ಸಿದ್ದಾಪುರ, ಜು. ೮: ಕುಶಾಲನಗರ ತಾಲೂಕು ಉದ್ಘಾಟನಾ ಕಾರ್ಯಕ್ರಮದಲ್ಲಿ ಶಶಿಧರ್ ಅವರನ್ನು ಹೊರಹಾಕಿದ ಘಟನೆಯನ್ನು ತೀವ್ರವಾಗಿ ಖಂಡಿಸುವುದಾಗಿ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ರಝಾಕ್, ಡಿ.ಕೆ. ಶಿವಕುಮಾರ್ ಅಭಿಮಾನಿ ಸಂಘದ ಜಿಲ್ಲಾಧ್ಯಕ್ಷ ನವೀದ್ ಖಾನ್, ಕಾರ್ಯದರ್ಶಿ ಕೆ.ಪಿ. ದಿನೇಶ್ ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಳೆದ ಎರಡು ದಶಕಗಳಿಂದ ಕುಶಾಲನಗರ ತಾಲೂಕು ರಚನೆಗೆ ಹೋರಾಟ ನಡೆಯುತ್ತಿದೆ. ತಾಲೂಕು ರಚನೆಗಾಗಿ ಹಲವು ಹೋರಾಟಗಳು ನಡೆದಿದ್ದು, ಸತತ ಹೋರಾಟದ ಫಲವಾಗಿ ತಾಲೂಕು ರಚನೆಯಾಗಿದೆ. ಆದರೇ ತಾಲೂಕು ಉದ್ಘಾಟನೆಯ ಸಂದರ್ಭ ಹೋರಾಟ ಸಮಿತಿಯ ಅಧ್ಯಕ್ಷರು ಸೇರಿದಂತೆ ಪದಾಧಿಕಾರಿಗಳನ್ನು ಆಹ್ವಾನಿಸದೇ ಇರುವುದು ಖಂಡನೀಯ. ಸಭೆಯಲ್ಲಿ ಶಾಸಕರು ಜವಾಬ್ದಾರಿಯುತವಾಗಿ ನಡೆದುಕೊಂಡಿದ್ದಾರೆ. ಯಾವುದೇ ಗೊಂದಲ ಉಂಟಾಗುತ್ತಿರಲಿಲ್ಲ. ಶಾಸಕರ ನಡೆಯನ್ನು ಖಂಡಿಸಿದ ಅವರು, ಪೊಲೀಸರು ಕೂಡ ಜನಪ್ರತಿನಿಧಿಗಳ ಕೈಗೊಂಬೆಯAತೆ ವರ್ತಿಸಿದ್ದಾರೆ ಎಂದು ಆರೋಪಿಸಿದರು.