆರ್ ಶೀಟ್‌ನಲ್ಲಿ ಏನು ಉತ್ತರ ಬರೆಯುತ್ತಾರೆ ಅದಕ್ಕೆ ಅಂಕಗಳು ಇದ್ದೇ ಇರುತ್ತದೆ. ಹೆಚ್ಚು ಅಂಕ ಪಡೆದವರಿಗೆ ಗ್ರೇಡಿಂಗ್ ಕೂಡಾ ಕೊಡಲಾಗುತ್ತದೆ. ಕನಿಷ್ಟ ತೇರ್ಗಡೆಯೂ ಇರುತ್ತದೆ. ನಲವತ್ತು ಅಂಕಗಳನ್ನು ನೂರು ಅಂಕಕ್ಕೆ ಅನ್ವಯಿಸಿ ಮೌಲ್ಯಮಾಪನ ಮಾಡಲಾಗುತ್ತದೆ.

ಪ್ರಶ್ನೆ: ಈ ಹೊಸ ಬಗೆಯ ಪರೀಕ್ಷಾ ವಿಧಾನ ಈ ವರ್ಷಕ್ಕೆ ಮಾತ್ರ ಸೀಮಿತಾನ?

ಉತ್ತರ: ಸದ್ಯಕ್ಕೆ ಈ ವರ್ಷಕ್ಕೆ ಅಂದುಕೊAಡಿದ್ದೀವಿ. ಸರ್ಕಾರದ ತೀರ್ಮಾನ, ಜನಾಭಿಪ್ರಾಯದ ಮೇಲೆ ಬೇಡಿಕೆ ಬಂದರೆ ಸರ್ಕಾರ ಮುಂದಿನ ತೀರ್ಮಾನ ತೆಗೆದುಕೊಳ್ಳಬಹುದು.

ಪ್ರಶ್ನೆ: ಗುಡ್ಡಗಾಡು ಪ್ರದೇಶ ಜೊತೆಗೆ ಮಳೆಗಾಲ ಆದ್ದರಿಂದ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಬರಲು ಯಾವ ರೀತಿಯ ವ್ಯವಸ್ಥೆ ಮಾಡಿಕೊಂಡಿದ್ದೀರಾ?

ಉತ್ತರ: ಎಲ್ಲಾ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳ ಪರಿಚಯ ಆಗಿದೆ. ವಿದ್ಯಾರ್ಥಿಗಳಿಗೆ ಅನುಕೂಲ ಆಗಲೂ ಹೊಸ ಪರೀಕ್ಷಾ ಕೇಂದ್ರಗಳನ್ನು ತೆರೆದಿದ್ದೇವೆ. ಮುಂಚೆ ನಮ್ಮ ಜಿಲ್ಲೆಯಲ್ಲಿ ೨೧ ಕೇಂದ್ರಗಳಿದ್ದವು ಈಗ ೪೧ ಕೇಂದ್ರಗಳನ್ನು ಮಾಡಲಾಗಿದೆ. ಸರ್ಕಾರಿ ಬಸ್ ಗಳು ಪರೀಕ್ಷೆಯ ದಿನದಂದು ಸಂಚಾರ ಮಾಡಲೇಬೇಕು ಎಂದು ಇಲಾಖೆಗೆ ನಾವು ಮನವಿ ಮಾಡಿಕೊಂಡಿದ್ದೇವೆ.

ಪ್ರಶ್ನೆ: ಪರೀಕ್ಷಾ ಕೇಂದ್ರಗಳ ಸುರಕ್ಷತೆ ಹೇಗೆ ಮಾಡಿದ್ದೀರಿ?

ಉತ್ತರ: ಪರೀಕ್ಷಾ ಕೇಂದ್ರಗಳ ಸ್ಯಾನಿಟೈಸೇಶನ್ ಮಾಡಲಾಗಿದೆ. ಪ್ರತಿ ಕೇಂದ್ರದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಇರಲಿದ್ದಾರೆ.

ಪ್ರಶ್ನೆ: ಹೊಸ ಪರೀಕ್ಷಾ ವಿಧಾನ ಎದುರಿಸುವ ಮಕ್ಕಳಿಗೆ ನಿಮ್ಮ ಕಿವಿಮಾತು?

