ಸಿದ್ದಾಪುರ, ಜು. ೧೬: ಮಾಲ್ದಾರೆ ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ಬಾಡಗಬಾಣಂಗಾಲ ಗ್ರಾಮದ ವಾರ್ಡ್ ೧ ರಲ್ಲಿ ಕೆ.ಪಿ.ಸಿ.ಸಿ ಕಾನೂನು ಘಟಕ ಮಾನವ ಹಕ್ಕು ಮತ್ತು ಆರ್.ಟಿ.ಐ ರಾಜ್ಯ ಅಧ್ಯಕ್ಷ ಎ.ಎಸ್. ಪೊನ್ನಣ್ಣ ಅವರು ನೂತನ ಕೊಳವೆ ಬಾವಿಯನ್ನು ತಾ. ೧೮ ರಂದು ಉದ್ಘಾಟಿಸಲಿದ್ದಾರೆ. ಬಾಡಗ ಬಾಣಂಗಾಲ ಗ್ರಾಮದ ಒಂದನೇ ವಾರ್ಡ್ನಲ್ಲಿ ವಾಸವಿರುವ ನಿವಾಸಿಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಅಲ್ಲಿನ ನಿವಾಸಿಗಳು ಹಾಗೂ ಮಾಲ್ದಾರೆ ಗ್ರಾ.ಪಂ. ಸದಸ್ಯರುಗಳು ಪೊನ್ನಣ್ಣ ಅವರ ಗಮನ ಸೆಳೆದು ಸಮಸ್ಯೆಗೆ ಸ್ಪಂದಿಸುವAತೆ ಮನವಿ ಮಾಡಿಕೊಂಡಿದ್ದರು. ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸುವ ನಿಟ್ಟಿನಲ್ಲಿ ಅಜ್ಜಿಕುಟ್ಟೀರ ಪೊನ್ನಮ್ಮ ದತ್ತಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಗ್ರಾಮದಲ್ಲಿ ಕೊಳವೆ ಬಾವಿಯನ್ನು ತೆಗೆಸಿ ಕೊಟ್ಟರು. ಇದನ್ನು ತಾ. ೧೮ ರಂದು ಸಂಜೆ ೪ ಗಂಟೆಗೆ ಪೊನ್ನಣ್ಣ ಉದ್ಘಾಟಿಸಲಿದ್ದಾರೆ.