ಸುಂಟಿಕೊಪ್ಪ, ಜು. ೧೬: ಮಳೆ-ಗಾಳಿಯು ವಿಪರೀತವಾಗಿದ್ದು, ಸುಂಟಿಕೊಪ್ಪದಿAದ ಮಾದಾಪುರದವರೆಗಿನ ರಾಜ್ಯ ಹೆದ್ದಾರಿಯಲ್ಲಿ ಒಣಗಿದ ಮರಗಳು ಹಾಗೂ ಭಾರೀ ಗಾತ್ರದ ಮರಗಳು ಬೀಳುವ ಸ್ಥಿತಿಯಲ್ಲಿದ್ದು, ಅನಾಹುತ ಸಂಭವಿಸುವ ಮುನ್ನ ಮರಗಳನ್ನು ತೆರವುಗೊಳಿಸಬೇಕೆಂದು ಹರದೂರು ಗ್ರಾಮ ಪಂಚಾಯಿತಿ ಸದಸ್ಯ ಮುಸ್ತಫಾ ಆಗ್ರಹಿಸಿದ್ದಾರೆ.
ರಸ್ತೆ ಬದಿಯ ಮರಗಳನ್ನು ಅರಣ್ಯ ಇಲಾಖೆ, ರಾಜ್ಯ ಲೋಕೋಪಯೋಗಿ ಇಲಾಖೆಯವರು ತೆರವುಗೊಳಿಸಬೇಕು. ತೋಟದ ಮಾಲೀಕರು ಸಹ ರಸ್ತೆಬದಿಯ ಮರಗಳನ್ನು ತೆರವಿಗೆ ಕ್ರಮ ಕೈಗೊಳ್ಳಬೇಕು. ಮಾದಾಪುರ-ಸುಂಟಿಕೊಪ್ಪ ರಸ್ತೆಗಾಗಿ ಪ್ರತಿನಿತ್ಯ ಆ್ಯಂಬ್ಯುಲೆನ್ಸ್ ವಾಹನ ಸೇರಿದಂತೆ ನೂರಾರು ವಾಹನಗಳು ಸಂಚರಿಸುತ್ತಿರುತ್ತದೆ. ವಾಹನಗಳು ಸಂಚರಿಸುವಾಗ ಗಾಳಿ-ಮಳೆಗೆ ಮರಗಳು ಮುರಿದು ಬಿದ್ದರೆ ಪ್ರಾಣಹಾನಿ ಸಂಭವಿಸುವ ಸಾಧ್ಯತೆಯಿದೆ. ಈ ಬಗ್ಗೆ ಸಂಬAಧಿಸಿದ ಇಲಾಖೆಯವರು ಕಾರ್ಯೋನ್ಮುಖರಾಗಬೇಕೆಂದು ಒತ್ತಾಯಿಸಿದ್ದಾರೆ.