ಉತ್ತರ: ಧೈರ್ಯವಾಗಿ ಪರೀಕ್ಷೆ ಬರೆಯಿರಿ, ಮಕ್ಕಳಿಗೂ ಪರೀಕ್ಷೆ ಬರೆಯುವ ಉತ್ಸಾಹ ಇದೆ. ಸುರಕ್ಷತಾ ವಿಧಾನಗಳನ್ನು ಮರೆಯದಿರಿ.

ಮಡಿಕೇರಿ - ೧೧ ಕೇಂದ್ರಗಳಲ್ಲಿ ಪರೀಕ್ಷೆ

ಮಡಿಕೇರಿಯಲ್ಲಿ ಈ ಬಾರಿ ೧೯೧೦ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಈ ಪೈಕಿ ೯೭೩ ಬಾಲಕರು ಹಾಗೂ ೯೩೭ ಬಾಲಕಿಯರು ಇದ್ದಾರೆ. ಮಡಿಕೇರಿ ತಾಲೂಕಿನಲ್ಲಿ ೧೧ ಪರೀಕ್ಷೆ ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ. ಸರಕಾರಿ ಪದವಿ ಪೂರ್ವ ಕಾಲೇಜು, ಸಂತ ಮೈಕಲರ ಪ್ರೌಢಶಾಲೆ, ಸಂಪಾಜೆ ಪ್ರೌಢಶಾಲೆ, ಚೇರಂಬಾಣೆ ಅರುಣಾ ಪದವಿ ಪೂರ್ವ ಕಾಲೇಜು, ಭಗಮಂಡಲ ಸರಕಾರಿ ಪದವಿ ಪೂರ್ವ ಕಾಲೇಜು, ಹಾಕತ್ತೂರು ಸರಕಾರಿ ಪ್ರೌಢಶಾಲೆ, ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ನಾಪೋಕ್ಲು ಕೆ.ಪಿ.ಎಸ್ ಶಾಲೆ, ಮೂರ್ನಾಡಿನ ಪ್ರೌಢಶಾಲೆ, ರಾಮ ಎಜುಕೇಶನ್ ಟ್ರಸ್ಟ್ ಶಾಲೆಗಳಲ್ಲಿ ಪರೀಕ್ಷೆ ಕೇಂದ್ರಗಳನ್ನು ತೆರೆಯಲಾಗಿದೆ. ಸರಕಾರಿ ಬಸ್ಸುಗಳ ಮೂಲಕ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳು ತಮ್ಮ ಪರೀಕ್ಷೆ ಪ್ರವೇಶ ಪತ್ರ ತೋರಿಸಿದಲ್ಲಿ ಪರೀಕ್ಷಾ ವೇಳೆಯಲ್ಲಿ ಉಚಿತವಾಗಿ ಸಂಚಾರಕ್ಕೆ ಅವಕಾಶ ಮಾಡಲಾಗಿದೆ. ಕೇಂದ್ರಗಳಿAದ ಹಿಂತೆರಳುವಾಗಲೂ ಉಚಿತ ಬಸ್ ಸಂಚಾರ ಸೌಲಭ್ಯವನ್ನು ಬಳಸಿಕೊಳ್ಳಬಹುದಾಗಿದೆ.

ವೀರಾಜಪೇಟೆ - ೧೩ ಕೇಂದ್ರಗಳು

ವೀರಾಜಪೇಟೆ ತಾಲೂಕಿನಲ್ಲಿ ಒಟ್ಟು ೨೧೬೨ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಹಾಜರಾಗುತ್ತಿದ್ದು, ಅದರಲ್ಲಿ ೧೧೦೪ ಹುಡುಗರು, ೧೦೫೮ ಹುಡುಗಿಯರು ಇದ್ದಾರೆ. ವೀರಾಜಪೇಟೆ ತಾಲೂಕಿ£್ನಲ್ಲಿ ಒಟ್ಟು ೧೩ ಪರೀಕ್ಷಾ ಕೇಂದ್ರಗಳಿದ್ದು, ಈ ವರ್ಷ ಹೆಚ್ಚುವರಿಯಾಗಿ ಸಂತ ಅನ್ನಮ್ಮ ಪದವಿ ಕಾಲೇಜು, ಸರ್ಕಾರಿ ಹಿರಿಯ ಪ್ರೌಢಶಾಲೆ ಟಿ.ಶೆಟ್ಟಿಗೇರಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ತಿತಿಮತಿ ಹೊಸದಾಗಿ ಸೇರ್ಪಡೆಯಾಗಿರುವ ಪರೀಕ್ಷಾ ಕೇಂದ್ರಗಳು.

