ಶ್ರೀಮಂಗಲ, ಜು. ೧೩: ಪೊನ್ನಂಪೇಟೆ ಇಗ್ಗುತ್ತಪ್ಪ ಸೌಹಾರ್ದ ಸಹಕಾರ ಸಂಘದಿAದ ಸಾಲ ಪಡೆದು ಕೋವಿಡ್-೧೯ ಸೋಂಕಿಗೆ ತುತ್ತಾಗಿ ಮೃತಪಟ್ಟ ಮೂವರು ಮತ್ತು ಮತ್ತಿತರ ಕಾರಣಗಳಿಂದ ಅಕಾಲಿಕವಾಗಿ ಮರಣ ಹೊಂದಿದ ಐವರು ಸೇರಿದಂತೆ ಎಂಟು ಸದಸ್ಯರ ಒಟ್ಟು ರೂ. ೨.೫೭ ಲಕ್ಷ ಸಾಲವನ್ನು ಮನ್ನಾ ಮಾಡಲಾಗಿದ್ದು, ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ಸಾಲಗಾರರ ಕ್ಷೇಮಾಭಿವೃದ್ಧಿ ನಿಧಿಯಿಂದ ಮರಣಪಟ್ಟ ಸದಸ್ಯರಿಗೆ ಸಾಂತ್ವನ ಬಯಸಿ ಅವರ ಕುಟುಂಬಕ್ಕೆ ಸಹಾಯ ನೀಡುವ ನಿಟ್ಟಿನಲ್ಲಿ ಸಾಲಮನ್ನಾ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷ ಮದ್ರೀರ ಕೆ. ಸೋಮಯ್ಯ ತಿಳಿಸಿದರು.
ಪೊನ್ನಂಪೇಟೆಯ ಸಂಘದ ಸಭಾಂಗಣದಲ್ಲಿ
(ಮೊದಲ ಪುಟದಿಂದ) ಆಡಳಿತ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೋವಿಡ್-೧೯ ಸೋಂಕಿಗೆ ತುತ್ತಾಗಿ ಮೃತಪಟ್ಟ ಮೂವರು ಸದಸ್ಯರ ರೂ. ೧.೦೯ ಲಕ್ಷ ಹಾಗೂ ಇತರ ಕಾರಣಗಳಿಂದ ಮೃತಪಟ್ಟ ಐದು ಸದಸ್ಯರ ರೂ ೧.೪೮ ಲಕ್ಷ ಸಾಲವನ್ನು ಮನ್ನಾ ಮಾಡಲಾಗಿದೆ. ಇದು ಇಡೀ ಸಹಕಾರ ಕ್ಷೇತ್ರಕ್ಕೆ ಮಾದರಿಯಾಗಿದೆ ಎಂದು ಅವರು ಹೆಮ್ಮೆ ವ್ಯಕ್ತಪಡಿಸಿದರು.
ಮನ್ನಾ ಮಾಡಿರುವ ಸಾಲದಲ್ಲಿ ಪಿಗ್ಮಿ ಸಾಲ ಸೇರಿದಂತೆ ಇತರ ಸಾಲವೂ ಸೇರಿದ್ದು, ಸಾಲ ಪಡೆದ ಸದಸ್ಯ ಮೃತಪಟ್ಟ ನಂತರ ಆ ಸಾಲದ ಹೊರೆ ಅವರ ಕುಟುಂಬಕ್ಕೆ ಹಾಗೂ ಜಾಮೀನು ನೀಡಿದವರಿಗೆ ಆಗದಂತೆ ಸಾಲ ಪಡೆಯುವಾಗ ಕ್ಷೇಮಾಭಿವೃದ್ಧಿ ನಿಧಿಗೆ ಕಟ್ಟಿಸಿಕೊಳ್ಳುವ ಪಾಲು ಹಣದಿಂದ ಈ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ಸಾಲ ಪಡೆದು ಅಕಾಲಿಕ ಮರಣಪಟ್ಟ ಸದಸ್ಯರಿಗೆ ಕಳೆದ ವರ್ಷ ಗರಿಷ್ಠ ರೂ. ೬೦ ಸಾವಿರ ಹಾಗೂ ಪ್ರಸಕ್ತ ವರ್ಷ ರೂ. ೭೫ ಸಾವಿರ ಕ್ಷೇಮಾಭಿವೃದ್ಧಿ ನಿಧಿಯಿಂದ ಸಾಲಮನ್ನಾ ಮಾಡಲು ಅವಕಾಶ ಇರುತ್ತದೆ. ಇದರ ಮೂಲಕ ಈಗಾಗಲೇ ರೂ. ೨.೫೭ ಲಕ್ಷ ಸಾಲ ಮನ್ನಾ ಮಾಡಲಾಗಿದೆ ಎಂದು ತಿಳಿಸಿದರು.
ಕೋವಿಡ್-೧೯ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಸೇವೆ ಸಲ್ಲಿಸುತ್ತಿರುವ ಪೊನ್ನಂಪೇಟೆ ವಿಭಾಗದ ಮೂವರು ಆಶಾ ಕಾರ್ಯಕರ್ತರನ್ನು ಸಹ ಸನ್ಮಾನಿಸಿ ಗೌರವಧನವನ್ನು ಸಂಘದಿAದ ನೀಡಲಾಯಿತು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಕಡೇಮಾಡ ಭೀಮಯ್ಯ, ನಿರ್ದೇಶಕರುಗಳಾದ ಗುಮ್ಮಟ್ಟೀರ ಗಂಗಮ್ಮ, ಮಾಣಿಪಂಡ ಪಾರ್ವತಿ, ಚಿರಿಯಪಂಡ ಕಾಶಿಯಪ್ಪ, ಕಳ್ಳಿಚಂಡ ಡಾಲಿ ಕುಶಾಲಪ್ಪ, ಅರಮಣಮಾಡ ಬೋಪಯ್ಯ, ಐನಂಡ ಮಂದಣ್ಣ, ಕಳ್ಳಿಚಂಡ ಕಟ್ಟಿ ಪೂಣಚ್ಚ, ಮುದ್ದಿಯಡ ಪ್ರಕಾಶ್, ಕಬ್ಬಚ್ಚೀರ ಚಿದಂಬರ, ಕೂಕಂಡ ರಾಜ ಕಾವೇರಪ್ಪ, ಕೋದೆಂಗಡ ಎಸ್. ಸುರೇಶ್, ಕುಲ್ಲಚಂಡ ಪ್ರಭು ನಂಜಪ್ಪ ಹಾಗೂ ಸಿ.ಇ.ಓ. ಮದ್ರೀರ ಗಣಪತಿ ಹಾಜರಿದ್ದರು.