ಭಾಗಮAಡಲ, ಜು. ೧೬: ಭಾಗಮಂಡಲ ಗ್ರಾಮ ಪಂಚಾಯಿತಿ ಆವರಣದಲ್ಲಿ ವಿದ್ಯುನ್ಮಾನ ಗ್ರಂಥಾಲಯವನ್ನು ಉದ್ಘಾಟಿಸಲಾಯಿತು. ವಿದ್ಯುನ್ಮಾನ ಗ್ರಂಥಾಲಯಕ್ಕೆ ಶಾಸಕ ಕೆ.ಜಿ. ಬೋಪಯ್ಯ ಚಾಲನೆ ನೀಡಿ ಮಾತನಾಡಿ, ಡಿಜಿಟಲ್ ಇಂಡಿಯಾ ಎಂದು ಏನು ಹೇಳಲಾಗುತ್ತಿದೆಯೋ ಅಂತಹ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುತ್ತಿದೆ.

ಇದು ಆನ್‌ಲೈನ್ ಗ್ರಂಥಾಲಯವಾಗಿದ್ದು ಇದರ ಸಂಪೂರ್ಣ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು. ರೂ. ೫ ಲಕ್ಷ ವೆಚ್ಚದಲ್ಲಿ ಡಿಜಿಟಲ್ ಗ್ರಂಥಾಲಯ ಮಾಡಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಯ್ಯಂಗೇರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಂಜಿತ್, ಮುಖ್ಯ ಗ್ರಂಥಾಲಯ ಅಧಿಕಾರಿ ಲಲಿತಾವತಿ, ಗ್ರಾಮ ಪಂಚಾಯಿತಿ ಸದಸ್ಯರಾದ ನಾಗೇಶ್, ಕಾಳನ ರವಿ, ನಿತ್ಯಾನಂದ, ಪೂವಮ್ಮ, ದುರ್ಗಾವತಿ, ವೀಣಾ, ಜಯಂತ್, ಶಶಿಕಲಾ, ಗಂಗಮ್ಮ, ಪಿಡಿಓ ನಂದ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಅಮೆ ಹರೀಶ್, ಪ್ರಮುಖರಾದ ನಿಡ್ಯಮಲೆ ಚಲನ್, ರವಿ ಹೆಬ್ಬಾರ್ ಇದ್ದರು.