ಗಣಿತ ವಿಷಯಕ್ಕೆ ಪಿಂಕ್ ಬಣ್ಣ, ವಿಜ್ಞಾನಕ್ಕೆ ಕಿತ್ತಳೆ ಬಣ್ಣ, ಸಮಾಜಕ್ಕೆ ಹಸಿರು ಬಣ್ಣದ ಒಎಂಆರ್ ಹಾಳೆಯಲ್ಲಿ ಉತ್ತರ ತುಂಬಿಸಬೇಕು. ಅಂತೆಯೇ ಕನ್ನಡಕ್ಕೆ ಪಿಂಕ್ ಬಣ್ಣ, ಇಂಗ್ಲೀಷ್ ಗೆ ಕಿತ್ತಳೇ ಬಣ್ಣ, ಹಿಂದಿಗೆ ಹಸಿರು ಬಣ್ಣದ ಶೀಟ್ ನ್ನಲ್ಲಿ ಉತ್ತರ ಗುರುತು ಮಾಡಬೇಕು ಎನ್ನುವ ನಿಯಮ ಮಾಡಲಾಗಿದೆ. ಪೆನ್ಸಿಲ್ ಬಳಕೆಯಿಲ್ಲ. ನೀಲಿ ಅಥವಾ ಕಪ್ಪು ಶಾಯಿ ಪೆನ್ ಬಳಕೆ ಮಾಡಬಹುದಾಗಿದೆ.

ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಮೊಬೈಲ್ ಸ್ವಾಧೀನಾಧಿಕಾರಿ, ಆರೋಗ್ಯ ಇಲಾಖೆಯ ಸಿಬ್ಬಂದಿ ಇರುತ್ತಾರೆ. ಅಲ್ಲದೇ ಪ್ರತಿ ಪರೀಕ್ಷಾ ಕೇಂದ್ರದಲ್ಲಿ ಒಂದು ಐಸೋಲೇಶನ್ ಕೊಠಡಿಯೂ ಇರಲಿದೆ. ಪಾಸಿಟಿವ್ ಇದ್ದ ವಿದ್ಯಾರ್ಥಿಯೂ ಪರೀಕ್ಷೆ ಬರೆಯಬಹುದು, ಪಾಸಿಟಿವ್ ಇರುವ ವಿದ್ಯಾರ್ಥಿಯನ್ನು ಕೋವಿಡ್ ಆರೈಕೆ ಕೇಂದ್ರದಲ್ಲಿ ಕೂರಿಸಿ ಪರೀಕ್ಷೆ ಬರೆಸಲಾಗುತ್ತದೆ. ದಾನಿಗಳಾದ ವೀರಾಜಪೇಟೆ ಕುಪ್ಪಂಡ ಮುದ್ದಪ್ಪ ಕಾಂಪ್ಲೆಕ್ಸ್ ನ ಮಾಲೀಕರು ಇಡೀ ತಾಲೂಕಿಗೆ ಆಗುವಷ್ಟ ಸುಮಾರು ೨,೫೦೦ ಮಾಸ್ಕ್ಗಳನ್ನು ವಿತರಿಸಿದ್ದಾರೆ.

ವೀರಾಜಪೇಟೆ ತಾಲೂಕಿನಲ್ಲಿ ಯಾವ ವಿದ್ಯಾರ್ಥಿಗೂ ಪರೀಕ್ಷಾ ಕೇಂದ್ರ ತಲುಪಲು ತೊಂದರೆಯಾಗಬಾರದು ಎನ್ನುವ ನಿಟ್ಟಿನಲ್ಲಿ ಶಾಸಕ ಕೆ.ಜಿ ಬೋಪಯ್ಯ ಮುತುವರ್ಜಿಯಿಂದ ಖಾಸಗಿ ಶಾಲೆಗಳ ಸುಮಾರು ೨೧ ಬಸ್ ಗಳು ಅಂದು ೧೬ ಮಾರ್ಗಗಳಲ್ಲಿ ಸಂಚಾರ ಮಾಡಿ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಕರೆ ತರಲು ಮತ್ತು ವಾಪಸ್ ಬಿಡಲು ವ್ಯವಸ್ಥೆ ಕೂಡಾ ಮಾಡಲಾಗಿದೆ.

