ಮಡಿಕೇರಿ, ಜು. ೧೬: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿಗೆ ಮೂಲತಃ ಹೆಬ್ಬಾಲೆಯವರಾದ ಚಿ.ಕೋ. ಬ್ಯಾಂಕಿನ ನಿವೃತ್ತ ವ್ಯವಸ್ಥಾಪಕ ಹೆಚ್.ಎನ್. ಸುಬ್ರಮಣ್ಯ ಅವರು ತಮ್ಮ ತಂದೆ ದಿ. ನಂಜಾಚಾರಿ ಹಾಗೂ ತಾಯಿ ದಿ. ಪುಟ್ಟಮ್ಮ ಅವರ ಜ್ಞಾಪಕಾರ್ಥವಾಗಿ ೨೫,೦೦೧ ರೂಪಾಯಿಗಳನ್ನು ಇಡುಗಂಟಾಗಿಟ್ಟು ಇದರಿಂದ ಜಿಲ್ಲೆಯಲ್ಲಿ ಪ್ರತಿವರ್ಷ" ಸಮಾಜಕ್ಕೆ ವಿಶ್ವಕರ್ಮ ಸಮುದಾಯದ ಕೊಡುಗೆೆ" ಎಂಬ ವಿಷಯದ ಬಗ್ಗೆ ಉಪನ್ಯಾಸ ಕಾರ್ಯಕ್ರಮ ನಡೆಸಲು ದತ್ತಿಯೊಂದನ್ನು ಸ್ಥಾಪಿಸಿದ್ದಾರೆ ಎಂದು ಕ.ಸಾ.ಪ. ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ತಿಳಿಸಿದ್ದಾರೆ.