ಮಡಿಕೇರಿ, ಜು. ೧೬: ಮಡಿಕೇರಿ ತಾಲೂಕಿನ ಕೊಯನಾಡು ಗ್ರಾಮದಲ್ಲಿ ಕಳೆದ ರಾತ್ರಿ ಕೆಲವು ಮಂದಿ ಅಲ್ಲಿ ಗುರುತಿಸಲ್ಪಟ್ಟಿರುವ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆಯುವಂತಾಗಿತ್ತು. ಈ ವ್ಯಾಪ್ತಿಯಲ್ಲಿ ಕಿಂಡಿ ಅಣೆಕಟ್ಟೆ ಯೊಂದಿದ್ದು, ಇದಕ್ಕೆ ಮರ ಅಡಲಾಗಿ ಸಿಲುಕಿದ್ದರಿಂದ ಸೇತುವೆ ದಾಟಲು ಸಮಸ್ಯೆ ಎದುರಾಗಿತ್ತು. ಒಂದು ವೇಳೆ ರಾತ್ರಿ ಮಳೆ ಹೆಚ್ಚಾದಲ್ಲಿ ಸೇತುವೆ ದಾಟಿ ತೆರಳುವದು ದುಸ್ತರ ಎಂಬ ಅವ್ಯಕ್ತ ಭಯ ಕಾಡುತ್ತಿದ್ದ ಹಿನ್ನೆಲೆಯಲ್ಲಿ ಅಲ್ಲಿನ ಕೆಲವು ಕುಟುಂಬ ಸದಸ್ಯರು ರಾತ್ರಿ ಮಲಗಲು ಕಾಳಜಿ ಕೇಂದ್ರವನ್ನು ಆಶ್ರಯಿಸಿದ್ದರು. ಇದೀಗ ಮರವನ್ನು ತೆರವುಗೊಳಿಸಲಾಗಿದ್ದು, ಎಲ್ಲರೂ ಅವರ ಮನೆಗೆ ಹಿಂತೆರಳಿದ್ದಾರೆ. ಸದ್ಯಕ್ಕೆ ಯಾವದೇ ಸಮಸ್ಯೆ ಇಲ್ಲ ಎಂದು ಮಡಿಕೇರಿ ತಹಶೀಲ್ದಾರ್ ಮಹೇಶ್ ಅವರು ತಿಳಿಸಿದ್ದಾರೆ.