ಸುAಟಿಕೊಪ್ಪ, ಜು. ೧೧: ಹಲವು ದಿನಗಳ ಬಳಿಕ ನಡೆದ ವ್ಯಾಪಾರವು ನಿರಾಸದಾಯಕವಾಗಿ ಸಾಗಿತ್ತು. ಕಳೆದ ೭೨ ದಿನಗಳ ಕಾಲ ಜಿಲ್ಲೆಯಲ್ಲಿ ವಿಧಿಸಲಾಗಿದ್ದ ಲಾಕ್‌ಡೌನ್ ಶುಕ್ರವಾರದಿಂದ ತೆರವುಗೊಂಡಿತು. ಜನಜಂಗುಳಿ ಕಂಡು ಬರಲಿಲ್ಲ. ಕೊರೊನಾ ಮುನ್ನಚ್ಚರಿಕೆಯಾಗಿ ಸುಂಟಿಕೊಪ್ಪ ಪಂಚಾಯಿತಿ ಆಡಳಿತ ಮಂಡಳಿಯವರು ಹೊರ ಊರು ಹಾಗೂ ಹೊರ ಜಿಲ್ಲೆಗಳಿಂದ ವ್ಯಾಪಾರಸ್ಥರು ಬಾರದಂತೆ ನಿರ್ಬಂಧಿಸಲಾಗಿತ್ತು. ಆದರೂ ಹೊರ ಜಿಲ್ಲೆ, ಪಕ್ಕದ ಊರಿನ ವ್ಯಾಪಾರಸ್ಥರು ಆಗಮಿಸಿ ಸಂತೆ ವ್ಯಾಪಾರ ವಹಿವಾಟಿನಲ್ಲಿ ತೊಡಗಿಸಿ ಕೊಂಡಿದ್ದರು.
ಅಸ್ಸಾಂ, ಬಿಹಾರ ಹಾಗೂ ಉತ್ತರ ಪ್ರದೇಶದಿಂದ ಆಗಮಿಸಿದ್ದ ಕಾರ್ಮಿಕರೇ ಪಟ್ಟಣದಲ್ಲಿ ಕಂಡು ಬಂದಿದ್ದು ವ್ಯಾಪಾರ ವಹಿವಾಟಿನಲ್ಲಿ ತೊಡಗಿಸಿಕೊಂಡರು.