ನಾಪೋಕ್ಲು, ಜು. ೧೬: ‘ವೀರಾಜಪೇಟೆಯಿಂದ ಕಾರಿನಲ್ಲಿ ಮನೆಗೆ ಮರಳುತ್ತಿದ್ದ ನಾನು ಮತ್ತು ನನ್ನ ಸಂಬAಧಿ ಪೊಲೀಸ್ ಅಧಿಕಾರಿ ಕಾಡಾನೆ ಹಿಂಡುಗಳಿAದ ಕೂದಲೆಳೆಯಲ್ಲಿ ಪ್ರಾಣಾಪಾಯ ದಿಂದ ಪಾರಾದ ಘಟನೆ ನಡೆಯಿತು’ ಎಂದು ಕರಡ ಗ್ರಾಮದ ಐತಿಚಂಡ ಪ್ರಕಾಶ್ ‘ಶಕ್ತಿ’ಗೆ ತಿಳಿಸಿದ್ದಾರೆ.
ತಾ. ೧೫ರ ರಾತ್ರಿ ೮.೩೦ ಗಂಟೆ ಸುಮಾರಿಗೆ ವೀರಾಜಪೇಟೆಯಿಂದ ಮನೆಗೆ ಕಾರಿನಲ್ಲಿ ತೆರಳುತ್ತಿರುವ ಸಂದರ್ಭ ಕರಡ ಗ್ರಾಮದ ಸೇತುವೆ ಬಳಿ ಕಾರಿಗೆ ಅಡ್ಡಲಾಗಿ ರಸ್ತೆಯಲ್ಲಿ ೫-೬ ಕಾಡಾನೆಗಳ ಹಿಂಡು ಎದುರಾಗಿದೆ. ತಕ್ಷಣ ಕಾರು ನಿಲ್ಲಿಸಿದ ನಾವು ಯಾವದೇ ಶಬ್ಧ ಮಾಡದೆ ಭಯದಿಂದ ಆನೆಗಳ ಚಲನವಲನ ವೀಕ್ಷಿಸಿದೆವು. ಸ್ವಲ್ಪ ಸಮಯ ರಸ್ತೆಯಲ್ಲಿಯೇ ನಿಂತಿದ್ದ ಕಾಡಾನೆಗಳು ಪಕ್ಕದ ತೋಟದಿಂದ ಮರಿಯಾನೆ ಹಾಗೂ ಅದರ ತಾಯಿ ಬಂದ ನಂತರ ರಸ್ತೆ ಬಿಟ್ಟು ಪಕ್ಕದ ತೋಟದತ್ತ ನಿರ್ಭಯವಾಗಿ ತೆರಳಿವೆ. ಆ ಸಂದರ್ಭದಲ್ಲಿ ಬೇರೆ ವಾಹನಗಳು, ದ್ವಿಚಕ್ರವಾಹನಗಳು ಬಾರದಿರುವದರಿಂದ ಯಾವದೇ ಅಪಾಯ ಸಂಭವಿಸಿಲ್ಲ. ಇಲ್ಲವಾದರೆ, ಅಪಾಯ ಉಂಟಾಗುವ ಸಾಧ್ಯತೆ ಇತ್ತು. ಇದೇ ರೀತಿ ಹಲವರ ವಾಹನಗಳಿಗೆ ಕಾಡಾನೆಗಳ ಹಿಂಡು ಎದುರಾಗಿದ್ದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿದಾಡುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕರಡ, ಚೆಯ್ಯಂಡಾಣೆ ಗ್ರಾಮದಲ್ಲಿ ಈ ಕಾಡಾನೆಗಳ ಹಿಂಡು ನಿರಂತರವಾಗಿ ಸಂಚರಿಸುತ್ತವೆ. ಇದರಿಂದಾಗಿ ಈ ವ್ಯಾಪ್ತಿಯ ಕೃಷಿ ಸಂಪೂರ್ಣವಾಗಿ ಕಾಡಾನೆಗಳ ಪಾಲಾಗುತ್ತಿವೆ. ಅರಣ್ಯ ಇಲಾಖೆ ಗ್ರಾಮಸ್ಥರಿಗೆ ರಕ್ಷಣೆ ನೀಡಬೇಕು. ಅನಾಹುತ ಸಂಭವಿಸುವ ಮೊದಲೇ ಕಾಡಾನೆಗಳನ್ನು ಕಾಡಿಗಟ್ಟುವ ಕೆಲಸವನ್ನು ನಿರ್ವಹಿಸಬೇಕು ಎಂದು ಪ್ರಕಾಶ್ ಮನವಿ ಮಾಡಿದ್ದಾರೆ. ಮಳೆಯ ಹಿನ್ನೆಲೆಯಲ್ಲಿ ಈ ವ್ಯಾಪ್ತಿಯಲ್ಲಿ ವಿದ್ಯುತ್ ಸಂಪರ್ಕ ಕೂಡ ಕಡಿತಗೊಂಡು ಕತ್ತಲೆ ಆವರಿಸಿದೆ. ಸಂಬAಧಿಸಿದವರು ಈ ಅವ್ಯವಸ್ಥೆಯ ಬಗ್ಗೆ ಗಮನಹರಿಸಬೇಕು ಎಂದು ವಿನಂತಿಸಿದ್ದಾರೆ.
-ಪಿ.ವಿ.ಪ್ರಭಾಕರ್