ಕೆ.ಎಸ್.ಆರ್.ಟಿ.ಸಿ.ಯ ಡಿಪೋ ಮ್ಯಾನೇಜರ್ ಪತ್ರಿಕೆಗೆ ಮಾಹಿತಿ ನೀಡಿದ್ದು, ವಿಶೇಷವಾಗಿ ಮೃತ್ಯುಂಜಯ ದೇವಸ್ಥಾನ ಮಾರ್ಗ ಹಾಗೂ ಪೂಕಳದಲ್ಲಿಯೂ ಅಂದು ಬಸ್ ಸಂಚಾರ ಇರಲಿದೆ ಎಂದಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೀಳಗಿ ಮಾಹಿತಿ ನೀಡಿ, ಪೋಷಕರು ಯಾವುದೇ ಆತಂಕ ಪಡುವುದು ಬೇಡ, ಯಾವುದೇ ಸಮಸ್ಯೆ ಬಂದರೂ ಕೂಡಾ ಆ ಶಾಲೆಯ ಮುಖ್ಯ ಶಿಕ್ಷಕರನ್ನು ಸಂಪರ್ಕ ಮಾಡಿದರೆ ತಕ್ಷಣವೇ ಸ್ಪಂದನೆ ಸಿಗಲಿದೆ ಎಂದಿದ್ದಾರೆ.

ಎಲ್ಲಾ ಪರೀಕ್ಷಾ ಸಿಬ್ಬಂದಿಗಳಿಗೆ ಲಸಿಕೆ ನೀಡಲಾಗಿದೆ. ಅವರಿಗೆ ಸೂಕ್ತ ತರಬೇತಿ ನೀಡಲಾಗಿದೆ, ರಾಜ್ಯ ಮಟ್ಟದ ಅಧಿಕಾರಿಗಳು ಪರಿಶೀಲನೆ ಮಾಡಿ ಹೋಗಿದ್ದಾರೆ ಆದರಿಂದ ಯಾವುದೇ ರೀತಿಯ ಭಯವಿಲ್ಲದೆ ಮಕ್ಕಳು ಪರೀಕ್ಷೆ ಎದುರಿಸಬಹುದು ಎಂದಿದ್ದಾರೆ. ವೀರಾಜಪೇಟೆ ತಾಲೂಕಿನ ಎಸ್.ಎಸ್.ಎಲ್.ಸಿ ನೋಡಲ್ ಅಧಿಕಾರಿ ಅಯ್ಯಪ್ಪ, ಹಾಗೂ ಎಸ್.ಎಸ್.ಎಲ್.ಸಿ ಪರೀಕ್ಷೆ ಉಸ್ತುವಾರಿ ನೋಡಿಕೊಳ್ಳುತ್ತಿರುವ ಉತ್ತಪ್ಪನವರು ಅಗತ್ಯ ಮಾಹಿತಿಯನ್ನು ನೀಡಿದ್ದು, ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಯುವ ದಿನಗಳಲ್ಲಿ ತೀವ್ರತರ ಮಳೆಯಿಂದಾಗಿ ವಿದ್ಯಾರ್ಥಿಗಳು ಹಾಗೂ ಪರೀಕ್ಷಾ ಸಿಬ್ಬಂದಿಗೆ ದಾರಿಯಲ್ಲಿ ಬರುವಾಗ ಮರಬಿದ್ದು, ರಸ್ತೆ ತೆರವುಗೊಳಿಸಲು ಸಹಾಯಕ್ಕಾಗಿ ಸುಮಿತ್ರಾ ಸಹಾಯಕ್ಕಾಗಿವಲಯ ಸಂರಕ್ಷಣಾಧಿಕಾರಿಗಳು ;೯೬೩೨೧೧೭೨೩೩, ಪ್ರವಾಹ ಬಂದಾಗ ನದಿ ಹಾಗೂ ತೊರೆ ಮತ್ತಿತರ ಸಹಾಯ ದೂರವಾಣಿ ಸಂಖ್ಯೆ : ೯೦೬೦೧೬೭೧೦೧ ನಂಬರ್‌ಗೆ ವಿದ್ಯಾರ್ಥಿಗಳು, ಶಿಕ್ಷಕರು ಸಂಪರ್ಕ ಮಾಡಬಹುದು.

- ಸಂದರ್ಶನ : ಉಷಾ ಪ್ರೀತಂ