ಮಡಿಕೇರಿ, ಜು. ೧೨: ಗಂಬೂಟ್ಗೆ ನಿಗದಿತ ದರಕ್ಕಿಂತ ಹೆಚ್ಚಿನ ಹಣ ಪಡೆದ ಹಿನ್ನೆಲೆ ನಗರದ ಜನತಾಬಜಾರ್ಗೆ ರೂ. ೫ ಸಾವಿರ ದಂಡವನ್ನು ಕಾನೂನು ಮಾಪನ ಶಾಸ್ತç ಇಲಾಖೆ ವಿಧಿಸಿದೆ.
ಮೇ ೨೬ ರಂದು ಗ್ರಾಹಕರೊಬ್ಬರಿಗೆ ರೂ ೪೯೯ ಮುದ್ರಿತ ಬೆಲೆಯ ಗಂಬೂಟನ್ನು ಮಾರಾಟ ಮಾಡಲಾಗಿದೆ. ಆದರೆ ರೂ. ೬೮೦ ಹಣವನ್ನು ಗ್ರಾಹಕರಿಂದ ಪಡೆಯಲಾಗಿದೆ.
ಈ ಬಗ್ಗೆ ಇಲಾಖೆಗೆ ಗ್ರಾಹಕ ದೂರು ಸಲ್ಲಿಸಿದ್ದರು. ಅದರಂತೆ ಇಲಾಖೆಯ ಸಹಾಯಕ ನಿಯಂತ್ರಕ ಡಿ.ಆರ್.ಲಿಂಗರಾಜು ಜನತಾ ಬಜಾರ್ನ ವ್ಯವಸ್ಥಾಪಕರಿಗೆ ವಿವರಣೆ ಕೋರಿ ಪತ್ರ ಬರೆದಿದ್ದರು. ನಿಯಮ ಉಲ್ಲಂಘನೆ ಕಂಡು ಬಂದ ಹಿನ್ನೆಲೆ ರೂ. ೫ ಸಾವಿರ ದಂಡವನ್ನು ವಿಧಿಸಲಾಗಿದೆ.