ಮಡಿಕೇರಿ, ಜು. ೧೩: ಇಂಡಿಯನ್ ಆರ್ಮಿ ಆಫೀಸರ್ ರಿಕ್ರೂಟ್‌ಮೆಂಟ್ (ಕಮೀಷನ್ಡ್) ಆಯ್ಕೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೊಡಗಿನ ಯುವತಿ ಅರೆಯಡ ಕೃತಿಕಾ ರಾಷ್ಟçಮಟ್ಟದಲ್ಲಿ ಎರಡನೇ ಸ್ಥಾನ ಗಳಿಸಿದ್ದಾಳೆ.

ಬೆಂಗಳೂರಿನ ಆರ್.ವಿ. ಕಾಲೇಜಿನಲ್ಲಿ ಇಂಜಿನಿಯರಿAಗ್ ಪದವಿ ಪಡೆದಿರುವ ಕೃತಿಕಾ ಇದೀಗ ಆರ್ಮಿ ರಿಕ್ರೂಟ್‌ಮೆಂಟ್‌ನಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದು, ಮುಂದೆ ಚೆನ್ನೆöÊಯ ಆರ್ಮಿ ಟ್ರೆöÊನಿಂಗ್ ಕ್ಯಾಂಪ್‌ನಲ್ಲಿ ತರಬೇತಿ ಪಡೆಯಲಿದ್ದಾಳೆ. ಈ ಹಿಂದೆ ಗಣರಾಜ್ಯೋತ್ಸವ ಪೆರೇಡ್‌ನಲ್ಲೂ ಭಾಗವಹಿಸಿ ಸಾಧನೆ ತೋರಿದ್ದ ಇವರು ಕಳೆದ ಏಪ್ರಿಲ್‌ನಲ್ಲಿ ಸೆಲೆಕ್ಷನ್ ಸರ್ವೀಸ್ ಬೋರ್ಡ್ (ಎಸ್‌ಎಸ್‌ಬಿ) ಮೂಲಕ ನಡೆದ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿದ್ದು, ಇದರ ಫಲಿತಾಂಶ ಇಂದು ಪ್ರಕಟವಾಗಿದೆ.

ನಾಪೋಕ್ಲು ಶ್ರೀರಾಮ ಟ್ರಸ್ಟ್ನಲ್ಲಿ ಪ್ರೌಢ ಶಿಕ್ಷಣ ಪಡೆದ ಕೃತಿಕ ೨೦೧೮ರ ಗಣರಾಜ್ಯೋತ್ಸವ ಪೆರೇಡ್‌ನಲ್ಲಿ ಕರ್ನಾಟಕ-ಗೋವಾ ಬೆಟಾಲಿಯನ್ ಅನ್ನು ಬೆಸ್ಟ್ ಕೆಡೆಟ್ ಆಗಿ ಪ್ರತಿನಿಧಿಸಿದ್ದಳು. ಈ ಸಂದರ್ಭ ವಿಯೆಟ್ನಾಂಗೆ ಎನ್‌ಸಿಸಿಯಲ್ಲಿ ಭಾರತೀಯ ರಾಯಭಾರಿಯಾಗಿಯೂ ತೆರಳಿದ್ದಳು. ಕೃತಿಕಾ ಕಕ್ಕಬೆಯ ನಿವಾಸಿ ಅರೆಯಡ ಜೀವನ್ ದೇವಯ್ಯ ಹಾಗೂ ಕಕ್ಕಬೆ ಶಾಲಾ ಶಿಕ್ಷಕಿಯಾಗಿರುವ ಬಬಿತಾ (ತಾಮನೆ: ಪೆಮ್ಮುಡಿಯಂಡ) ದಂಪತಿಯ ಪುತ್ರಿ.