ವೀರಾಜಪೇಟೆ, ಜು. ೧೪: ಜಿಲ್ಲೆಯಲ್ಲಿ ಲಾಕ್‌ಡೌನ್ ಸಡಿಲಿಕೆಯಾದ ನಂತರ ಮೊದಲು ಆರಂಭಗೊAಡ ವೀರಾಜಪೇಟೆ ಯಲ್ಲಿನ ಬುಧವಾರ ದಿನದ ಸಂತೆಯಲ್ಲಿ ಇಂದು ಖರೀದಿಗೆ ಜನರೇ ಇಲ್ಲದೆ ವ್ಯಾಪಾರಸ್ಥರು ಪರಿತಪಿಸುವಂತಾಯಿತು.

ವೀರಾಜಪೇಟೆ ತಾಲೂಕಿನ ಗ್ರಾಮಾಂತರ ಪ್ರದೇಶದಲ್ಲಿ ರೈತರು ಕೃಷಿ ಚಟುವಟಿಕೆ ಆರಂಭಿಸಿರುವುದ ರಿಂದ ಹಾಗೂ ಲಾಕ್‌ಡೌನ್‌ನಿಂದಾಗಿ ಆರ್ಥಿಕವಾಗಿ ಸಂಕಷ್ಟದಲ್ಲಿರುವುದ ರಿಂದ ಹಾಗೂ ನಿನ್ನೆ ರಾತ್ರಿಯಿಂದ ಈ ವಿಭಾಗಕ್ಕೆ ಭಾರೀ ಮಳೆಯಾಗುತ್ತಿರುವುದರಿಂದ ಇಂದಿನ ಬುಧವಾರ ಸಂತೆಗೆ ಜನಸಂಖ್ಯೆ ವಿರಳವಾಗಿದೆ ಎಂದು ಸಂತೆಗೆ ವಿವಿಧೆಡೆಗಳಿಂದ ವ್ಯಾಪಾರಕ್ಕಾಗಿ ಬಂದ ಗ್ರಾಹಕರು ತಿಳಿಸಿದರು.

ತಾಲೂಕಿನ ಆಯ್ದ ಮಾರ್ಗಗಳಿಗೆ ಖಾಸಗಿ ಬಸ್‌ಗಳು ಸಂಚಾರ ಆರಂಭಿಸಿದ್ದರೂ ಪ್ರಯಾಣಿಕರ ಕೊರತೆಯಿಂದ ಬಸ್‌ಗಳು ಖಾಲಿ ಖಾಲಿ ಸಂಚರಿಸುವAತಾಗಿದೆ. ಸಾರಿಗೆ ಸಂಸ್ಥೆಯ ಬಸ್‌ಗಳು ಎಂದಿನAತೆ ಸಂಚಾರದಲ್ಲಿದ್ದರೂ ಪ್ರಯಾಣಿಕರೇ ಇಲ್ಲದೆ ಸಂಚರಿಸುವAತಾಗಿದೆ.

ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಸಾರಿಗೆ ಸಂಸ್ಥೆಯ ಬಸ್‌ಗಳನ್ನು ಓಡಿಸಲಾಗುವುದು ಎಂದು ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಅಂತರರಾಜ್ಯ ಸಾರಿಗೆ ಸಂಸ್ಥೆ ಬಸ್‌ಗಳ ಸಂಚಾರದ ನಿಷೇಧ ಮುಂದುವರೆದಿದೆ.