ಮಡಿಕೇರಿ, ಜು. ೧೨: ಕೊಡಗು ಜಿಲ್ಲೆಯಲ್ಲಿರುವ ಪರಿಶಿಷ್ಟ ಜಾತಿಯ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಯುವಕ ಹಾಗೂ ಯುವತಿ ಸಂಘಗಳು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನೀಡುವ ಸೌಲಭ್ಯ ಗಳನ್ನು ಹಾಗೂ ಅನುದಾನಗಳನ್ನು ಪಡೆದುಕೊಳ್ಳಲು ಸರ್ಕಾರದ ನಿಯಮದಂತೆ ಸಂಘಗಳ ಜಿಲ್ಲಾ ನೋಂದಾವಣಿ ಕಚೇರಿಯಲ್ಲಿ ಯುವಕ ಅಥವಾ ಯುವತಿ ಸಂಘವನ್ನು ನೋಂದಾಯಿಸಿ ಅಲ್ಲಿನ ನೋಂದಾಯಿತ ಪ್ರತಿಯೊಂದಿಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಡಿಕೇರಿಯ ಕಚೇರಿಯಲ್ಲಿ ತುರ್ತಾಗಿ ಸಕಾಲದಲ್ಲಿ ಸಂಘಗಳ ಹೆಸರು ನೋಂದಾಯಿಸಿಕೊಳ್ಳುವAತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಗುರುಸ್ವಾಮಿ ಅವರು ಕೋರಿದ್ದಾರೆ.